ರಾಮರಾಜ್ಯದಲ್ಲಿ ಸೀತೆಯರ ಮಾನ, ಪ್ರಾಣಕ್ಕಿಲ್ಲ ರಕ್ಷಣೆ

22 GJD 2 CPIM PROTEST
Published on

ಗಜೇಂದ್ರಗಡ: ನರೇಂದ್ರ ಮೋದಿ ಅವರ ರಾಮರಾಜ್ಯದ ಆಡಳಿತದಲ್ಲಿ ಸೀತೆಯರ ಮಾನ, ಪ್ರಾಣಗಳಿಗೆ ರಕ್ಷಣೆಯೇ ಇಲ್ಲದಂತಾಗಿದೆ ಎಂದು ಸಿಪಿಐ(ಎಂ) ಪಕ್ಷದ ಜಿಲ್ಲಾ ಸಂಚಾಲಕ ಎಂ.ಎಸ್. ಹಡಪದ ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯ್ದರು.


ಮಣಿಪುರದಲ್ಲಿ ನಡೆಯುತ್ತಿರುವ ಮಹಿಳೆಯರ ಮೇಲಿನ ಅತ್ಯಾಚಾರ ಮತ್ತು ಬೆತ್ತಲೆ ಮೆರವಣಿಗೆಯಂತ ಹೀನಾಯ ಕೃತ್ಯಗಳನ್ನು ಖಂಡಿಸಿ ಶುಕ್ರವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.


ಮಾರುತಿ ಚಿಟಗಿ ಮಾತನಾಡಿ, ಬಿಜೆಪಿ ಹಾಗೂ ಸಂಘ ಪರಿವಾರ ಈ ದೇಶಕ್ಕೆ ದೊಡ್ಡ ಕ್ಯಾನ್ಸರ್ ಇದ್ದಂತೆ. ಇವರು ಇರುವಲ್ಲಿ ದೇಶದ ಜನತೆಗೆ ಭದ್ರತೆ ಇರುವುದಿಲ್ಲ ಎಂದರು.


ಕೂಡ್ಲೆಪ್ಪ ಗುಡಿಮನಿ, ಕನಕಪ್ಪ ಮಡಿವಾಳರ, ಪೀರು ರಾಠೋಡ, ಮಹೇಶ ಹಿರೇಮಠ, ಸಂಕಪ್ಪ ಕುರಟ್ಟಿ, ಬಾಲು ರಾಠೋಡ, ಬಸವರಾಜ ಹೊಸಮನಿ, ಶರಣು ಪೂಜಾರ, ಚಂದ್ರು ರಾಠೋಡ, ಮೈಬುಸಾಬ ಹವಾಲ್ದಾರ, ಶಾರದಾ ನಂಜಪ್ಪನವರ, ಅಕ್ಷತಾ ಹಡಪದ, ಬಸಮ್ಮ ಕಿತ್ತೂರ, ರೇಣವ್ವ ಗುಗಲೋತ್ತರ, ಶಾವಕ್ಕ ಗುಗಲೋತ್ತರ, ಶಿವವ್ವ ರಾಠೋಡ, ಚವಡಮ್ಮ ಯಲ್ಪು, ಲಕ್ಷ್ಮವ್ವ ಕುರಿ, ಕರಿಯಮ್ಮ ಗುರಿಕಾರ, ನಾಗರತ್ನಾ ಕಿತ್ತೂರ, ಶಶಿಕಲಾ ಹೂಗಾರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net