ಮಾಗಡಿ ತಾಲೂಕಿಗೆ ಶಾಶ್ವತ ನೀರಾವರಿ ಯೋಜನೆಗಳ ಅನುಷ್ಠಾನ

mgd
Published on

ಮಾಗಡಿ: ತಾಲೂಕಿಗೆ ಶಾಶ್ವತ ನೀರಾವರಿ ಮತ್ತು ಕುಡಿಯುವ ನೀರಿನ ಯೋಜನೆ ಅನುಷ್ಠಾನಕ್ಕೆ ಇದೇ ತಿಂಗಳು ಹಸಿರು ನಿಶಾನೆ ತೋರಿಸಲಾಗುವುದು ಎಂದು ಶಾಸಕ ಎಚ್​.ಸಿ.ಬಾಲಕೃಷ್ಣ ಹೇಳಿದರು.

ಪಟ್ಟಣದ ನಾಡಪ್ರಭು ಕೆಂಪೇಗೌಡ ಕೋಟೆ ಮೈದಾನದಲ್ಲಿ ಸ್ವಾತಂತ್ರೊ$್ಯತ್ಸವ ಉದ್ದೇಶಿಸಿ ಮಾತನಾಡಿದ ಅವರು, ಹೇಮಾವತಿ ನೀರು ಮಾಗಡಿಗೆ ತರಲು ಕೋಟೆ ಮೈದಾನದಲ್ಲಿ ಸಿದ್ದರಾಮಯ್ಯನವರು ಶಂಕು ಸ್ಥಾಪನೆ ನೆರವೇರಿಸಿದ್ದು, ಕಾಮಗಾರಿ ಮುಗಿದು ಮೊದಲ ಹಂತದಲ್ಲಿ ಕೆರೆಗಳನ್ನು ತುಂಬಿಸುವ ಕಾರ್ಯಕ್ಕೆ ಚಾಲನೆ ಕೊಡಲಾಗುತ್ತದೆ. ಸತ್ಯಗಾಲದಿಂದ ಕಾವೇರಿ ನೀರನ್ನು ವೈಜಗುಡ್ಡ ಕೆರೆಗಳಿಗೆ ಹರಿಸಿ ಮಾಡಬಾಳ ಹಾಗೂ ಕಸಬಾ ಹೋಬಳಿ ಕೆರೆಗಳನ್ನು ತುಂಬಿಸುವ ಯೋಜನೆ ಟೆಂಡರ್​ ಹಂತದಲ್ಲಿದೆ ಎಂದರು.

ನಮ್ಮ ನೀರಿಗೆ ಅಡ್ಡಗಟ್ಟದಿರಿ

ಎಕ್ಸ್​ಪ್ರೆಸ್​ ಲಿಂಕ್​ ಕೆನಾಲ್​ ಯೋಜನೆಯನ್ನು ತುಮಕೂರಿನ ಅಣ್ಣತಮ್ಮಂದಿರು ವಿರೋಧ ಮಾಡುತ್ತಿದ್ದಾರೆ. ಹೀಗಾಗಿ ಸ್ವಾತಂತ್ರ$್ಯ ದಿನಾಚರಣೆಯಲ್ಲೇ ಕೈ ಮುಗಿದು ಮನವಿ ಮಾಡುತ್ತಿದ್ದೇವೆ ನಮ್ಮ ಪಾಲಿನ ನೀರಿಗೆ ಅಡ್ಡಗಟ್ಟದಿರಿ ಎಂದು ಬಾಲಕೃಷ್ಣ ಕೇಳಿಕೊಂಡರು.

ತಹಸೀಲ್ದಾರ್​ ಶರತ್​ ಕುಮಾರ್​ ಮಾತನಾಡಿ, ಸ್ವಾತಂತ್ರ$್ಯ ಹೋರಾಟಗಾರರ ಶ್ರಮದಿಂದ ಭಾರತಕ್ಕೆ ಸ್ವಾತಂತ್ರ$್ಯ ಸಿಕ್ಕಿದೆ. ಅದು ಸಲೀಸಾಗಿ ಬಂದದ್ದಲ್ಲ ಎಂದರಲ್ಲದೇ ಸ್ವತಂತ್ರ ಹೋರಾಟದಲ್ಲಿ ಭಾಗವಹಿಸಿದ್ದ ಮಾಗಡಿ ತಾಲೂಕಿನವರನ್ನು ಸ್ಮರಿಸಿದರು.

ಕಸಾಪ ಮನವಿ

ಪಟ್ಟಣದ ಪ್ರಮುಖ ರಸ್ತೆ ಮತ್ತು ವೃತ್ತಗಳಿಗೆ ಮಾಗಡಿಯ ಸಾಹಿತಿಗಳು ಹಾಗೂ ಸಾಧಕರ ಹೆಸರನ್ನು ಇಡಬೇಕು ಎಂದು ಶಾಸಕ ಎಸ್​.ಸಿ.ಬಾಲಕೃಷ್ಣ ಅವರಿಗೆ ಕನ್ನಡ ಸಾಹಿತ್ಯ ಪರಿಷತ್​ ಪದಾಧಿಕಾರಿಗಳು ಮನವಿ ಸಲ್ಲಿಸಿದರು. ಇನ್ನು ಅತಿ ಹೆಚ್ಚು ಅಂಕಗಳಿಸಿದ್ದ ತಾಲೂಕಿನ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣೆ, ಪುಸ್ತಕ ಹಿಡಿ ಮೊಬೈಲ್​ ಬಿಡಿ ಅಭಿಯಾನದ ರೂವಾರಿ ಬಿಡದಿಯ ಬನ್ನಿಕುಪ್ಪೆಯ ಚಿಕ್ಕವಿರಯ್ಯ ಅವರನ್ನು ಸನ್ಮಾನಿಸಲಾಯಿತು.

ಪುರಸಭೆ ಸದಸ್ಯರಾದ ಅನಿಲ್​, ವಿಜಯ ರೂಪೇಶ್​, ಪುರಸಭೆಯ ಮುಖ್ಯಾಧಿಕಾರಿ ಶ್ರೀನಿವಾಸ್​, ಸರ್ಕಾರಿ ನೌಕರರ ಸಂದ ಅಧ್ಯರಾದ ಜಯರಾಮ್​, ೇತ್ರ ಶಿಣಾಧಿಕಾರಿ ಚಂದ್ರಶೇಖರ್​, ವೃತ ನಿರೀಕ ಗಿರಿರಾಜ್​ ಇದ್ದರು.

29ರಂದು ವಿವಿಧ ಕಾಮಗಾರಿ ಉದ್ಘಾಟನೆ

ಆ.29ರಂದು ಉಪಮುಖ್ಯಮಂತ್ರಿಗಳು ಹಾಗೂ ವಿವಿಧ ಇಲಾಖೆಯ ಸಚಿವರೊಂದಿಗೆ ಮಾಗಡಿ ತಾಲೂಕಿನ ವಿವಿಧ ಕಾಮಗಾರಿಗಳನ್ನು ಉದ್ಘಾಟಿಸಲಾಗುವುದು. ತಾಲೂಕು ಆಸ್ಪತ್ರೆ ನಿರ್ಮಾಣಕ್ಕೆ 40 ಕೋಟಿ ರೂ. ಅನುದಾನ ಬಿಡುಗಡೆಯಾಗಲಿದ್ದು, ಶಂಕುಸ್ಥಾಪನೆ ನೆರವೇರಲಿದೆ. ಮುಂದಿನ ದಿನಗಳಲ್ಲಿ ಮಾಗಡಿಗೆ ತಾಯಿ ಮಗು ಆಸ್ಪತ್ರೆಯನ್ನು ತರಲಾಗುವುದು. ತಿಪ್ಪಸಂದ್ರ&ಗುಕೂದಲು ಹೋಬಳಿ ಆಸ್ಪತ್ರೆಗಳನ್ನು ಸಮುದಾಯ ಆಸ್ಪತ್ರೆಗಳಾಗಿ ಮೇಲ್ದೆರ್ಜೆಗೇರಿಸಲಾಗುವುದು. ಹಾಗೆಯೇ

ತಾಲೂಕಿನಲ್ಲಿ ಪ್ರತಿ ತಿಂಗಳು ಉಚಿತ ಆರೋಗ್ಯ ಶಿಬಿರ ಏರ್ಪಡಿಸಲಾಗುವುದು ಎಂದು ಶಾಸಕರು ಹೇಳಿದರು.

ಮಾಗಡಿಯಲ್ಲಿ ಅಭಿವೃದ್ಧಿ ಯೋಜನೆಗಳು

42 ಶಾಲೆಗಳಲ್ಲಿ ಇಂಗ್ಲಿಷ್​ ಶಿಣ ಮತ್ತು ಮಾಗಡಿ ಪಟ್ಟಣದಲ್ಲಿ ಕೆಪಿಎಸ್​ ಶಾಲೆ ಆರಂಭ ಹಾಗೂ 6 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾಂಗಣ, ಕುವೆಂಪುರಂಗ ಮಂದಿರ ಮತ್ತು ಸ್ಪಧ್ಪಾತ್ಮಕ ಪರೀೆಗಳ ತರಬೇತಿ ಕೇಂದ್ರ, 15 ಕೋಟಿ ರೂ. ವೆಚ್ಚದಲ್ಲಿ ಗೌರಮ್ಮನ ಕೆರೆ ಅಭಿವೃದ್ಧಿ, 8 ಕೋಟಿ ರೂ, ಮಾರುಕಟ್ಟೆ ನಿರ್ಮಾಣ, ಕುದೂರು ಹೋಬಳಿ ಕೇಂದ್ರದಲ್ಲಿ 7 ಕೋಟಿ ರೂ. ವೆಚ್ಚದಲ್ಲಿ ಕ್ರೀಡಾಂಗಣ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದೆ ಎಂದು ಬಾಲಕೃಷ್ಣ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net