ಐಎಂಎ ಪದಾಧಿಕಾರಿಗಳ ಪದಗ್ರಹಣ

Bdk_IMA
Published on

ಕಾಸರಗೋಡು: ಐ.ಎಂ.ಎ. ಕಾಸರಗೋಡು ಘಟಕದ ವಾರ್ಷಿಕ ಮಹಾಸಭೆ ಹಾಗು ನೂತನ ಪದಾಧಿಕಾರಿಗಳ ಪದಗ್ರಹಣ ನಡೆಯಿತು. ಐಎಂಎ ರಾಜ್ಯ ಕಾರ್ಯದರ್ಶಿ ಡಾ.ಕೆ.ಶಶಿಧರನ್ ಉದ್ಘಾಟಿಸಿದರು.

ಐಎಂಎ ಜಿಲ್ಲಾ ಸಂಚಾಲಕ ಡಾ.ನಾರಾಯಣ ನಾಯ್ಕ, ಐಎಂಎ ಕಾಸರಗೋಡು ಘಟಕ ಮಹಿಳಾ ವಿಭಾಗ ಅಧ್ಯಕ್ಷೆ ಡಾ.ಮಾಯಾ ಮಲ್ಯ, ಡಾ.ರೇಖಾ ರೈ, ಡಾ.ಗಣೇಶ್ ಮಯ್ಯ, ಡಾ.ಬಿ.ಎಸ್.ರಾವ್, ಡಾ.ಅನಂತ ಕಾಮತ್ ಉಪಸ್ಥಿತರಿದ್ದರು. ಐಎಂಎ ಕಾಸರಗೋಡು ಘಟಕ ಕಾರ್ಯದರ್ಶಿ ಡಾ.ಪ್ರಜ್ಯೋತ್ ಶೆಟ್ಟಿ ವಾರ್ಷಿಕ ವರದಿ ಮಂಡಿಸಿದರು.

ಐಎಂಎ ಕಾಸರಗೋಡು ಘಟಕ ಕೋಶಾಧಿಕಾರಿ ಡಾ.ಖಾಸಿಂ ಲೆಕ್ಕಪತ್ರ ಮಂಡಿಸಿದರು. 2024-25 ನೇ ಸಾಲಿನ ನೂತನ ಅಧ್ಯಕ್ಷ ಡಾ.ಹರಿಕಿರಣ್ ಬಂಗೇರ, ಕಾರ್ಯದರ್ಶಿ ಡಾ.ಅಣ್ಣಪ್ಪ ಕಾಮತ್, ಕೋಶಾಧಿಕಾರಿ ಎಸ್.ಅನೂಪ್ ಅಧಿಕಾರ ಸ್ವೀಕರಿಸಿದರು. ಐಎಂಎ ಕಾಸರಗೋಡು ಘಟಕ ಅಧ್ಯಕ್ಷ ಡಾಜಿತೇಂದ್ರ ರೈ ಸ್ವಾಗತಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net