

ಕಾರವಾರ: ಗೋವಾದಿಂದ ದಾಖಲೆ ಇಲ್ಲದೇ ಸಾಗಿಸುತ್ತಿದ್ದ5.25 ಲಕ್ಷ ರೂ.ಗಳನ್ನು ಚಿತ್ತಾಕುಲಾ ಠಾಣೆ ಪೊಲೀಸರು ಬುಧವಾರ ವಶಕ್ಕೆ ಪಡೆದಿದ್ದಾರೆ.
ಕದ್ರಾ ಸಿಪಿಐ ಗೋವಿಂದರಾಜ ದಾಸರಿ, ಪಿಎಸ್ ಐಗಳಾದ ಅಶೋಕ ಧರೆಪ್ಪನವರ್, ರವೀಂದ್ರ ಬಿರಾದಾರ್ ಹಾಗೂ ಸಿಬ್ಬಂದಿ ಮಾಜಾಳಿ ತನಿಖಾ ಠಾಣೆಯಲ್ಲಿ ತಪಾಸಣೆ ವೇಳೆ ಗೋವಾದ ಕಾಣಕೋಣ ಭಗತವಾಡದ ಸತ್ಯೇಂದ್ರ ಬಾಳಸು ಭಗತ್ ಎಂಬುವವರು ಕಾರಿನಲ್ಲಿ ಕೊಂಡೊಯ್ಯುತ್ತಿದ್ದ ಹಣವನ್ನು ವಶಕ್ಕೆ ಪಡೆಯಲಾಗಿದೆ.
ಚುನಾವಣೆ ನೀತಿ ಸಂಹಿತೆ ಜಾರಿಗೂ ಮುಂಚೆಯೇ ಮಾಜಾಳಿ ತನಿಖಾ ಠಾಣೆಯಲ್ಲಿ ಕಾರ್ಯಾಚರಣೆ ನಡೆದಿದ್ದು, ಮಂಗಳವಾರ ಅಂಕೋಲಾದ ಸೈಮನ್ ಎಂಬುವವರು ಬೈಕ್ ನಲ್ಲಿ ಕೊಂಡೊಯ್ಯುತ್ತಿದ್ದ 5 ಲಕ್ಷ. ರೂ.ಗಳನ್ನು ವಶಕ್ಕೆ ಪಡೆಯಲಾಗಿತ್ತು. ಚಿತ್ತಾಕುಲಾ ಪಿಎಸ್ ಐ ವಿಶ್ವನಾಥ ನಿಂಗೊಳ್ಳಿ ಕಾರ್ಯಾಚರಣೆ ನಡೆಸಿದ್ದರು.