

ಕನಕಪುರ : ನಗರದಲ್ಲಿ ಕಡುಬಡವರಿಗೆ ಆಶ್ರಯ ಯೋಜನೆಯಡಿ ಮನೆ ನಿರ್ಮಾಣ ಕಾಮಗಾರಿಯಲ್ಲಿ ಅವ್ಯವಹಾರ ನಡೆದಿದ್ದು, ಇದರ ತನಿಖೆಯನ್ನು ಸಿಬಿಐ ಅಥವಾ ಇಡಿಗೆ ಒಪ್ಪಿಸುವಂತೆ ಆಗ್ರಹಿಸಿ ಶ್ರೀರಾಮಸೇನಾ ಕಾರ್ಯಕರ್ತರು, ಮುಖಂಡರು ಗ್ರೇಡ್&2 ತಹಸೀಲ್ದಾರ್ ಶಿವಕುಮಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು. ನಗರದ ತಾಲೂಕು ಕಚೇರಿ ಎದುರು ಜಮಾವಣೆಗೊಂಡ ಶ್ರೀ ರಾಮಸೇನಾ ಕಾರ್ಯಕರ್ತರು, ಮುಖಂಡರು ಕರ್ನಾಟಕ ಕೊಳಚೆ ನಿಮೂರ್ಲನೆ ಮಂಡಳಿಯ ಅವ್ಯವಹಾರಗಳ ವಿರುದ್ಧ ೂಷಣೆ ಕೂಗಿ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ದಣ ಕರ್ನಾಟಕ ಲೌಜಿಹಾದ್ ಪ್ರಮುಖ ಸುಂದರೇಶ್ ನರಗಲ್ ಮಾತನಾಡಿ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸ್ವೇತ್ರದಲ್ಲಿ 8 ವರ್ಷಗಳಿಂದ ಕರ್ನಾಟಕ ಕೊಳಚೆ ನಿಮೂರ್ಲನಾ ಮಂಡಳಿಯಿಂದ 1,881 ಫಲಾನುಭವಿಗಳಿಗೆ ಸಮರ್ಪಕವಾದ ಮನೆಗಳು ಸಿಕ್ಕಿಲ್ಲ. ಡಿಸಿಎಂ ಅವರ ಕ್ಷೇತ್ರದಲ್ಲಿ ಪ್ರಧಾನಮಂತ್ರಿ ಆವಾಸ್ ಯೋಜನೆ ನನೆಗುದಿಗೆ ಬಿದ್ದು, ಬಡವರಿಗೆ, ನಿರ್ಗತಿಕರಿಗೆ ಆಶ್ರಯ ಇಲ್ಲದಂತಾಗಿದೆ ಎಂದರು. ಬಡವರಿಗೆ ಆಶ್ರಯ ಕಲ್ಪಿಸಲು 95 ಕೋಟಿ ರೂ. ಮಂಜೂರಾಗಿದ್ದರೂ ಫಲಾನುಭವಿಗಳಿಗೆ ಯೋಜನೆ ತಲುಪಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಪ್ರಧಾನಮಂತ್ರಿ ಆವಾಸ್ ಯೋಜನೆಯಡಿ 2017&18ನೇ ಸಾಲಿನಲ್ಲಿ ಗುಡಿಸಲುಮುಕ್ತ ನಗರವನ್ನಾಗಿಸಲು ಕೋಟ್ಯಂತರ ರೂ. ಮಂಜೂರಾಗಿದೆ. ಆದರೆ, ಈ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ. ಆದ್ದರಿಂದ ಗುತ್ತಿಗೆ ಕಂಪನಿಯನ್ನು ಕಪ್ಪು ಪಟ್ಟಿಗೆ ಸೇರಿಸಬೇಕು ಎಂದ ಅವರು, 2022ರಲ್ಲಿ 772 ಮನೆಗಳು ಪೂರ್ಣಗೊಂಡಿವೆ ಎಂದು ಮಾಹಿತಿ ನೀಡಿದ್ದರು. ಈಗ ಒಟ್ಟು 1336 ಮನೆಗಳು ಪೂರ್ಣಗೊಂಡು 545 ಮನೆಗಳು ಪ್ರಗತಿಯಲ್ಲಿವೆ ಎಂದು ಸುಳ್ಳು ಮಾಹಿತಿ ನೀಡುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು. ಸೇನೆಯ ಜಿಲ್ಲಾಧ್ಯಕ್ಷ ನಾಗರ್ಜುನಗೌಡ ಮಾತನಾಡಿ, ಡಿಸಿಎಂ ಸ್ವೇತ್ರದಲ್ಲಿಯೇ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಕೊಳಚೆ ನಿಮೂರ್ಲನಾ ಮಂಡಳಿ ನಿರ್ಮಿಸಿರುವ ಮನೆಗಳಿಗೆ ನಗರಸಭೆಯಿಂದ ಎಸ್ಇಪಿ ಹಾಗೂ ಪಿಎಸ್ಪಿ ಅನುದಾನದಲ್ಲಿ 9 ಕೋಟಿ ರೂ. ಗುತ್ತಿಗೆದಾರರಿಗೆ ನೀಡಬೇಕಿದೆ. ಈ ವ್ಯವಹಾರವನ್ನು ಸಿಬಿಐ ಅಥವಾ ಇಡಿಗೆ ವಹಿಸಬೇಕು, ಸಂಬಂಧಪಟ್ಟ ಇಂಜಿನಿಯರ್ ಹಾಗೂ ಗುತ್ತಿಗೆದಾರರನ್ನು ಬಂಧಿಸಿ ತನಿಖೆಗೆ ಒಳಪಡಿಸಲು ಒತ್ತಾಯಿಸಿದರು. ಮುಖಂಡರಾದ ದುರ್ಗೇಶ, ಶರತ್, ಸುಹಾಸ್, ಶೇಖರ್, ನಾಗರ್ಜುನ್, ಸುಂದರೇಶ್ ನರಗಲ್, ಕಾರ್ಯದರ್ಶಿ ನವೀನ್, ತಾಲೂಕು ಅಧ್ಯಕ್ಷ ಮಹೇಶ್ಗೌಡ ಇದ್ದರು.