ಅಕ್ರಮ ಮದ್ಯ ವಶ, ಇಬ್ಬರ ಬಂಧನ

madya vasha
ಬಂಧಿತ ಆರೋಪಿಗಳೊಂದಿಗೆ ಅಬಕಾರಿ ದಳ ಸಿಬ್ಬಂದಿ.
Published on

ಕಾಸರಗೋಡು: ಅಬಕಾರಿ ಬದಿಯಡ್ಕ ರೇಂಜ್ ಅಧಿಕಾರಿಗಳು ಬದಿಯಡ್ಕ ಸನಿಹದ ಮೂಕಂಪಾರೆ, ಚೆನ್ನಾರಕಟ್ಟೆ ಪ್ರದೇಶದಲ್ಲಿ ನಡೆಸಿದ ಎರಡು ಪ್ರತ್ಯೇಕ ಕಾರ್ಯಾಚರಣೆಯಲ್ಲಿ 92 ಟೆಟ್ರಾ ಪ್ಯಾಕೆಟ್‌ನಲ್ಲಿ ಸಂಗ್ರಹಿಸಿಡಲಾಗಿದ್ದ 16.56 ಲೀ. ಕರ್ನಾಟಕ ನಿರ್ಮಿತ ಮದ್ಯ ವಶಪಡಿಸಿಕೊಳ್ಳಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಇಬ್ಬರನ್ನು ಬಂಧಿಸಿದ್ದಾರೆ. ನೀರ್ಚಾಲು ಕಿನ್ನಿಮಾಣಿ ನಿವಾಸಿ ಮನು ಪಿ.ಎಸ್ ಹಾಗೂ ಕಳಯತ್ತೋಡಿ ನಿವಾಸಿ ಹೇಮಚಂದ್ರ ಬಂಧಿತರು.

ಮೂಕಂಪಾರೆಯಲ್ಲಿ ನಡೆಸಿದ ಕಾರ್ಯಾಚರಣೆಯಲ್ಲಿ 60 ಟೆಟ್ರಾ ಪ್ಯಾಕೆಟ್‌ನೊಂದಿಗೆ ಮನು ಪಿ.ಎಸ್ ಹಾಗೂ ಚೆನ್ನಾರಕಟ್ಟೆಯಲ್ಲಿ 32 ಪ್ಯಾಕೆಟ್‌ಗಳೊಂದಿಗೆ ಹೇಮಚಂದ್ರನನ್ನು ಬಂಧಿಸಲಾಗಿದೆ. ಬದಿಯಡ್ಕ ರೇಂಜ್ ಪ್ರಿವೆಂಟಿವ್ ಅಧಿಕಾರಿ ಮಂಜುನಾಥ ಆಳ್ವ ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net