ತುರ್ತು ಪರಿಸ್ಥಿತಿಯಲ್ಲಿ ರಕ್ತ ಅತಿ ಅವಶ್ಯ

22mkh1
Published on

ಎಂ.ಕೆ.ಹುಬ್ಬಳ್ಳಿ: ರಕ್ತದಾನ ಶ್ರೇಷ್ಠದಾನ ವಾದದ್ದು, ಸ್ವಯಂಪ್ರೇರಿತ ರಕ್ತದಾನದಿಂದ ಅಪಘಾತ ಮತ್ತು ತುರ್ತು ಆರೋಗ್ಯ ಸಮಸ್ಯೇಗಿಡಾಗುವ ಜನರ ಜೀವ ಉಳಿಸಬಹುದು. ಹಾಗಾಗಿ ಪ್ರತಿಯೊಬ್ಬರೂ ರಕ್ತದಾನ ಮಾಡಲು ಮುಂದೆ ಬರಬೇಕೆಂದು ಸ್ಥಳಿಯ ಪ್ರಾಥಮಿಕ ಆರೋಗ್ಯ

ಕೇಂದ್ರದ ವೆದ್ಯಾಧಿಕಾರಿ ಸುಮಲತಾ ವೇಲೂರ ಹೇಳಿದರು.

ಸ್ಥಳಿಯ ಪಟ್ಟಣ ಪಂಚಾಯಿತಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ಮಾ.27ರಂದು ಸ್ಥಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ, ಪಪಂ ಎಂ.ಕೆ.ಹುಬ್ಬಳ್ಳಿ ಹಾಗೂ ಜಿಲ್ಲಾ ರಕ್ತ ಭಂಡಾರ ಬೆಳಗಾವಿ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರ ಆಯೋಜಿಸಲಾಗಿದ್ದು, ಅದರ ಯಶಸ್ಸಿಗೆ ಎಲ್ಲರೂ ಶ್ರಮಿಸಬೇಕು ಎಂದರು.

ಹಿರಿಯ ಆರೋಗ್ಯ ಮೇಲ್ವಿಚಾರಕ ಗಂಗಪ್ಪ ಕಲ್ಲೊಳ್ಳಿ, ಪಪಂ ಮುಖ್ಯಾಧಿಕಾರಿ ರವಿಶಂಕರ ಮಾಸ್ತಿಹೊಳಿಮಠ, ಅಧ್ಯ ಪ್ರಕಾಶ ಕೊಡ್ಲಿ, ಉಪಾಧ್ಯ ಮಂಜುನಾಥ ಕಡಕೋಳ, ಸದಸ್ಯರಾದ ದೇಮಪ್ಪ ಬಸರಗಿ, ದೊಡ್ಡಪ್ಪ ಗಣಾಚಾರಿ, ಲಕ್ಷಿ$್ಮ ನಾಗನೂರ, ಸಾವಿತ್ರಿ ಹೊನ್ನಣ್ಣವರ, ಸುಶೀಲಾ ಗಣಾಚಾರಿ, ಪರವಿನ ನಬುವಾಲೆ, ಸಮೀರ್​ ಪಟೇಲ್​, ಮಂಗಳಾ ದೇಮಟ್ಟಿ, ಸಮುದಾಯ ಸಂಟನಾಧಿಕಾರಿ ಎ.ಎಸ್​.ಶೆಟ್ಟರ ಹಾಗೂ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net