ಸುಧಾರಣೆಗಳಿಂದ ಈಗಲೂ ವಿಶ್ವಮನ್ನಣೆ

27kudligii1
ಕೂಡ್ಲಿಗಿಯಲ್ಲಿ ಶುಕ್ರವಾರ ಬ್ಲಾಕ್ ಕಾಂಗ್ರೆಸ್‌ನಿಂದ ನಡೆದ ಮನಮೋಹನ್ ಸಿಂಗ್ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅಧ್ಯಕ್ಷ ಎಂ.ಗುರುಸಿದ್ದನ ಗೌಡ, ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ, ಪ್ರಮುಖರಾದ ನಾಗಮಣಿ ಜಿಂಕಾಲ್, ಉದಯ ಜನ್ನು, ಢಾಣಿ ರಾಘವೇಂದ್ರ, ಹಡಗಲಿ ವೀರಭದ್ರಪ್ಪ, ಸಯ್ಯದ್ ಶುಕೂರ್, ಮಾದೆಹಳ್ಳಿ ನಜೀರ್ ಇದ್ದರು.
Published on

ಕೂಡ್ಲಿಗಿ: ಭಾರತಕ್ಕೆ ಜಾಗತೀಕರಣ ಪರಿಚಯಿಸಿದ ಕೀರ್ತಿ ಡಾ.ಮನಮೋಹನ್ ಸಿಂಗ್ ಅವರಿಗೆ ಸಲ್ಲುತ್ತದೆ ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಗುರುಸಿದ್ದನ ಗೌಡ ಹೇಳಿದರು. ಪಟ್ಟಣದಲ್ಲಿ ಶುಕ್ರವಾರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಶಿಕ್ಷಣ ಹಕ್ಕು, ಮಾಹಿತಿ ಹಕ್ಕು, ಆಹಾರ ಭದ್ರತಾ ಕಾಯಿದೆ, ಭೂ ಸ್ವಾಧೀನ ಕಾಯಿದೆ, ಅರಣ್ಯ ಹಕ್ಕು ಕಾಯಿದೆ ಮತ್ತು ನರೇಗಾದಂಥ ಐತಿಹಾಸಿಕ ಸುಧಾರಣೆಗಳನ್ನು ಅವರು ಕೈಗೊಂಡಿದ್ದರು. ದೇಶದ ಆರ್ಥಿಕ ಸುಧಾರಣೆಗಳಿಗಾಗಿ ದಿಟ್ಟ ಹೆಜ್ಜೆ ಕೈಗೊಂಡಿದ್ದರು ಎಂದರು.

ಪಪಂ ಅಧ್ಯಕ್ಷ ಕಾವಲಿ ಶಿವಪ್ಪನಾಯಕ ಮಾತನಾಡಿ, ಮನಮೋಹನ್ ಸಿಂಗ್ ಆಗ ಮಾಡಿದ ಆರ್ಥಿಕ ಸುಧಾರಣೆಗಳಿಗೆ ಈಗಲೂ ವಿಶ್ವದ ಮನ್ನಣೆ ಇದೆ ಎಂದು ಸ್ಮರಿಸಿದರು. ಕೆಪಿಸಿಸಿ ಕಾರ್ಯದರ್ಶಿ ಹಿರೇಕುಂಬಳಗುಂಟೆ ಉಮೇಶ್, ಮುಖಂಡರಾದ ನಾಗಮಣಿ ಜಿಂಕಾಲ್, ಉದಯ ಜನ್ನು, ಹಡಗಲಿ ವೀರಭದ್ರಪ್ಪ, ಮಾದೇಹಳ್ಳಿ ನಜೀರ್, ಜಿಲಾನ್, ಸಯ್ಯದ್ ಶುಕೂರ್, ಢಾಣಿ ರಾಘವೇಂದ್ರ, ಮ್ಯಾಕೆ ಚಂದ್ರಪ್ಪ, ಸಿ.ಬಿ.ಸಿದ್ದೇಶ್, ಶಫಿ ಇಂಜಿನಿಯರ್, ಬಸವರಾಜ, ಬಿ.ಕೆ.ರಾಘವೇಂದ್ರ, ಸುನೀಲ್ ಗೌಡ, ಡಿ.ಎಚ್.ದುರುಗೇಶ್, ನಲ್ಲಮುತ್ತಿ ದುರುಗೇಶ್, ಮರುಳಸಿದ್ದಪ್ಪ, ವೆಂಕಟೇಶ, ಸಣ್ಣ ತಿಮ್ಮಣ್ಣ, ದಿನಕರ ಸೇರಿದಂತೆ ಅನೇಕರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net