ಮೀಸಲು ವರ್ಗ ಆಯ್ಕೆಯಲ್ಲಿ ಅವ್ಯವಹಾರ

PROTEST
ಪ್ರತಿಷ್ಟಿತ ಶಾಲೆಗಳಲ್ಲಿ ಮೀಸಲು ವರ್ಗ ವಿದ್ಯಾರ್ಥಿಗಳ ಆಯ್ಕೆಯಲ್ಲಾದ ಅವ್ಯವಹಾರ ಸರಿಪಡಿಸುವಂತೆ ಒತ್ತಾಯಿಸಿ ದಲಿತ ಸಂಘಟನಾ ಸಮಿತಿ ಭೀಮ ಘರ್ಜನೆ ತಾಲೂಕು ಸಮಿತಿ ಸದಸ್ಯರು ಗಂಗಾವತಿ ಸಮಾಜ ಕಲ್ಯಾಣ ಇಲಾಖೆ ಎದುರು ಬುಧವಾರ ಪ್ರತಿಭಟನೆ ನಡೆಸಿದರು. ಸಂಚಾಲಕ ಸುರೇಶ ಮಾನಳ್ಳಿ, ಪದಾಧಿಕಾರಿಗಳಾದ ಸಿ.ಕೆ.ಮರಿಸ್ವಾಮಿ, ಮಂಜುನಾಥ ಆರ್ತಿ, ಸುರೇಶ ಮಾಳಿಮನಿ, ಹನುಮಂತ ಮೂಳೆ ಇತರರಿದ್ದರು.
Published on

ಗಂಗಾವತಿ: ಪ್ರತಿಷ್ಟಿತ ಶಾಲೆಗಳಲ್ಲಿ ಮೀಸಲು ವರ್ಗ ವಿದ್ಯಾರ್ಥಿಗಳ ಆಯ್ಕೆಯಲ್ಲಿ ಅವ್ಯವಹಾರವಾಗಿದ್ದು, ಆಯ್ಕೆ ಪ್ರಕ್ರಿಯೆಗೆ ಮರು ಪರೀಕ್ಷೆ ನಡೆಸುವಂತೆ ಒತ್ತಾಯಿಸಿ ದಲಿತ ಸಂಘಟನಾ ಸಮಿತಿ ಭೀಮ ಘರ್ಜನೆ ತಾಲೂಕು ಸಮಿತಿ ಸದಸ್ಯರು ನಗರದಲ್ಲಿ ಪ್ರತಿಭಟನೆ ನಡೆಸಿ ಸಮಾಜ ಕಲ್ಯಾಣ ಇಲಾಖೆಗೆ ಬುಧವಾರ ಮನವಿ ಸಲ್ಲಿಸಿದರು.

ಸಂಚಾಲಕ ಸುರೇಶ ಮಾನಳ್ಳಿ ಮಾತನಾಡಿ, ಪ್ರತಿಷ್ಟಿತ ಶಾಲೆಗಳಿಗೆ ಎಸ್‌ಸಿ ವಿದ್ಯಾರ್ಥಿಗಳ ಆಯ್ಕೆಗಾಗಿ ಸಮಾಜ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ಪರೀಕ್ಷೆಯಲ್ಲಿ ಗೊಂದಲವಾಗಿದ್ದು, ಆಯ್ಕೆಪಟ್ಟಿಯಲ್ಲೂ ಗೋಲ್‌ಮಾಲ್ ಆಗಿದೆ. ಪರೀಕ್ಷೆ ಹಾಲ್ ಟಿಕೆಟ್‌ನಲ್ಲಿ ವಿದ್ಯಾರ್ಥಿಗಳ ಭಾವಚಿತ್ರವಿರಲಿಲ್ಲ, ಪ್ರಶ್ನೆ ಪತ್ರಿಕೆ ಮತ್ತು ಓಎಂಆರ್ ಶೀಟ್ ವಿತರಣೆಯಲ್ಲೂ ಲೋಪವಾಗಿದೆ. ಲಿತಾಂಶ ಪ್ರಕಟಣೆ ಪಟ್ಟಿ ಬಗ್ಗೆಯೂ ಅನುಮಾನವಿದ್ದು, ಅಧಿಕಾರಿಗಳಲ್ಲಿ ಸಮರ್ಪಕ ಉತ್ತರವಿಲ್ಲ. ಈ ವಿಚಾರ ಜಿಲ್ಲಾಡಳಿತ ಗಂಭೀರವಾಗಿ ಪರಿಗಣಿಸಬೇಕಿದ್ದು, ಮರು ಪರೀಕ್ಷೆ ಮೂಲಕ ಅನ್ಯಾಯ ಸರಿಪಡಿಸಬೇಕು. 6ನೇ ತರಗತಿ ಪ್ರವೇಶಾತಿಗೆ ಹೆಚ್ಚಿನ ಶಾಲೆಗಳಲ್ಲಿ ಅವಕಾಶ ಕಲ್ಪಿಸುವಂತೆ ಒತ್ತಾಯಿಸಿದರು.

ಸಂಘಟನೆ ಪದಾಧಿಕಾರಿಗಳಾದ ಸಿ.ಕೆ.ಮರಿಸ್ವಾಮಿ, ಮಂಜುನಾಥ ಆರ್ತಿ, ಸುರೇಶ ಮಾಳಿಮನಿ, ಮುತ್ತು ಛಲವಾದಿ, ಗೋಪಿ ಹಂಚಿನಾಳ, ಯಮನಪ್ಪ, ಹನುಮಂತ ಮೂಳೆ, ರವಿ ಚನ್ನಳ್ಳಿ, ಶಂಕ್ರಮ್ಮ, ಗಂಗಮ್ಮ, ಸವಿತಾ, ಲಕ್ಷ್ಮೀ, ಆನಂದ, ಎಸ್.ನಾರಾಯಣ, ಹುಸೇನಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net