ನಮ್ಮ ಕಾಲದಲ್ಲಿ ಅವೆಲ್ಲ ಇರಲಿಲ್ಲ, ಯಾರನ್ನು ಬೇಕಿದ್ದರೂ ಕೇಳಿ ನೋಡಿ..; ಮಾಜಿ ಪ್ರಧಾನಿ ದೇವೇಗೌಡರು ಹೀಗಂದಿದ್ಯಾಕೆ?

HD Devegowda vvani
Published on

ವಿಜಯಪುರ: ಬಹಳ ಸಮಯದಿಂದ ಯಾವುದೇ ವಿಷಯವಾಗಿ ಅಷ್ಟೊಂದು ಮಾತನಾಡದೆ ಸುಮ್ಮನಿದ್ದ ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಅವರು ಇದೀಗ ತಮ್ಮ ಮೌನ ಮುರಿದಿದ್ದಾರೆ. ಮಾತ್ರವಲ್ಲದೆ, ತಮ್ಮ ಕಾಲವನ್ನು ನೆನಪಿಸಿಕೊಂಡು ಈಗಿನ ಕಾಲದ ಪರಿಸ್ಥಿತಿ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಕಮಿಷನ್ ಗಿರಾಕಿ ಎಂದು ಅವರದೇ ಪಕ್ಷದ ಉಗ್ರಪ್ಪ ಹಾಗೂ ಸಲೀಂ ಬಹಿರಂಗವಾಗಿ ಮಾತನಾಡಿರುವ ವಿಡಿಯೋ ವೈರಲ್ ಆದ ಬೆನ್ನಿಗೆ, ಈ ವಿಷಯದ ಕುರಿತು ಮಾಜಿ ಪ್ರಧಾನಿ ದೇವೇಗೌಡ ಪ್ರತಿಕ್ರಿಯಿಸಿದ್ದಾರೆ.

ವಿಜಯಪುರದಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಮಾಜಿ ಪ್ರಧಾನಿ, ಯಾರ್ಯಾರ ಕಾಲದಲ್ಲಿ, ಯಾವ ಕಾಲದಲ್ಲಿ ಈ ಪರ್ಸೆಂಟೇಜ್ ಇದೆ, ಇದರ ಬಗ್ಗೆ ನಾನು ಚರ್ಚೆ ಮಾಡುವುದಿಲ್ಲ. ಯಾರ್ಯಾರು ನೀರಾವರಿ ಮಂತ್ರಿಗಳು, ಯಾವಾಗ ಆಯ್ತು, ಏನೇನು ಆಯ್ತು, ನಾನು ಚರ್ಚೆ ಮಾಡುವುದಿಲ್ಲ ಎಂದಿದ್ದಾರೆ. ಮಾತ್ರವಲ್ಲ, ದೇವೇಗೌಡರ ಕಾಲದಲ್ಲಿ ಈ ಪರ್ಸೆಂಟೇಜ್ ವಿಷಯವೇ ಇರಲಿಲ್ಲ, ನೀವು ಯಾರನ್ನು ಬೇಕಾದರೂ ಕೇಳಿ, ನಮ್ಮ ಕಾಲದಲ್ಲಿ ಇದೆಲ್ಲ ಇರಲಿಲ್ಲ ಎಂದು ದೇವೇಗೌಡರು ಹೇಳಿದ್ದಾರೆ. ಅಲ್ಲದೆ ಬೇರೆಯವರ ಭ್ರಷ್ಟಾಚಾರದ ಬಗ್ಗೆ ನಾನು ಈಗ ವಿಶ್ಲೇಷಣೆ ಮಾಡುವುದಿಲ್ಲ ಎಂಬುದಾಗಿಯೂ ಅವರು ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net