More

    ಹಾಲವರ್ತಿಗೆ ಸಚಿವ ತಂಗಡಗಿ ಭೇಟಿ

    ಕೊಪ್ಪಳ: ಯಾವುದೇ ಕಾರಣಕ್ಕೂ ಅಸ್ಪೃಶ್ಯತೆ ಆಚರಣೆ ಆಗಬಾರದು. ಅದನ್ನು ನಾವು ಸಹಿಸುವುದಿಲ್ಲ. ಎಲ್ಲ ಗ್ರಾಮಸ್ಥರು ಸಾಮರಸ್ಯದಿಂದ ಬಾಳಿ. ಗ್ರಾಮದಲ್ಲಿ ಶಾಂತಿ ಕಾಪಾಡಿ. ಪರಸ್ಪರ ಬೆದರಿಕೆ ಒಡ್ಡುವುದು ಸರಿಯಲ್ಲ ಎಂದು ಸಚಿವ ಶಿವರಾಜ ತಂಗಡಗಿ ಮನವಿ ಮಾಡಿದರು.

    ತಾಲೂಕಿನ ಹಾಲವರ್ತಿ ಗ್ರಾಮದಲ್ಲಿ ಅಸ್ಪೃಶ್ಯತೆಗೆ ಒಳಗಾದವರಿಗೆ ಶನಿವಾರ ಸಾಂತ್ವಾನ ಹೇಳಿ ಮಾತನಾಡಿದರು.

    ನಾನು ಪಜಾ ಮೀಸಲು ಕ್ಷೇತ್ರದಿಂದ ಗೆದ್ದು ಮಂತ್ರಿ ಆಗಿರುವೆ. ಅಸ್ಪೃಶ್ಯತೆ ನಡೆದ ಬಗ್ಗೆ ಗಮನಕ್ಕೆ ಬಂದ ತಕ್ಷಣ ಎಸ್ಪಿ, ಡಿಸಿಗೆ ಸರಿಪಡಿಸಲು ಸೂಚಿಸಿರುವೆ. ನಮ್ಮ ಸಮುದಾಯಕ್ಕೆ ಅನ್ಯಾಯ ಆದರೆ ಸಹಿಸುವುದಿಲ್ಲ. ಬಸವಣ್ಣ ಹಾಗೂ ಅಂಬೇಡ್ಕರ್​ ಆಶಯದಂತೆ ನಾವೆಲ್ಲ ಬದುಕಬೇಕು. ಪರಸ್ಪರ ತಾರತಮ್ಯ ಮಾಡಬೇಡಿ. ನಾವೆಲ್ಲ ಮನುಷ್ಯರು. ಯಾರೂ ಯಾರನ್ನ ಟಾರ್ಗೇಟ್​ ಮಾಡಬೇಡಿ. ಹಾಗಾದಲ್ಲಿ ಕಾನೂನು ಸುಮ್ಮನೇ ಕೂಡುವುದಿಲ್ಲ ಸೂಕ್ತ ಕ್ರಮ ಕೈಗೊಳ್ಳುತ್ತದೆ ಎಂದು ಎಚ್ಚರಿಸಿದರು.

    ನಗರಕ್ಕೆ ತೆರಳಿದಾಗ ಎಲ್ಲರೂ ಸಾರ್ವಜನಿಕ ಸ್ಥಳಗಳಲ್ಲಿ ಮುಕ್ತವಾಗಿರುತ್ತೇವೆ. ಗ್ರಾಮಗಳಲ್ಲಿ ಯಾಕೆ ತಾರತಮ್ಯ ಮಾಡುತ್ತೀರಿ ? ಅಂಬೇಡ್ಕರ್​ ಅವರು ಒಂದು ಸಮುದಾಯದವರಿಗಾಗಿ ಸಂವಿಧಾನ ರಚಿಸಿಲ್ಲ. ಎಲ್ಲರಿಗೂ ಸಮಾನತೆ ಕಲ್ಪಿಸಿದ್ದಾರೆ. ಶಿಕ್ಷಣವಂತರಾಗಿ. ಗ್ರಾಮ ಅಭಿವೃದ್ಧಿ ಚಿಂತನೆ ಮಾಡಿ. ನಮ್ಮ ಕುಲ ಕಸುಬು ಆಧರಿಸಿ ಜಾತಿ ವ್ಯವಸ್ಥೆ ಹುಟ್ಟಿಕೊಂಡಿದೆ. ಅದನ್ನು ಅರಿತು ಬಾಳಿ. ನಮ್ಮೂರ ಸಮಸ್ಯೆ ನಾವೇ ಪರಿಹರಿಸಿಕೊಳ್ಳೋಣ ಎಂದು ಸಲಹೆ ನೀಡಿದರು.

    ಹಾಲವರ್ತಿಗೆ ಸಚಿವ ತಂಗಡಗಿ ಭೇಟಿ

    ದಲಿತ ಮಹಿಳೆ ಕನಕಮ್ಮ ಮಾತನಾಡಿ, ಹಿಂದೆ ನಾವೆಲ್ಲ ಕಷ್ಟ ಅನುಭವಿಸಿದ್ದೇವೆ. ಇನ್ನು ಮುಂದೆ ಎಲ್ಲರೂ ಕೂಡಿ ಬಾಳೋಣ. ಅದಕ್ಕೆ ಎಲ್ಲರೂ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು. ಯುವಕ ಪ್ರಾಣೇಶ ಮಾತನಾಡಿ, ನಮಗೆ ಸಮಾನತೆ ಬೇಕು. ಯಾರ ವಿರುದ್ಧವೂ ನಮ್ಮ ಹೋರಾಟವಲ್ಲ. ನ್ಯಾಯಕ್ಕಾಗಿ ಹೋರಾಟ. ಮುಂದೆ ಅಸ್ಪೃಶ್ಯತೆ ಆಗದಿರಲಿ ಎಂದರು. ಮುಖಂಡರಾದ ಡಿ.ಎಚ್​.ಪೂಜಾರ, ಕರಿಯಪ್ಪ ಗುಡಿಮನಿ ದಲಿತರ ಸಮಸ್ಯೆ ಹಾಗೂ ಬೇಡಿಕೆಗಳನ್ನು ತಿಳಿಸಿದರು.

    ಜಿಪಂ ಮಾಜಿ ಅಧ್ಯಕ್ಷ ರಾಜಶೇಖರ ಹಿಟ್ನಾಳ್​, ಸದಸ್ಯ ಗೂಳಪ್ಪ ಹಲಗೇರಿ, ಗ್ರಾಪಂ ಉಪಾಧ್ಯಕ್ಷ ಮಹೇಂದ್ರ ಹಾಲವರ್ತಿ, ಪ್ರಮುಖರಾದ ಭರಮಪ್ಪ ಗೊರವರ್​, ಮುದಿಯಪ್ಪ ಆದೋನಿ, ಆನಂದ ಕಿನ್ನಾಳ, ಡಿಸಿ ನಲಿನ್​ ಅತುಲ್​, ಎಸ್ಪಿ ಯಶೋದಾ ವಂಟಗೋಡಿ, ಎಸಿ ಕ್ಯಾ.ಮಹೇಶ ಮಾಲಗಿತ್ತಿ, ತಾಪಂ ಇಒ ದುಂಡಪ್ಪ ತುರಾದಿ, ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದಶಕ ರಾಜು ತಳವಾರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts