ಖನಗಾಂವದಲ್ಲಿ ನವರಾತ್ರಿ ರಂಗು

27Mamadapur1
Published on

ಸಂಗಮೇಶ ಅಂಗಡಿ ಮಮದಾಪುರ

ಗೋಕಾಕ ತಾಲೂಕಿನ ಖನಗಾಂವ ಗ್ರಾಮದ ಎಂಟೂರಿನ ಆರಾಧ್ಯ ದೇವಿ ಶ್ರೀ ಖನ್ನಮ್ಮದೇವಿ ದೇವಸ್ಥಾನದಲ್ಲಿ ನವರಾತ್ರಿ ಸಂಭ್ರಮ ಕಳೆಗಟ್ಟಿದೆ. ಸೆ.29ರಂದು ಎಂಟೂರಿನ ಗ್ರಾಮದ ಭಕ್ತರೆಲ್ಲ ಒಗ್ಗೂಡಿ ದೇವಿಯ ಪಲ್ಲಕ್ಕಿ ಉತ್ಸವ ಹಾಗೂ ರಾತ್ರಿಯಿಡಿ ಜಾಗರಣೆಯಲ್ಲಿ ಪಾಲ್ಗೊಳ್ಳುವುದು ವಿಶೇಷ.

ಗ್ರಾಮದ ಇತಿಹಾಸ: ಸುಮಾರು 14ನೇ ಶತಮಾನದ ಈ ಗ್ರಾಮ ತನ್ನದೇ ಆದ ಇತಿಹಾಸ ಹೊಂದಿದೆ. ಶಿವನಾಯಕ ಎಂಬ ಅಜ್ಜನವರು ಸುತ್ತಲಿನ ಹಳ್ಳಿಗೆಲ್ಲ ನಾಯಕರಾಗಿ ಪ್ರಜೆಗಳ ಕಷ್ಟ&ಸುಖಗಳಲ್ಲಿ ಭಾಗಿಯಾಗಿದ್ದರು. ಇಲ್ಲಿ ಇವರ ವಂಶಸ್ಥರು ರಾಜವಾಡೆ ಕಟ್ಟಿದ ಇತಿಹಾಸವಿದೆ. ಕೊಲ್ಲಾಪುರ ಮಹಾಲಕ್ಷಿ$್ಮಯ ಪರಮ ಭಕ್ತರಾಗಿದ್ದ ಶಿವನಾಯಕ ಅಜ್ಜನವರ ಮನೆಯಲ್ಲಿ ಗೋವುಗಳು ಕರುವಿಗೆ ಜನ್ಮ ನೀಡಿದಾಗ ಮಹಾಲಕ್ಷಿ$್ಮದೇವಿಗೆ ಗಿಣ್ಣು ಅರ್ಪಿಸುತ್ತಿದ್ದರು.

ಕಾಲಕ್ರಮೇಣ ಶಿವನಾಯಕ ಅಜ್ಜನವರಿಗೆ ದೈಹಿಕ ನಿಶಕ್ತಿ ಕಾಡ ತೊಡಗಿತು. ದೇವಿಯ ಬಳಿ ಅಳಲು ತೋಡಿಕೊಂಡು ಸ್ವಲ್ಪ ಹೊತ್ತು ದೇವಸ್ಥಾನದಲ್ಲಿ ನಿದ್ರೆಗೆ ಜಾರಿದರು. ನಿನ್ನ ಭಕ್ತಿಗೆ ಮೆಚ್ಚಿ ನಾನು ನಿನ್ನ ಗ್ರಾಮದ ಹೊಲದಲ್ಲಿ ಪ್ರತ್ಯವಾಗುವೆ ಎಂದು ದೇವಿಯ ವಾಣಿ ಮೊಳಗಿದ ತಕ್ಷಣ ಅಜ್ಜನವರು ಎಲ್ಲ ದೈವಿಚ್ಛೇ ತಾಯಿ ಎಂದು ಗ್ರಾಮಕ್ಕೆ ಮರಳಿದರು.

ಖನಗಾಂವ ಗ್ರಾಮಕ್ಕೆ ಕೊಲ್ಲಾಪುರ ಮಹಾಲಕ್ಷಿ$್ಮ: ನಿತ್ಯ ಬರುಡ ಆಕಳು ಆಲದ ಮರಕ್ಕೆ ಬಂದು ಹುತ್ತಕ್ಕೆ ಹಾಲು ಹುಯ್ಯುತ್ತಿತ್ತು. ಶಿವನಾಯಕ ಅಜ್ಜನವರ ಹುಡುಗ ಗೋವು ಕಾಯಲು ಹೋಗುತ್ತಿದ್ದ. ಇದನ್ನು ಗಮನಿಸಿದ ಬಾಲಕ ಶಿವನಾಯಕ ಅಜ್ಜನವರಿಗೆ ತಿಳಿಸಿದ. ಆಗ, ಶಿವನಾಯಕ ಅಜ್ಜ ತಾಯಿ ನೀನು ನೀಡಿದ ವಾಣಿಯಂತೆ ನನ್ನ ಹೊಲದಲ್ಲಿ ದರ್ಶನ ನೀಡಿ ಈ ಭೂಮಿ ಪವಿತ್ರಗೊಳಿಸಿರುವೆ ಎಂದು ಪುಟ್ಟ ದೇವಸ್ಥಾನ ನಿರ್ಮಿಸಿದರು. ಈಗ ಅದೇ ದೇವಸ್ಥಾನ ಎಂಟೂರಿನ ದೈವ ಮಂಡಳಿಯಿಂದ ಬೃಹತ್​ಮಟ್ಟದಲ್ಲಿ ಆಕರ್ಷಕ ದೇವಸ್ಥಾನ ನಿರ್ಮಾಣಗೊಂಡಿದೆ ಎನ್ನುತ್ತಾರೆ ದೇವಸ್ಥಾನ ವ್ಯವಸ್ಥಾಪಕ ದತ್ತಾತ್ರೇಯ ಕುಲಕರ್ಣಿ, ಎಂಟೂರ ದೈವ ಮಂಡಳಿ, ನಾಯಕ ಹಾಗೂ ಪೂಜೇರ ಸಮುದಾಯದವರು.

"ಖನ್ನಮ್ಮದೇವಿ ದೇವಸ್ಥಾನದಲ್ಲಿ ನವರಾತ್ರಿ ನಿಮಿತ್ತ ಪಲ್ಲಕ್ಕಿ ಉತ್ಸವ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಭಕ್ತಿರಿಗೆ ಅನ್ನಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿದೆ. ಸೆ.29ರಂದು ನಾಟಕ ಪ್ರದರ್ಶನಗೊಳ್ಳಲಿದೆ. ನವರಾತ್ರಿ ಉತ್ಸವದಲ್ಲಿ ಪಾಲ್ಗೊಂಡು ಭಕ್ತರು ದೇವಿ ಕೃಪೆಗೆ ಪಾತ್ರರಾಗಬೇಕು."

> ಸಂತೋಷ ನಾಯ್ಕ ಅಧ್ಯಕ್ಷ, ಖನ್ನಮ್ಮದೇವಿ ದೇವಸ್ಥಾನ ಕಮಿಟಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net