ಅಕ್ರಮ ಮರಂ ಸಾಗಾಣಿಕೆ ತಡೆಯಿರಿ

15LNG01
ಲಿಂಗಸುಗೂರು ಎಸಿ ಕಚೇರಿ ಎಫ್‌ಡಿಸಿ ಅಮರೇಶಗೆ ಭಾರತೀಯ ಪ್ರಜಾ ಸಂಘದ ಮುಖಂಡರು ಮನವಿ ಸಲ್ಲಿಸಿದರು. ಸಂಘದ ತಾಲೂಕಾಧ್ಯಕ್ಷ ಹೊಳೆಯಪ್ಪ ಕುಣಿಕಲ್ಲೂರು, ಉಪಾಧ್ಯಕ್ಷ ವೆಂಕಟೇಶ ಕಾರಲಕುಂಟಿ, ಮಸಿಸ್ವಾಮಿ ಗುಡದನಾಳ, ಮೌನೇಶ ಹೊನ್ನಳ್ಳಿ, ಅಮರೇಶ, ಚನ್ನಬಸವ, ದೇವರಾಜ ಇದ್ದರು.
Published on

ಲಿಂಗಸುಗೂರು: ಮಸ್ಕಿ ತಾಲೂಕಿನ ಉಸ್ಕಿಹಾಳ ಸೀಮಾದ ಸರ್ಕಾರಿ ಗಾಂವ್ ಠಾಣಾ ಜಾಗದಲ್ಲಿ ನಡೆಯುತ್ತಿರುವ ಅಕ್ರಮ ಮರಂ ಸಾಗಾಣಿಕೆಯನ್ನು ತಡೆಯಲು ಒತ್ತಾಯಿಸಿ ಭಾರತೀಯ ಪ್ರಜಾ ಸಂಘದ ಸದಸ್ಯರು ಎಸಿ ಕಚೇರಿ ಎಫ್‌ಡಿಸಿ ಅಮರೇಶಗೆ ಗುರುವಾರ ಮನವಿ ಸಲ್ಲಿಸಿದರು.

ಉಸ್ಕಿಹಾಳ ಸರ್ವೇ ನಂ.10ರ 39.12 ಎಕರೆ ಕಾಯ್ದಿರಿಸಿದ ಸರ್ಕಾರಿ ಜಮೀನಿನ ಸುತ್ತಮುತ್ತಲಿನ ಹೊಲಗಳ ಮಾಲೀಕರು ಒತ್ತುವರಿ ಮಾಡಿಕೊಂಡಿದ್ದಾರೆ. ಅಲ್ಲಿ ಅಕ್ರಮವಾಗಿ ಮರಂ ಸಾಗಣೆ ಮಾಡಲಾಗುತ್ತಿದೆ. ಇದರ ಬಗ್ಗೆ ಮಸ್ಕಿ ತಹಸೀಲ್ದಾರ್ ಅವರ ಗಮನಕ್ಕೆ ತಂದರೂ ಸ್ಪಂದಿಸುತ್ತಿಲ್ಲ.

ದೂರು ನೀಡಲು ಕಚೇರಿಗೆ ತೆರಳಿದರೂ ಬೇಜವಾಬ್ದಾರಿ ಉತ್ತರ ನೀಡುತ್ತಿದ್ದಾರೆ. ಕೂಡಲೇ ತಹಸೀಲ್ದಾರ್ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net