ಗ್ರಾಹಕರ ಅವಶ್ಯಕತೆಗಳಿಗೆ ತಕ್ಷಣ ಸ್ಪಂದನೆ

10sdp2- KARNATAKA BANK
Published on

ಸಿದ್ದಾಪುರ: ತಾಲೂಕಿನ ನಾಗರಿಕರ ಹಲವು ವರ್ಷಗಳ ಬೇಡಿಕೆಯಂತೆ ಪಟ್ಟಣದಲ್ಲಿ ಪ್ರಾರಂಭವಾದ ಕರ್ಣಾಟಕ ಬ್ಯಾಂಕ್​ನ ಸಿದ್ದಾಪುರ ಶಾಖೆಯು ಕೇವಲ ಒಂದೇ ವರ್ಷದಲ್ಲಿ ತನ್ನ ಸೇವೆಯ ಮೂಲಕ ಅತ್ಯುತ್ತಮ ಶಾಖೆಯಾಗಿ ಹೊರಹೊಮ್ಮಿದೆ ಎಂದು ತಾಲೂಕು ಅಡಕೆ ವರ್ತಕರ ಸಂಘದ ಅಧ್ಯಕ್ಷ ಆರ್.ಎಸ್. ಹೆಗಡೆ ಹರಗಿ ಹೇಳಿದರು.
ಸ್ಥಳೀಯ ಕರ್ಣಾಟಕ ಬ್ಯಾಂಕ್​ನ ಪ್ರಥಮ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ತಾಲೂಕು ಭಾರತ ಸೇವಾದಳದ ಅಧ್ಯಕ್ಷ ಕೆಕ್ಕಾರ ನಾಗರಾಜ ಭಟ್ಟ ಮಾತನಾಡಿ, ಕರ್ಣಾಟಕ ಬ್ಯಾಂಕ್ ಕೇವಲ ವ್ಯವಹಾರಕ್ಕಷ್ಟೇ ಸೀಮಿತವಾಗದೆ ಗ್ರಾಹಕರ ಅವಶ್ಯಕತೆಗಳಿಗೆ ತಕ್ಷಣ ಸ್ಪಂದಿಸುವಲ್ಲಿ ಮುಂಚೂಣಿಯಲ್ಲಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ಯಾಂಕ್​ನ ಉಡುಪಿ ವಿಭಾಗೀಯ ವ್ಯವಸ್ಥಾಪಕ ರಾಜಗೋಪಾಲ ಬಿ. ಸೇವೆಯೇ ಕರ್ಣಾಟಕ ಬ್ಯಾಂಕ್​ನ ಮೂಲ ಧ್ಯೇಯ ಎಂದರು.
ಗ್ರಾಹಕರಾದ ಶಿಕ್ಷಕಿ ನಮೃತಾ, ಟಿಎಸ್​ಎಸ್ ಶಾಖಾ ವ್ಯವಸ್ಥಾಪಕ ರಾಜೀವ ಹೆಗಡೆ, ಟಿಎಂಎಸ್ ಉಪವ್ಯವಸ್ಥಾಪಕ ಪ್ರಸನ್ನ ಭಟ್ಟ ಕೆರೆಹೊಂಡ, ಶಿಕ್ಷಣ ಇಲಾಖೆಯ ಕೆ.ಕೆ. ಗಣಪತಿ, ಪ್ರಮುಖರಾದ ಆರ್.ಎಸ್. ಭಟ್ಟ ಸ್ವಸ್ತಿಕ್, ವಿ.ಜಿ. ಕೊಳಗಿ, ಕುಶಾಲ ಅತ್ತಿಕೊಪ್ಪ, ಶ್ರೀಕಾಂತ ಹೆಗಡೆ, ಜಿ.ವಿ. ಭಟ್ಟ, ಜಿ.ಜಿ. ಶರ್ವ, ರಾಘವೇಂದ್ರ ಮಳವಳ್ಳಿ, ಎನ್.ಪಿ. ಭಟ್ಟ, ಶಾಂತಾ ಹೆಗಡೆ ಮತ್ತಿತರರು ಬ್ಯಾಂಕಿನ ಸೇವೆಯನ್ನು ಶ್ಲಾಘಿಸಿದರು.
ಬ್ಯಾಂಕ್ ಅಧಿಕಾರಿಗಳಾದ ಪ್ರದೀಪಕುಮಾರ ಕೆ.ಆರ್. ಹಾಗೂ ಶ್ರೀಶ ಮಾತನಾಡಿದರು.
ಸಿಬ್ಬಂದಿ ವಿಜೇತಾ ಹೆಗಡೆ ಪ್ರಾರ್ಥಿಸಿದರು. ಶಾಖಾ ವ್ಯವಸ್ಥಾಪಕ ಗೌರೀಶ ಹೆಗಡೆ ಸ್ವಾಗತಿಸಿ, ನಿರ್ವಹಿಸಿದರು. ಸಿಬ್ಬಂದಿ ಮಂಜುನಾಥ ಹೆಗಡೆ ಹಲಗೇರಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net