ಹೊನ್ನಹಳ್ಳಿಯಲ್ಲಿ ಶಾಂತಿ ಸಭೆ ನಡೆಸಿ

28 KAMPLI 01
ಕಂಪ್ಲಿಯಲ್ಲಿ ಗ್ರೇಡ್-2ತಹಸೀಲ್ದಾರ್ ಎಂ.ಆರ್.ಷಣ್ಮುಖಗೆ ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ಮನವಿ ಸಲ್ಲಿಸಿತು.ಪ್ರಮುಖರಾದ ಕರಿಯಪ್ಪ ಗುಡಿಮನಿ, ನೀಲಪ್ಪ ಪೇಂಟರ್, ಶಾಂತಪ್ಪ ಪೂಜಾರಿ, ಈ.ಧನಂಜಯ, ಯಲ್ಲಪ್ಪ ಇತರರಿದ್ದರು.
Published on

ಕಂಪ್ಲಿ: ತಾಲೂಕಿನ ಹೊನ್ನಹಳ್ಳಿ ಗ್ರಾಮದಲ್ಲಿ ಮೇ 25ರಂದು ನಡೆದ ಗುಂಪು ಘರ್ಷಣೆಗೆ ಸಂಬಂಧಿಸಿದಂತೆ ಜಿಲ್ಲಾಡಳಿತ ಶಾಂತಿ ಸಭೆ ನಡೆಸಬೇಕೆಂದು ಒತ್ತಾಯಿಸಿ ಕರ್ನಾಟಕ ಮಾದಿಗರ ರಕ್ಷಣಾ ವೇದಿಕೆ ಮಂಗಳವಾರ ಗ್ರೇಡ್-2ತಹಸೀಲ್ದಾರ್ ಎಂ.ಆರ್.ಷಣ್ಮುಖಗೆ ಮನವಿ ಸಲ್ಲಿಸಿತು.

ವೇದಿಕೆ ಅಧ್ಯಕ್ಷ ಕರಿಯಪ್ಪ ಗುಡಿಮನಿ ಮಾತನಾಡಿ, ಹುಲುಗಪ್ಪ ಆಂಜನೇಯ ದೇವಸ್ಥಾನಕ್ಕೆ ಹೋಗಿದ್ದು ಪೂಜಾರಿ ವಿಶಾಲಾಕ್ಷಿ ಸ್ವಚ್ಛ ಮಾಡುತ್ತಿರುವುದಾಗಿ ಹೇಳಿದ್ದಕ್ಕೆ ಅವರು ಹೊರ ಬಂದಿದ್ದಾರೆ. ಆದರೆ ಅಲ್ಲೇ ಇದ್ದ ಸವರ್ಣೀಯರು ದೇವಸ್ಥಾನದಲ್ಲಿ ನಿಮಗೆ ಪ್ರವೇಶವಿಲ್ಲ ಎಂದು ಹಲ್ಲೆ ಮಾಡಿದ್ದಾರೆ. ಪೂಜಾರಿ ವಿಶಾಲಾಕ್ಷಿ ಸುಳ್ಳು ದೂರು ನೀಡಿದ್ದಾರೆ ಎಂದು ಆಪಾದಿಸಿದರು.

ಜಿಲ್ಲಾಧಿಕಾರಿ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಗ್ರಾಮದಲ್ಲಿ ಶಾಂತಿ ಸಭೆ ನಡೆಸಿ ಕಾನೂನು ನೆರವು ನೀಡಬೇಕು. ಹತ್ತು ಜನರ ವಿರುದ್ಧ ದಾಖಲಾದ ಸುಳ್ಳು ದೂರಿನ ಬಗ್ಗೆ ತನಿಖೆ ನಡೆಸಿ ಬಿ ರಿಪೋರ್ಟ್ ನೀಡಬೇಕು. ಹಲ್ಲೆಗೊಳಗಾದ ಹುಲುಗಪ್ಪಗೆ ನ್ಯಾಯ ಒದಗಿಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡಬೇಕು.

ಗ್ರಾಮದಲ್ಲಿ ಅಸ್ಪಶ್ಯತೆ ತೊಲಗುವತನಕ ಮೊಹರಂ ಸೇರಿ ಯಾವುದೇ ಜಾತ್ರೆಗಳಿಗೆ ಅನುಮತಿ ನೀಡಬಾರದು ಎಂದು ಒತ್ತಾಯಿಸಿದರು. ವೇದಿಕೆ ತಾಲೂಕು ಅಧ್ಯಕ್ಷ ನೀಲಪ್ಪ ಪೇಂಟರ್, ಪದಾಧಿಕಾರಿಗಳಾದ ಈ.ಧನಂಜಯ, ಶಾಂತಪ್ಪ ಪೂಜಾರಿ, ಯಲ್ಲಪ್ಪ, ಶೇಖರ್, ಶ್ರೀನಿವಾಸ, ರಾಕೇಶ, ಕುಮಾರ್, ಮಲ್ಲಿಕಾರ್ಜುನ, ಹೊನ್ನಹಳ್ಳಿ ಕೃಷ್ಣ, ಹೊಸನೆಲ್ಲೂಡಿ ಸಣ್ಣ ಹುಲುಗಪ್ಪ, ಮಲ್ಲೇಶಪ್ಪ, ಎ.ಎಸ್.ಯಲ್ಲಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net