3.13 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯ ವಶಕ್ಕೆ

Crime
Published on

ಕಾರವಾರ: ಸ್ವಿಪ್ಟ್ ಕಾರಿನಲ್ಲಿ ಸಾಗಿಸುತ್ತಿದ್ದ 3.13 ಲಕ್ಷ ರೂ. ಮೌಲ್ಯದ ಅಕ್ರಮ ಮದ್ಯವನ್ನು ಮಂಗಳೂರಿನ ಅಬಕಾರಿ ವಿಶೇಷ ದಳದ ಅಧಿಕಾರಿಗಳು ಕಾರವಾರದ ಮಾಜಾಳಿ ತನಿಖಾ ಠಾಣೆಯಲ್ಲಿ ಸೋಮವಾರ ವಶಕ್ಕೆ ಪಡೆದಿದ್ದಾರೆ. 33.840 ಲೀಟರ್ ಅಕ್ರಮ ಮದ್ಯ ವಶಕ್ಕೆ ಪಡೆಯಲಾಗಿದೆ. ಆನಂದ ಜಾಧವ ಹಾಗೂ ರಾಜನ್ ಕೋಯರ ಪಾಟೀಲ ಎಂಬುವವರನ್ನು ಬಂಧಿಸಲಾಗಿದೆ. ಮಂಗಳೂರು ವಿಭಾಗದ ಅಬಕಾರಿ ಜಂಟಿ ಆಯುಕ್ತ ನಾಗರಾಜಪ್ಪ, ಉಪ ಆಯುಕ್ತೆ ವನಜಾಕ್ಷಿ ಎಂ. ನಿರ್ದೇಶನದಂತೆ ಉಪ ಅಧೀಕ್ಷಕ ಮಲ್ಲಿಕಾರ್ಜುನ ರೆಡ್ಡಿ ಅವರ ಮಾರ್ಗದರ್ಶನದಲ್ಲಿ ಪರಿಶೀಲನೆ ನಡೆಸಲಾಗಿತ್ತು. ಅಬಕಾರಿ ಸಬ್ ಇನ್​ಸ್ಪೆಕ್ಟರ್ ಪಿ.ಕೆ. ಹಳದನಕರ ಪ್ರಕರಣ ದಾಖಲಿಸಿದ್ದಾರೆ. ಅಧಿಕಾರಿಗಳಾದ ಉಷಾ ಯಂಡಿಗೇರಿ, ಬಸವರಾಜ, ದಯಾನಂದ, ಸಿಬ್ಬಂದಿ, ಶ್ರೀಧರ ಚೌಗಲೆ , ಎಂ.ಕೆ. ನಾಯ್ಕ ಪರಿಶೀಲನೆ ಸಂದರ್ಭದಲ್ಲಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net