

ಮಸ್ಕಿ: ಪಟ್ಟಣದ ಹಳೇ ಬಸ್ ನಿಲ್ದಾಣದ ಬಳಿ ಸುಗಮ ಸಂಚಾರಕ್ಕೆ ಅಡ್ಡಿಯಾಗದಂತೆ ವಾಹನ ಚಲಾಯಿಸಬೇಕೆಂದು ಸರ್ಕಾರಿ ಬಸ್ ಹಾಗೂ ದ್ವಿಚಕ್ರ ವಾಹನ ಚಾಲಕರಿಗೆ ಪೊಲೀಸರು ಸೂಚನೆ ನೀಡುವಾಗ ಕ.ಕ.ಸಾರಿಗೆ ಸಂಸ್ಥೆಯ ವಾಹನ ಚಾಲಕ ವಿಶ್ವನಾಥ ಕುಡಿದ ಅಮಲಿನಲ್ಲಿ ಸೋಮವಾರ ಪೊಲೀಸರನ್ನು ನಿಂದಿಸಿದ್ದಾರೆ.
ಮಸ್ಕಿ ಡಿಪೋದಲ್ಲಿ ಕಾರ್ಯನಿರ್ವಹಿಸುವ ವಿಶ್ವನಾಥ ಈ ಸಂದರ್ಭದಲ್ಲಿ ಕರ್ತವ್ಯದ ಮೇಲೆ ಇರಲಿಲ್ಲ. ಚಾಲಕ ವಿಶ್ವನಾಥ ಹಾಗೂ ಡಿಪೋ ಮ್ಯಾನೇಜರ್ ಆದಪ್ಪ ಅವರನ್ನು ಪಿಎಸ್‌ಐ ಮಣಿಕಂಠ ಠಾಣೆಗೆ ಕರೆಸಿ ತಿಳಿ ಹೇಳಿದ್ದಾರೆ. ನಂತರ ವಾಹನ ಚಾಲಕ ವಿಶ್ವನಾಥ ಹಳೇ ಬಸ್ ನಿಲ್ದಾಣದಲ್ಲಿ ಸಾರ್ವಜನಿಕರ ಸಮ್ಮುಖದಲ್ಲಿ ಕುಡಿದು ಮಾತನಾಡಿದ್ದು ತಪ್ಪಾಯಿತು ಎಂದು ಕ್ಷಮಾಪಣೆ ಕೇಳಿದ್ದಾರೆ.