ಹೂನೂರು ಗ್ರಾಪಂ ನರೇಗಾದಲ್ಲಿ ಅಕ್ರಮ

ಸುಮಿತ್ರಪ್ಪ ವಂದಾಲಿ
ಸುಮಿತ್ರಪ್ಪ ವಂದಾಲಿ
Published on

ಮುದಗಲ್: ಸಮೀಪದ ಹೂನೂರು ಗ್ರಾಪಂ ನರೇಗಾ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂದು ಸಾಮಾಜಿಕ ಕಾರ್ಯಕರ್ತ ಸುಮಿತ್ರಪ್ಪ ವಂದಾಲಿ ಆರೋಪಿಸಿದರು.

ಪಟ್ಟಣದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. 2022 ರಿಂದ 25ರವರೆಗೆ ನರೇಗಾ ಯೋಜನೆಯಡಿ ಕೈಗೊಂಡ ಹೈಟೆಕ್ ಶೌಚಗೃಹ, ಶಾಲಾ ಕಾಂಪೌಂಡ್, ಸಸಿಗಳ ನೆಡುತೋಪು, ದನದ ಶೆಡ್ ಕಾಮಗಾರಿಗಳಲ್ಲಿ ಗ್ರಾಪಂ ಅಧಿಕಾರಿಗಳಿಂದ ಭ್ರಷ್ಟಾಚಾರ ನಡೆದಿದೆ. ಸರ್ಕಾರಿ ಹಿಪ್ರಾ ಶಾಲಾ ಕಾಂಪೌಂಡ್ ಕಾಮಗಾರಿ ಪೂರ್ಣಗೊಳಿಸದೆ 4.5 ಲಕ್ಷ ರೂ. ವಂಚಿಸಿದ್ದಾರೆ. ಹೈಟೆಕ್ ಶೌಚಗೃಹ ಕಾಮಗಾರಿಗೆ 5.10 ಲಕ್ಷ ರೂ. ಬಿಲ್ ಮಾಡಲಾಗಿದೆ. ವಂದಾಲಿಯಿಂದ ಕನಸಾವಿವರೆಗೆ ರಸ್ತೆ ಬದಿ ಸಸಿಗಳನ್ನು ನೆಡದೆ 97 ಸಾವಿರ ರೂ. ಬಿಲ್ ಎತ್ತುವಳಿ ಮಾಡಲಾಗಿದೆ. ಹೊಲಿಗೆ ಯಂತ್ರಗಳನ್ನು ಅಂಗವಿಕಲರಿಗೆ ನೀಡದೆ ಕುಟುಂಬದವರಿಗೆ ಕೊಟ್ಟಿದ್ದಾರೆ. ಈ ಕುರಿತು ಲೋಕಾಯುಕ್ತ ಇಲಾಖೆಗೆ ದೂರು ನೀಡಲಾಗಿದೆ. ಕೂಡಲೇ ಜಿಪಂ ಸಿಇಒ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಪ್ರಮುಖರಾದ ಸೋಮಶೇಖರಪ್ಪ, ಛತ್ರಪ್ಪ ಗುರಿಕಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net