ಬೈಲಹೊಂಗಲ: ಚೈನೈನಲ್ಲಿ ಈಚೆಗೆ ನಡೆದ 7ನೇ ರಾಷ್ಟ್ರಮಟ್ಟದ ಸ್ಪೋರ್ಟ್ಸ್ ಪಾರ್ ಚೆಂಜ್ ಓಟದ ಸ್ಪರ್ಧೆಯಲ್ಲಿ ಬೈಲಹೊಂಗಲ ತಾಲೂಕಿನ ಹೊಳಿಹೊಸೂರ ಗ್ರಾಮದ, ಉಡುಪಿ ಸರ್ಕಾರಿ ಕ್ರೀಡಾ ಶಾಲೆ ವಿದ್ಯಾರ್ಥಿ ಈರಣ್ಣ ಬಸವರಾಜ ಹಡಪದ ದ್ವೀತಿಯ ಬಹುಮಾನ ಪಡೆದಿದ್ದಾರೆ. ವಿದ್ಯಾರ್ಥಿ ಸಾಧನೆಗೆ ಮಠಾಧೀಶರು ಹಾಗೂ ಗಣ್ಯರು ಹರ್ಷ ವ್ಯಕ್ತಪಡಿಸಿದ್ದಾರೆ.