ಕವಿಗಳಲ್ಲಿ ಸಮಭಾವ ದೃಷ್ಟಿಕೋನ ಇರಲಿ

book publish
ಮಾನ್ವಿಯಲ್ಲಿ ಹುಸೇನಿ ವಲ್ಲೂರು ರಚಿಸಿದ ‘ಹುಸೇನಿ ದ್ವಿಪದಿಗಳು’ ಕೃತಿಯನ್ನು ಗಜಲ್ ಕವಿ ಅಲ್ಲಾಗಿರಿರಾಜ್ ಭಾನುವಾರ ಬಿಡುಗಡೆ ಮಾಡಿದರು. ನೇತಾಜಿ ಶಿಕ್ಷಣ ಸಂಸ್ಥೆ ಅಧ್ಯಕ್ಷ ಕೆ.ಈ.ನರಸಿಂಹ, ಕಾರ್ಯದರ್ಶಿ ಕೆ.ವಿಜಯಲಕ್ಷ್ಮೀ, ಖಾಸಗಿ ಶಿಕ್ಷಣ ಒಕ್ಕೂಟದ ಅಧ್ಯಕ್ಷ ಎಚ್.ಶರ್ಫುದ್ದೀನ್ ಪೋತ್ನಾಳ್, ಪ್ರಮುಖರಾದ ರವಿ ಭೋವಿಕರ್, ರವಿಕುಮಾರ್ ರೀಟಾ, ಕಾಶಿನಾಥ, ದ್ಯಾವಪ್ಪ ಇದ್ದರು.
Published on

ಮಾನ್ವಿ: ಕನ್ನಡ ನಾಡಿನಲ್ಲಿ ಕನ್ನಡ ಭಾಷೆ ಬೆಳೆಯಬೇಕು ಎಂದರೆ ಪ್ರತಿಯೊಬ್ಬರೂ ಕನ್ನಡ ಸಾಹಿತ್ಯ ಪುಸ್ತಕಗಳನ್ನು ಖರೀದಿಸಿ ಓದಬೇಕು. ಇದರಿಂದ ಸಾಹಿತಿಗಳನ್ನೂ ಪ್ರೋತ್ಸಾಹಿಸಿದಂತಾಗುತ್ತದೆ ಎಂದು ಗಜಲ್ ಕವಿ ಅಲ್ಲಾಗಿರಿರಾಜ್ ಹೇಳಿದರು.

ಪಟ್ಟಣದ ನೇತಾಜಿ ಶಿಕ್ಷಣ ಸಂಸ್ಥೆ ಸಭಾಂಗಣದಲ್ಲಿ ಹುಸೇನಿ ವಲ್ಲೂರು ರಚಿಸಿದ ‘ಹುಸೇನಿ ದ್ವಿಪದಿಗಳು’ ಕೃತಿ ಬಿಡುಗಡೆಗೊಳಿಸಿ ಭಾನುವಾರ ಮಾತನಾಡಿದರು.

ಕನ್ನಡದಲ್ಲಿ ಗಜಲ್‌ಗಳನ್ನು ದ್ವಿಪದಿಗಳಲ್ಲಿ ಬರೆಯುವುದನ್ನು ತೊರಿಸಿಕೊಟ್ಟವರು ರಾಯಚೂರಿನ ಹಿರಿಯ ಸಾಹಿತಿ ಶಾಂತರಸರು. ಗಜಲ್ ಇಂದಿಗೂ ಪ್ರಸ್ತುತವಾಗಿದೆ ಎಲ್ಲರನ್ನೂ ಸಮಭಾವದಿಂದ ನೋಡುವ ದೃಷ್ಟಿಕೋನವನ್ನು ಕವಿಗಳು ಬೆಳೆಸಿಕೊಳ್ಳಬೇಕು ಎಂದರು.

ನೇತಾಜಿ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಕೆ.ವಿಜಯಲಕ್ಷ್ಮೀ, ಸಾಹಿತಿಗಳಾದ ರಮೇಶಬಾಬು ಯಾಳಗಿ, ಸಿ.ಎಸ್.ಆನಂದ, ಕವಿಗಳಾದ ಅಂಬಮ್ಮ, ಉಮರ್ ದೇವರಮನಿ, ವೇಣು, ಶಿವಶಂಕರ, ಉಷಾಜ್ಯೋತಿ,

ಮಹಾದೇವ ಪಾಟೀಲ್, ಅಭಿಷೇಕ್ ಬಳೆ, ಕೆ.ಬಿ. ನವಾಜ್, ಶಂಕುಸುತ ಮಹಾದೇವ, ಮಲ್ಲೇಶ ಭೈರವ, ಗ್ರಾಪಂ ಸದಸ್ಯೆ ನಾಗಮ್ಮ, ಡಾ.ಮೆಹಬೂಬ್ ಮದ್ಲಾಪೂರ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net