

ತುಮಕೂರು: ಮಕ್ಕಳ ಅಕ್ರಮ ಮಾರಾಟ ಹಾಗೂ ಅಪಹರಣ ಜಾಲವನ್ನು ಭೇದಿಸುವಲ್ಲಿ ಜಿಲ್ಲೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಒಂದು ವರ್ಷದ ಮಗು ಕದ್ದು ಮಾರಾಟ ಮಾಡಿದ ಪ್ರಕರಣ ಬೆನ್ನುಹತ್ತಿದ ಪೊಲೀಸರು 9 ಮಕ್ಕಳ ಅಕ್ರಮ ಮಾರಾಟ ಪ್ರಕರಣಗಳನ್ನು ಬಯಲಿಗೆಳೆದಿದ್ದಾರೆ. ಈ ಪ್ರಕರಣಗಳಲ್ಲಿ 5 ಮಕ್ಕಳನ್ನು ರಸಿರುವ ಪೊಲೀಸರು 4 ಮಕ್ಕಳನ್ನು ದತ್ತು ಸ್ವೀಕಾರ ಕೇಂದ್ರದಲ್ಲಿರಿಸಿದ್ದಾರೆ.
ಈ ಜಾಲದ ಕಿಂಗ್ಪಿನ್ ಖಾಸಗಿ ನರ್ಸಿಂಗ್ ಕಾಲೇಜ ವ್ಯವಸ್ಥಾಪಕ, ತುಮಕೂರಿನ ಅಶೋಕ್ನಗರ ನಿವಾಸಿ ಯು.ಡಿ.ಮಹೇಶ್ (39), ಚಿಕ್ಕನಾಯಕನಹಳ್ಳಿ ತಾಲೂಕಿನ ಗೂಬೆಹಳ್ಳಿ ಪಿಎಚ್ಸಿ ಾರ್ಮಸಿಸ್ಟ್ ಮಹಬೂಬ್ ಷರ್ೀ (52), ದೊಡ್ಡೇರಿ ಪ್ರಾಥಮಿಕ ಆರೋಗ್ಯ ಕೇಂದ್ರದ ಗುತ್ತಿಗೆ ಆಧಾರದಲ್ಲಿ ಸ್ಟ್ಾ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿರುವ ಎನ್.ಪೂರ್ಣಿಮಾ (39), ಶಿರಾ ನಗರದ ಸ್ಟ್ಾ ನರ್ಸ್ ಸೌಜನ್ಯ (48) ಸೇರಿ 7 ಮಂದಿಯ ತಂಡವನ್ನು ಗುಬ್ಬಿ ಪೊಲೀಸರು ಬಂಧಿಸಿದ್ದಾರೆ.
ಇನ್ನೂ ಗುಬ್ಬಿ ಚನ್ನಬಸವೇಶ್ವರ ದೇವಾಲಯದ ಬಳಿ 11 ತಿಂಗಳ ಮಗು ಅಪಹರಣಕ್ಕೆ ಸಹಕರಿಸಿದ ಗುಬ್ಬಿ ತಾಲೂಕಿನ ಬಿಕ್ಕೆಗುಡ್ಡದ ಜಾತ್ರೆಗಳಲ್ಲಿ ಟ್ಯಾಟೋ ಹಾಕುವ, ಕೆ.ಎನ್.ರಾಮಕೃಷ್ಣಪ್ಪ (53), ತುಮಕೂರಿನ ಭಾರತಿನಗರದ ಜಾತ್ರೆಗಳಲ್ಲಿ ಟ್ಯಾಟೋ ಹಾಕುವ ಹನುಮಂತರಾಜು (45) ಹಾಗೂ ಮಗುವನ್ನು ಖರೀದಿಸಿದ್ದ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನ ಬೆಳ್ಳೂರಿನ ಆಟೋ ಚಾಲಕ ಮುಬಾರಕ್ ಪಾಷ (44) ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳಿಂದ ಮಾರುತಿ 800 ಕಾರು, 50 ಸಾವಿರ ನಗದು, 4 ಮೊಬೈಲ್ ೋನ್ಗಳನ್ನು ವಶಕ್ಕೆ ಪಡೆಯಲಾಗಿದೆ.
ಕಿಡ್ನಾಪ್ ಜಾಲ ಬೆನ್ನಟ್ಟಿದ ಪೊಲೀಸರು: ಗುಬ್ಬಿ ಚನ್ನಬಸವೇಶ್ವರ ದೇವಾಲಯದ ಮುಂದೆ ಟೆಂಟ್ನಲ್ಲಿ ಮಲಗಿದ್ದ ಅಲೆಮಾರಿ ಕುಟುಂಬದ 11 ತಿಂಗಳ ಮಗು ಕಳ್ಳತನ ಪ್ರಕರಣ ಬೆನ್ನಟ್ಟಿದ ಪೊಲೀಸರಿಗೆ ಜಿಲ್ಲೆಯಲ್ಲಿ ವ್ಯವಸ್ಥಿತವಾಗಿ ಆರೋಗ್ಯ ಇಲಾಖೆಯ ಸಿಬ್ಬಂದಿ ಶಾಮೀಲಿನಲ್ಲಿ ನಡೆಯುತ್ತಿದ್ದ ಅಕ್ರಮ ಮಕ್ಕಳ ಮಾರಾಟ ಜಾಲದ ಜಾಡು ಪತ್ತೆಯಾಗಿದೆ.
ವಿವಾಹೇತರ ಜೋಡಿ ಟಾರ್ಗೆಟ್: ಅವಿವಾಹಿತ ಗರ್ಭಧರಿಸಿದ ಮಹಿಳೆಯರು ಹಾಗೂ ಅಕ್ರಮ ಸಂಬಂಧದಿಂದ ಗರ್ಭದರಿಸಿದವರನ್ನು ಟಾರ್ಗೆಟ್ ಮಾಡುತ್ತಿದ್ದ ಆರೋಪಿ ಮಹೇಶ್ ಅವರುಗಳಿಂದ ಮಕ್ಕಳನ್ನು ಪಡೆದು ಮಕ್ಕಳಿಲ್ಲದ ದಂಪತಿಗಳಿಗೆ 2 ರಿಂದ 3 ಲಕ್ಷ ರೂ.,ಗಳಿಗೆ ಮಾರಾಟ ಮಾಡುತ್ತಿದ್ದದು ಪತ್ತೆಯಾಗಿದೆ.
ಾರ್ಮಸಿಸ್ಟ್ ಮೆಹಬೂಬ್ ಷರ್ೀ ತನ್ನ ಹೆಂಡತಿ ಹೆಸರಿನಲ್ಲಿ ಖಾಸಗಿ ಆಸ್ಪತ್ರೆಯಲ್ಲಿ ವ್ಯವಸ್ಥಿತವಾಗಿ ಮಕ್ಕಳ ಮಾರಾಟ ಮಾಡುತ್ತಿದ್ದ ತಂಡ ಸುಳ್ಳು ದಾಖಲಾತಿಗಳನ್ನು ಸೃಷ್ಟಿಸಿ ಜನನ ದೃಢೀಕರಣ ಪತ್ರವನ್ನು ನೀಡಿರುವುದು ತನಿಖೆ ವೇಳೆ ಪತ್ತೆಯಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ವಿ.ಅಶೋಕ್ ಬುಧವಾರ ಸುದ್ದಿಗೋಷ್ಠಿಯಲ್ಲಿ ಪ್ರಕರಣದ ಮಾಹಿತಿ ನೀಡಿದರು.
ಗುಬ್ಬಿ ಠಾಣೆಯಲ್ಲಿ ಐಪಿಸಿ 363, 370(4) ಹಾಗೂ ಜೆಜೆ ಆಕ್ಟ್ 80,81ರಡಿ ಪ್ರಕರಣ ದಾಖಲಿಸಲಾಗಿದೆ.
ವಿಶೇಷ ತಂಡ
ಗುಬ್ಬಿ ಪಟ್ಟಣದ 11 ತಿಂಗಳ ಮಗು ಅಪಹರಣ ಪ್ರಕರಣ ಪತ್ತೆಗೆ ನೇಮಿಸಿದ್ದ ಶಿರಾ ಡಿವೈಎಸ್ಪಿ ಬಿ.ಕೆ.ಶೇಖರ್ ನೇತೃತ್ವದ ಗುಬ್ಬಿ ಸಿಪಿಐ ವಿ.ಗೋಪಿನಾಥ್, ಪಿಎಸ್ಐ ಜಿ.ಕೆ.ಸುನಿಲ್ ಕುಮಾರ್, ಪೇದೆಗಳಾದ ನವೀನ್ ಕುಮಾರ್, ವಿಜಯ್ ಕುಮಾರ್, ಮಧುಸೂದನ್, ಜಿಲ್ಲಾ ಪೊಲೀಸ್ ಕಚೇರಿಯ ನರಸಿಂಹರಾಜು, ದುಶ್ಯಂತ್ರನ್ನೊಳಗೊಂಡ ವಿಶೇಷ ತಂಡವು ಈ ಅಕ್ರಮ ಮಕ್ಕಳ ಮಾರಾಟ ಜಾಲವನ್ನು ಪತ್ತೆಹಚ್ಚಿದೆ. ಈ ತಂಡದ ಕಾರ್ಯಕ್ಕೆ ಬಹುಮಾನ ಘೋಷಿಸಿರುವ ಎಸ್ಪಿ ಅಶೋಕ್ ತಂಡದ ಕಾರ್ಯವನ್ನು ಶ್ಲಾಘಿಸಿದ್ದಾರೆ.