

ಕೊಟ್ಟೂರು: ಸ್ವಚ್ಛತಾ ಅಭಿಯಾನದಡಿ ಪಟ್ಟಣದ ಎಪಿಎಂಸಿ ಆವರಣದಲ್ಲಿ ಅಂಚೆ ಕಚೇರಿ ಸಿಬ್ಬಂದಿ ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಸ್ವಚ್ಛತಾ ಕಾರ್ಯ ನಡೆಯಿತು.
ಸ್ವಚ್ಛತಾ ಅಭಿಯಾನದಲ್ಲಿ ಅಂಚೆಪಾಲಕ ಎಂ. ರಾಜಶೇಖರ, ಕೂಡ್ಲಿಗಿ ಅಂಚೆ ಪಾಲಕ ಅಂಚೆ ಕೊಟ್ರೇಶ್, ಅಂಚೆ ಸಹಾಯಕ ಗಂಡಿ ವಿರೂಪಾಕ್ಷಪ್ಪ, ಪೂರ್ಣಿಮಾ ಹಳ್ಳಿ, ಅಂಚೆ ಸಿಬ್ಬಂದಿ ಎಂ.ಕಲ್ಲೇಶಪ್ಪ, ಬಿ.ಎಂ. ರುದ್ರೇಶ ಮೂರ್ತಿ, ಶಶಿರೇಖಾ, ಸುಮಾ ಮತ್ತಿತರರಿದ್ದರು.
ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪಟ್ಟಣದ ಎಲ್ಲ ಘಟಕಗಳ ಸೇವಾಪ್ರತಿನಿಧಿಗಳು ಬಸ್ ನಿಲ್ದಾಣ ಸ್ವಚ್ಛಗೊಳಿಸಿದರು. ಯೋಜನಾಧಿಕಾರಿ ನವೀನ್ ಕುಮಾರ್ ಎಚ್.ಡಿ., ತಾಲೂಕು ಲೆಕ್ಕ ಪರಿಶೋಧಕ ಸದ್ದಾಂ, ತಾಲೂಕು ಕೃಷಿ ಅಧಿಕಾರಿ ಮಹಾಂತೇಶ, ಮೇಲ್ವಿಚಾರಕ ಶರಣಪ್ಪ, ಜ್ಞಾನವಿಕಾಸ ಸಮನ್ವಯಾಧಿಕಾರಿ ಸಾವಿತ್ರಿ, ತಾಲೂಕು ನೋಡಲ್ ಅಧಿಕಾರಿ ಶಿವರಾಜ, ಜಗದೀಶ, ಯಲ್ಲಮ್ಮ, ಗೀತಮ್ಮ ಇತರರಿದ್ದರು.
ಸಾರ್ವಜನಿಕರ ಗ್ರಂಥಾಲಯದ ಆವರಣದಲ್ಲಿ ಮಹಾತ್ಮ ಗಾಂಧಿ ಮತ್ತು ಲಾಲ್ ಬಹಾದುರ್ ಶಾಸಿ ಜನ್ಮದಿನದ ಅಂಗವಾಗಿ ಸ್ವಚ್ಛತಾ ಕಾರ್ಯವನ್ನು ಹಮ್ಮಿಕೊಳ್ಳಲಾಗಿತ್ತು. ಗ್ರಂಥಾಲಯ ಅಧಿಕಾರಿ ಮಲ್ಲಪ್ಪ ಗುಡ್ಲಾನೂರು, ಓದುಗರಾದ ಶಿವಾನಂದಪ್ಪ, ಬಸವರಾಜ, ಕೊಟ್ರೇಶ್, ಶ್ರೀನಿವಾಸ ಪತ್ತಾರ್. ಎಚ್.ಮಮತಾ ಇತರರಿದ್ದರು.