ಹುಟ್ಟು ಹಬ್ಬದ ದಿನದಂದೇ ವಿದ್ಯಾರ್ಥಿನಿ ಬಲಿ, ಖುಷಿಯಲ್ಲಿದ್ದವರಿಗೆ ಬರಸಿಡಿಲಿನಂತೆ ಬಡಿದ ಅಘಾತಕಾರಿ ಸುದ್ದಿ

12111111111111111111
Published on

ಚಿಕ್ಕಬಳ್ಳಾಪುರ: ಹುಟ್ಟು ಹಬ್ಬ ಆಚರಣೆಗೆ ಉತ್ಸಾಹದಲ್ಲಿ ಕಾಲೇಜಿನಿಂದ ಮನೆಗೆ ಬರುತ್ತಿದ್ದ ವಿದ್ಯಾರ್ಥಿನಿಯು ಅಪಘಾತದಲ್ಲಿ ಮೃತಪಟ್ಟಿದ್ದು ಸಂಭ್ರಮದಲ್ಲಿ ಕುಟುಂಬವು ದು:ಖಕ್ಕೀಡಾಗಿದೆ.

ತಾಲೂಕಿನ ಹೊನ್ನೇನಹಳ್ಳಿಯ ರಕ್ಷಿತಾ (24) ಮೃತೆ. ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ ಪದವಿ ವ್ಯಾಸಂಗ ಮಾಡುತ್ತಿದ್ದಳು. ಕಾರಿನಲ್ಲಿ ರಾಜಧಾನಿಯಿಂದ ಸ್ವಗ್ರಾಮಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ಬೀಡಗಾನಹಳ್ಳಿ ಸಮೀಪದ ನಾಗಾರ್ಜುನ ಎಂಜಿನಿಯರಿಂಗ್​ ಕಾಲೇಜಿನ ಸಮೀಪ ವಾಹನವು ರಸ್ತೆಯ ವಿಭಜಕ್ಕೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ. ಸ್ಥಳದಲ್ಲಿಯೇ ರಕ್ಷಿತಾ ಮೃತಪಟ್ಟಿದ್ದಾಳೆ. ಇನ್ನು ಸಂಭ್ರಮದಿಂದ ಮನೆಯಲ್ಲಿ ಹುಟ್ಟು ಹಬ್ಬವನ್ನು ಆಚರಿಸಲು ಕಾಲೇಜಿನಿಂದ ಬರುವ ಮಗಳಿಗಾಗಿ ಪಾಲಕರು ಎದುರು ನೋಡುತ್ತಿದ್ದರು. ಖುಷಿಯಲ್ಲಿದ್ದವರಿಗೆ ಅಘಾತಕಾರಿ ಸುದ್ದಿ ಬರಸಿಡಿಲಿನಂತೆ ಬಡಿದಿದೆ. ಇನ್ನು ಕಾರಿನ ಚಾಲಕನಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ನಂದಿ ಗಿರಿಧಾಮ ಠಾಣೆಯ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net