ಅನಾಹುತ ಸಂಭವಿಸಿದರೆ ದಂಡದ ಜತೆ ಜೈಲು

ಅನಾಹುತ ಸಂಭವಿಸಿದರೆ ದಂಡದ ಜತೆ ಜೈಲು
Published on

ಕುಶಾಲನಗರ: ಪರವಾನಗಿ ಇಲ್ಲದೆ ವಾಹನ ಚಾಲನೆ ಮಾಡುವಾಗ ಅನಾಹುತ ಸಂಭವಿಸಿದರೆ ಪಾಲಕರು ದಂಡ ಕಟ್ಟುವ ಜತೆಗೆ ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ ಎಂದು ಕುಶಾಲನಗರ ಸಂಚಾರಿ ಠಾಣಾಧಿಕಾರಿ ಕಾಶಿನಾಥ್ ಬಗಲಿ ಹೇಳಿದರು.

ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಕಾಲೇಜಿನ ಸಭಾಂಗಣದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ಕಾರ್ಯಾಗಾರದಲ್ಲಿ ಮಾತನಾಡಿದರು.

18 ವರ್ಷ ತುಂಬುವ ಮೊದಲು ಯಾವುದೇ ವಾಹನ ಚಾಲನೆ ಮಾಡಬಾರದು. ಪರವಾನಗಿ, ವಾಹನ ದಾಖಲೆಗಳನ್ನು ಸರಿ ಪಡಿಸಿಕೊಳ್ಳುವುದರ ಜತೆಗೆ ನಿಯಮಗಳನ್ನು ತಿಳಿದುಕೊಳ್ಳಬೇಕು ಎಂದರು.

ಕಾಲೇಜು ಪ್ರಾಂಶುಪಾಲ ಪರಮೇಶ್ವರಪ್ಪ, ಉಪನ್ಯಾಸಕರು, ಪೊಲೀಸ್ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net