21 ನಿವೇಶನಗಳಿಗೆ ಅಕ್ರಮ ಖಾತೆ

Online Fraud in Kodagu
Published on

ರಾಮನಗರ: ಡಿಜಿಟಿಲ್ ಸಹಿಯನ್ನು ಅಕ್ರಮವಾಗಿ ಬಳಕೆ ಮಾಡುವ ಪ್ರಕರಣ ಜಿಲ್ಲೆಯಲ್ಲಿ ಮತ್ತೆ ಬೆಳಕಿಗೆ ಬಂದಿದೆ. ಜಿಲ್ಲೆಯ ಹಾರೋಹಳ್ಳಿ ತಾಲೂಕು ಕೊಟ್ಟಗಾಳು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗೊಲ್ಲಹಳ್ಳಿ ಗ್ರಾಮದಲ್ಲಿ ಪಿಡಿಒ ಡಿಜಿಟಲ್ ಸಹಿಯನ್ನು ಬಳಸದೆ 21 ನಿವೇಶನಗಳನ್ನು ಖಾತೆ ಮಾಡಿಕೊಟ್ಟಿರುವ ಪ್ರಕರಣ ಸಿಇಎನ್ ಠಾಣೆಯಲ್ಲಿ ದಾಖಲಾಗಿದೆ.

ಗೊಲ್ಲಹಳ್ಳಿ ಗ್ರಾಮದ 21 ಮಂದಿಗೆ ಫಾರ್ಮ್ 11 ಬಿ ಖಾತೆ ನೀಡಲಾಗಿದ್ದು, ಇದಕ್ಕೆ ಸ್ಥಳೀಯ ಪಿಡಿಒ ಡಿಜಿಟಲ್ ಸಹಿ ಮಾಡದೆ, ಜಿಲ್ಲಾಧಿಕಾರಿಗಳಿಂದ ಭೂ ಪರಿವರ್ತನೆ ಆಗದೆ, ಸಕ್ಷಮ ಪ್ರಾಧಿಕಾರದಿಂದ ನಕ್ಷೆ ಅನುಮೋದನೆ ಪಡೆಯದೆ ಖಾತೆ ಮಾಡಿಕೊಡಲಾಗಿದೆ. ಅಷ್ಟೂ ನಿವೇಶನಗಳಿಗೆ ಸಂಬಂಧಿಸಿದ ಯಾವುದೇ ದಾಖಲೆ ಆಗಲಿ, ಡಿಮಾಂಡ್ ರಿಜಿಸ್ಟ್ರರ್‌ನಲ್ಲಿ ದಾಖಲು ಮಾಡದಿರುವುದು ಪರಿಶೀಲನೆ ವೇಳೆ ಕಂಡು ಬಂದಿದೆ.

ಅಲ್ಲದೆ, ಅಷ್ಟೂ ಖಾತೆಗಳನ್ನು ಬೇರೆ ಎಲ್ಲೋ ಖಾತೆ ಮಾಡಿಕೊಟ್ಟಿರುವ ಸಾಧ್ಯತೆ ಇದ್ದು, ಪ್ರಕರಣದ ತನಿಖೆ ನಡೆಸುವಂತೆ ಕೊಟ್ಟಗಾಳು ಗ್ರಾಪಂ ಪಿಡಿಒ ಶಿವರಾಮೇಗೌಡ, ರಾಮನಗರ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net