ಹೊನ್ನಾಳಿಯಲ್ಲಿ 8 ಲೀ. ಅಕ್ರಮ ಮದ್ಯ ವಶ

121
Published on

ಹೊನ್ನಾಳಿ: ಪಟ್ಟಣದ ಟಿ.ಬಿ. ವೃತ್ತದ ಸಮೀಪ ಗುರುವಾರ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ವಿವಿಧ ಬ್ರಾೃಂಡ್‌ನ 4,800 ರೂ. ಮೌಲ್ಯದ 8 ಲೀ. ಮದ್ಯ ವಶಪಡಿಸಿಕೊಳ್ಳಲಾಗಿದೆ.

ನೀತಿ ಸಂಹಿತೆ ಉಲ್ಲಂಘಿಸಿ ದ್ವಿಚಕ್ರ ವಾಹನದಲ್ಲಿ ಮದ್ಯ ಸಾಗಾಣಿಕೆ ಮಾಡುತ್ತಿರುವ ಖಚಿತ ಮಾಹಿತಿ ಮೇರೆಗೆ ಹೊನ್ನಾಳಿ ಅಬಕಾರಿ ಇನ್ಸ್‌ಪೆಕ್ಟರ್ ಬಸವಲಿಂಗಪ್ಪ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿದರು.

ಬೈಕ್ ಸವಾರ ಬೈಕ್ ಬಿಟ್ಟು ಪರಾರಿಯಾಗಿದ್ದಾನೆ. ಮದ್ಯ ಹಾಗೂ ಬೈಕ್ ವಶಪಡಿಸಿಕೊಂಡಿದ್ದು, ಕಾನೂನು ರೀತ್ಯಾ ನ್ಯಾಯಾಲಯಕ್ಕೆ ಪ್ರಥಮ ವರದಿ ಸಲ್ಲಿಸಿದ್ದೇವೆ ಎಂದು ಅಬಕಾರಿ ಇನ್ಸ್‌ಪೆಕ್ಟರ್ ಬಸವಲಿಂಗಪ್ಪ ತಿಳಿಸಿದರು.

ನೀತಿ ಸಂಹಿತೆ ಪ್ರಾರಂಭವಾದ ನಂತರ ಅವಳಿ ತಾಲೂಕಿನಲ್ಲಿ 52 ಪ್ರಕರಣ ದಾಖಲಾಗಿದ್ದು, 40 ಲೀ. ಮದ್ಯ, ಬಿಯರ್ 138 ಲೀ., ಮೂರು ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಮಾಹಿತಿ ನೀಡಿದರು.

ದಾಳಿಯಲ್ಲಿ ಸಿಬ್ಬಂದಿ ಮಂಜಾನಾಯ್ಕ, ಮಂಜು, ಶೈಲಜಾ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net