More

    ಅಸ್ಪೃಶ್ಯತೆ ಆಚರಣೆ ಸಹಿಸುವುದಿಲ್ಲ, ಎಸಿ ಕ್ಯಾ.ಮಹೇಶ ಮಾಲಗಿತ್ತಿ ಎಚ್ಚರಿಕೆ, ಹಾಲವರ್ತಿಯಲ್ಲಿ ಶಾಂತಿ ಸಭೆ

    ಕೊಪ್ಪಳ: ಹಾಲವರ್ತಿ ಗ್ರಾಮದಲ್ಲಿ ಹೋಟೆಲ್​, ಕ್ಷೌರದ ಅಂಗಡಿಗಳಲ್ಲಿ ಅಸ್ಪೃಶ್ಯತೆ ಆಚರಿಸಲಾಗಿದೆ. ಇಂಥ ಟನೆಗಳನ್ನು ಜಿಲ್ಲಾಡಳಿತ ಸಹಿಸುವುದಿಲ್ಲ. ಮುಂದೆ ಹೀಗಾಗದಂತೆ ನೋಡಿಕೊಳ್ಳಿ ಎಂದು ಸಹಾಯಕ ಆಯುಕ್ತ ಕ್ಯಾ.ಮಹೇಶ ಮಾಲಗಿತ್ತಿ ಹೇಳಿದರು.

    ತಾಲೂಕಿನ ಹಾಲವರ್ತಿ ಗ್ರಾಮದಲ್ಲಿ ಅಸ್ಪೃಶ್ಯತೆ ಆಚರಣೆ ಹಿನ್ನೆಲೆಯಲ್ಲಿ ಗುರುವಾರ ಭೇಟಿ ನೀಡಿ ಶಾಂತಿ ಸಭೆ ನಡೆಸಿ ಮಾತನಾಡಿದರು.

    ರಾಜ್ಯಾದ್ಯಂತ ಸಂವಿಧಾನ ಜಾಗೃತಿ ಕಾರ್ಯಕ್ರಮ ಆಚರಿಸಲಾಗುತ್ತಿದೆ. ಅದರಲ್ಲಿ ನಮ್ಮ ಜಿಲ್ಲೆ ಮುಂದಿದೆ. ವಾರದ ಹಿಂದೆ ಇದೇ ಗ್ರಾಮದಲ್ಲಿ ಸಂವಿಧಾನ ಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಿ ಮಾಡಲಾಗಿದೆ. ಬಸವಣ್ಣನವರನ್ನು ರಾಜ್ಯದ ಸಾಂಸತಿಕ ನಾಯಕನೆಂದು ಘೋಷಿಸಿದ್ದು, ೆ.17ರಂದು ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಸಾರ್ವಜನಿಕ ಸ್ಥಳಗಳು ಎಲ್ಲರಿಗೂ ಮುಕ್ತವಾಗಿರಬೇಕು. ಜನರು ಜಾಗೃತರಾಗಿ. ಸಂವಿಧಾನದಡಿ ಎಲ್ಲರೂ ಸಮಾನರು. ಮುಂದೆ ಇಂಥ ಘಟನೆ ಆಗದಂತೆ ನೋಡಿಕೊಳ್ಳಿ. ಎಲ್ಲರೂ ಕೂಡಿ ಬಾಳಿ ಎಂದರು.

    ಅಸ್ಪೃಶ್ಯತೆ ಆಚರಣೆ ಸಹಿಸುವುದಿಲ್ಲ, ಎಸಿ ಕ್ಯಾ.ಮಹೇಶ ಮಾಲಗಿತ್ತಿ ಎಚ್ಚರಿಕೆ, ಹಾಲವರ್ತಿಯಲ್ಲಿ ಶಾಂತಿ ಸಭೆ

    ಡಿವೈಎಸ್ಪಿ ಮುತ್ತಣ್ಣ ಸವರಗೋಳ ಮಾತನಾಡಿ, ಮೊದಲಿನಿಂದಲೂ ಅಸ್ಪೃಶ್ಯತೆ ಆಚರಣೆ ಇದೆ. ಸ್ವಾತಂತ್ರ್ಯ ಬಂದು 75 ವರ್ಷ ಆದ ಮೇಲೂ ಈ ರೀತಿ ಘಟನೆ ನಡೆದಿದ್ದು ದುರಂತ. ಸಣ್ಣ&ಪುಟ್ಟ ಗಲಾಟೆ ಆದಾಗ ತಕ್ಷಣ ನಮ್ಮ ಗಮನಕ್ಕೆ ತನ್ನಿ. ಎಲ್ಲರೂ ಮನುಷ್ಯರು. ತಪು$್ಪ ಮಾಡಿದವರು ಸುಧಾರಿಸಿಕೊಳ್ಳಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

    ಗ್ರಾಪಂ ಉಪಾಧ್ಯಕ್ಷ ಮಹೇಂದ್ರ ಹಾಲವರ್ತಿ, ಸದಸ್ಯ ಆನಂದ ಕಿನ್ನಾಳ, ಮುಖಂಡರಾದ ಭರಮಪ್ಪ ಗೊರವರ್​, ವೆಂಕೋಬರಡ್ಡಿ ರಡ್ಡೇರ್​ ಮಾತನಾಡಿದರು. ಗ್ರಾಮದಲ್ಲಿ ನಡೆದ ಟನೆಗೆ ವಿಷಾದ ವ್ಯಕ್ತಪಡಿಸಿದರು. ಮುಂದೆ ಹೀಗಾಗದಂತೆ ನೋಡಿಕೊಳ್ಳುವ ವಾಗ್ದಾನ ಮಾಡಿದರು. ನೆರೆದವರಿಗೆಲ್ಲ ಸಂವಿಧಾನ ಪೂರ್ವ ಪೀಠಿಕೆ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕಿ ಶಾಹೇಖಾ ಅಹ್ಮದಿ, ತಾಪಂ ಸಹಾಯಕ ನಿರ್ದೇಶಕ ಮಹೇಶ ಎಚ್​., ಸಿಪಿಐ ಸುರೇಶ, ಗ್ರಾಮದ ಮುಖಂಡರು ಇದ್ದರು.

    ಸಾಮೂಹಿಕ ತಿಂಡಿ ಸೇವನೆ, ಪೂಜೆ
    ಸಭೆ ಬಳಿಕ ಗ್ರಾಮದ ಹೋಟೆಲ್​ನಲ್ಲಿ ಎಲ್ಲರೂ ಸಾಮೂಹಿಕವಾಗಿ ತಿಂಡಿ ತಿನ್ನುವ ಮೂಲಕ ಸಾಮರಸ್ಯ ಸಾರಲಾಯಿತು. ಅಧಿಕಾರಿಗಳು ಜನರೊಡನೆ ತಿಂಡಿ ಸೇವಿಸಿದರು. ಅಲ್ಲದೇ ಗ್ರಾಮ ದೇವತೆ ದೇವಾಲಯಕ್ಕೆ ತೆರಳಿ ಪೂಜೆ, ಮಂಗಳರಾತಿ ಮಾಡಿಸಿ ಎಲ್ಲ ವರ್ಗದವರಿಗೆ ದೇವಾಲಯ ಪ್ರವೇಶಕ್ಕೆ ಅವಕಾಶ ಮಾಡಿಕೊಡಲಾಯಿತು. ಎಲ್ಲ ಸಮುದಾಯದವರು ಒಟ್ಟಿಗೆ ಸಾಮರಸ್ಯದಿಂದ ಬಾಳುವಂತೆ ಮತ್ತೊಮ್ಮೆ ಅಧಿಕಾರಿಗಳು ಸೂಚಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts