ಅಕ್ರಮ ಮರಳುಗಾರಿಕೆಗೆ ಕಾಲೇಜ್‌ ವಿದ್ಯಾರ್ಥಿ ಬಲಿ

Darshan-Gouda
Published on

ಹೊನ್ನಾವರ:ಅಕ್ರಮ ಮರಳುಗಾರಿಕೆಗೆ ವಿದ್ಯಾರ್ಥಿಯೊಬ್ಬ ಬಲಿಯಾಗಿದ್ದಾನೆ. ತಾಲೂಕಿನ ಕರಿಕುರ್ವಾದ ಶರಾವತಿ ನದಿತೀರದ ಮರಳು ಸೈಟ್‌ನಲ್ಲಿ ಮರಳು ತುಂಬುವ ಕೆಲಸಕ್ಕೆ ಹೋಗಿದ್ದ ಕಾಲೇಜ್‌ ವಿದ್ಯಾರ್ಥಿಯ ಮೇಲೆ ಲಾರಿ ಹಾಯ್ದು ಆತ ಸ್ಥಳದಲ್ಲೇ ಮೃತಪಟ್ಟ ಘಟನೆ ಶುಕ್ರವಾರ ತಡರಾತ್ರಿ ಸಂಭವಿಸಿದೆ.
ಹಡಿನಬಾಳ ಬಾನಗದ್ದೆ ದರ್ಶನ ಸುಭ್ರಾಯ ಗೌಡ (19) ಮತೃಪಟ್ಟ ವಿದ್ಯಾರ್ಥಿ. ಈತ ತನ್ನ ಗೆಳೆಯರೊಂದಿಗೆ ತಾಲೂಕಿನ ಕರಿಕುರ್ವಾದಲ್ಲಿ ಶರಾವತಿ ನದಿ ದಂಡೆಯಲ್ಲಿರುವ ಮಂಜುನಾಥ ನಾರಾಯಣ ಗೌಡ ಇವರ ಮರಳಿನ ಸೈಟ್‌ನಲ್ಲಿ ಮರಳುನ್ನು ಲಾರಿಗೆ ತುಂಬುವ ಕೆಲಸಕ್ಕೆ ಹೋಗಿದ್ದನು. ಕೆಲಸದ ಮುಗಿಸಿ ವಿಶ್ರಾಂತಿಗೆಂದು ಕುಳಿತಿದ್ದಾಗ ವೇಗವಾಗಿ ಟಿಪ್ಪರ್ ಚಲಾಯಿಸಿಕೊಂಡು ಬಂದ ಚಾಲಕ ದರ್ಶನನಿಗೆ ಎದುರಿನಿಂದ ಡಿಕ್ಕಿ ಹೊಡೆದು ಲಾರಿ ಮುಂದಕ್ಕೆ ಚಲಿಸಿ ನಿಲ್ಲಿಸಿದ್ದಾನೆ. ದರ್ಶನನಿಗೆ ತಲೆ, ಎಡಗಾಲಿಗೆ ಗಂಭೀರ ಗಾಯವಾಗಿ ಸ್ಥಳದಲ್ಲೇ ಮತೃಪಟ್ಟಿದ್ದಾನೆ. ಅಪಘಾತ ಪಡಿಸಿದ ಟಿಪ್ಪರ್ ಕೆ.ಎ-19/ಎ.ಡಿ 5898 ಇದರ ಚಾಲಕ ಅರೋಪಿ ಮಾವಿನಕುರ್ವಾದ ಕೇರಿಮನೆಯ ಮಾರುತಿ ಗೌಡನ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಮೃತನ ಜೊತೆಗಾರ ಮರಬಳ್ಳಿಯ ಸಚಿನ ಮಾದೇವ ಗೌಡ ಹೊನ್ನಾವರ ಪೋಲಿಸ್ ಠಾಣೆಯಲ್ಲಿ ದೂರು ನೀಡಿದ್ದಾನೆ.

ಎಗ್ಗಿಲ್ಲದೇ ನಡೆಯುತ್ತಿರುವ ಅಕ್ರಮ ಮರುಳು ಗಣಿ

ತಾಲೂಕಿನಲ್ಲಿ ಶರಾವತಿ ನದಿ ತೀರದಲ್ಲಿ ಅಕ್ರಮ ಮರಳುಗಣಿಗಾರಿಕೆ ನಿರಾತಂಕವಾಗಿ ನಡೆಯುತ್ತಿದ್ದು ಇದಕ್ಕೆ ಕಡಿವಾಣ ಹಾಕಬೇಕಾದ ಪೊಲೀಸ್ ಇಲಾಖೆ ಕಣ್ಣುಮುಚ್ಚಿ ಕುಳಿತಿದೆ. ಯಾರದೋ ಒತ್ತಡಕ್ಕಾಗಿಯೋ ಮತ್ತು ಕಮಿಶನ್ ಆಸೆಗಾಗಿಯೋ ಶಾಂತಿ ಸುವ್ಯವಸ್ಥೆ ಕಲ್ಪಿಸಬೇಕಾದ ಅಧಿಕಾರಿಗಳು ಕರ್ತವ್ಯ ಬ್ರಷ್ಟರಾಗಿದ್ದಾರೆಯೇ ಎಂಬ ಅನುಮಾನ ತಾಲೂಕಿನ ಜನತೆಯನ್ನು ಕಾಡುತ್ತಿದೆ. ತಾಲೂಕಿನ ಹೊಳೆಸಾಲಿನ ವಿವಿಧ ಭಾಗಗಳಲ್ಲಿ ಕಳೆದ ಕೆಲವು ತಿಂಗಳಿAದ ಅಕ್ರಮ ಮರಳು ಗಣಿಗೆರಿಕೆ ನಡೆಸಲು ಪೈಪೋಟಿಗೆ ಇಳಿದಿರುವ ಕೆಲವು ಮರಿ ಪುಡಾರಿಗಳು ಹೊಡೆದಾಟದಲ್ಲಿ ತೊಡಗಿದ್ದು ಕೆಲವು ಪ್ರಕರಣಗಳು ದಾಖಲಾಗಿವೆ. ಆದರೂ ಮತ್ತೆ ಪುನಃ ನಿರಾತಂಕವಾಗಿ ಅಕ್ರಮ ಗಣಿಗಾರಿಕೆ ನಡೆಯುತ್ತಿದೆ.

ಕಾಲೇಜಿನಲ್ಲಿ ಶೃದ್ದಾಂಜಲಿ

ಅಳ್ಳಂಕಿಯ ಸರ್ಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ದರ್ಶನ ಗೌಡ ಮರಳು ಟಿಪ್ಪರ್ ಹಾಯಿಸಿದ ಪರಿಣಾಮ ಮ್ರತಪಟ್ಟ ಸುದ್ದಿ ತಿಳಿದು ಕಾಲೇಜಿನ ವಿದ್ಯಾರ್ಥಿಗಳು, ಉಪನ್ಯಾಸಕರು, ಮತ್ತು ಕಾಲೇಜು ಅಭಿವೃದ್ಧಿ ಸಮಿತಿಯವರು ತುರ್ತು ಸಭೆ ಸೇರಿ ಮೌನ ವ್ರತ ಆಚರಿಸಿ ಶ್ರದ್ಧಾಂಜಲಿ ಸಲ್ಲಿಸಿದರು. ಪ್ರಾಂಶುಪಾಲ ಡಾ. ಜಿ.ಎಸ್.ಹೆಗಡೆ, ಹಿರಿಯ ಉಪನ್ಯಾಸಕರಾದ ಕಿಶೋರ್ ನಾಯ್ಕ, ಹರಿಶ್ಚಂದ್ರ ಮೇಸ್ತ ಮತ್ತಿತರರು ಇದ್ದರು.

ಉನ್ನತ ಮಟ್ಟದ ತನಿಖೆಗೆ ಆಗ್ರಹ

ಮರಳು ಟಿಪ್ಪರ ಹಾಯ್ದು ಮ್ರತಪಟ್ಟ ವಿದ್ಯಾರ್ಥಿ ದರ್ಶನ ಗೌಡ ಬಿಡುವಿನ ವೇಳೆಯಲ್ಲಿ ಕೂಲಿ ಮಾಡಿ ಕುಟುಂಬಕ್ಕೆ ಆಸರೆಯಾಗಿದ್ದನು. ಏಕೈಕ ಗಂಡು ಮಗನನ್ನು ಕುಟುಂಬ ಕಳೆದುಕೊಂಡು ಅನಾಥವಾಗಿದೆ. ವಿದ್ಯಾರ್ಥಿಯ ದರ್ಶನನ ಸಾವಿನ ಬಗ್ಗೆ ಉನ್ನತ ಮಟ್ಟದ ತನಿಖೆ ಆಗಬೇಕು. ಅವರ ಕುಟುಂಬಕ್ಕೆ ನ್ಯಾಯ ಸಿಗಬೇಕು. ಶರಾವತಿ ನದಿಯಲ್ಲಿನ ಅಕ್ರಮ ಮರಳು ಗಣಿಗಾರಿಕೆ ತಕ್ಷಣದಿಂದ ನಿಲ್ಲಿಸಬೇಕು. ನದಿ ತೀರಗಳಲ್ಲಿ ಅಕ್ರಮ ಮರಳು ಗಣಿಗಾರಿಕೆಯಲ್ಲಿ ತೊಡಗಿಕೊಂಡಿರುವ ಹೊರ ರಾಜ್ಯದ ರ‍್ಮಿಕರನ್ನು ಗುರುತಿಸಿ ಅವರವರ ರಾಜ್ಯಗಳಿಗೆ ಮರಳಿಕಳಿಸುವ ಕೆಲಸ ತಾಲ್ಲೂಕು ಆಡಳಿತ ಮಾಡಬೇಕು ಕಾಲೇಜು ಅಭಿವೃದ್ಧಿ ಸಮಿತಿಯ ಚಂದ್ರಕಾಂತ ಕೊಚರೇಕರ ಆಗ್ರಹಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net