ನಾಡ ಬಂದೂಕು ತಯಾರಕರ ಬಂಧನ

25KWR10
Published on

ವಿಜಯವಾಣಿ ಸುದ್ದಿಜಾಲ ದಾಂಡೇಲಿ
ಅಕ್ರಮವಾಗಿ ನಾಡಬಂದೂಕು ತಯಾರಿಸಿ ಮಾರುತ್ತಿದ್ದ ನಾಲ್ವರನ್ನು ದಾಂಡೇಲಿ ಗ್ರಾಮೀಣ ಠಾಣೆ ಪೊಲೀಸರು ಶನಿವಾರ ಬಂಧಿಸಿದ್ದು, ಅವರಿಂದ ಬಂದೂಕು ಹಾಗೂ ಸಲಕರಣೆಗಳನ್ನು ವಶಕ್ಕೆ ಪಡೆದಿದ್ದಾರೆ.
ದಾಂಡೇಲಿ ವಿಟ್ನಾಳದ ಇಸ್ಮಾಯಿಲ್ ಅಲಿ ಕುಟ್ಟಿ, ಬಸವರಾಜ ಚಂದ್ರಕಾಂತ ಹೆಸರಂಬಿ, ಗಾಂವಠಾಣದ ಸುರೇಶ ಚೌಡು ಪಾರದೆ, ಜೊಯಿಡಾ ಬಿರೋಡಾದ ರವಿದಾಸ ತಂದೆ ವಾಸು ಆಚಾರಿ ಬಂಽತರು. ಅವರಿಂದ 5 ಸಿಂಗಲ್ ಬ್ಯಾರಲ್ ನಾಡ ಬಂದೂಕು, 1 ಡಬ್ಬಲ್ ಬ್ಯಾರಲ್ ನಾಡ ಬಂದೂಕು, 1 ಏರ್ ಗನ್, 4 ಕಾಡತೂಸ, 1 ಬೈಕ್, ಕಬ್ಬಿಣದ ಸರಳು ಇತ್ಯಾದಿ ಸಾಮಗ್ರಿಗಳನ್ನು ವಶಕ್ಕೆ ಪಡೆಯಲಾಗಿದೆ.
ಡಿವೈಎಸ್‌ಪಿ ಶಿವಾನಂದ ಕಟಗಿ ಮಾರ್ಗದರ್ಶನದಲ್ಲಿ ಸಿಪಿಐ ಬಿ.ಎಸ್ ಲೋಕಾಪುರ, ಪಿಎಸ್‌ಐಗಳಾದ ಕೃಷ್ಣಗೌಡಾ ಎನ್.
ಅರಕೇರಿ, ಶಿವಾನಂದ ನಾವದಗಿ, ಎಎಸ್‌ಐಗಳಾದ ಮಹಾವೀರ ಕಾಂಬಳೆ, ವೆಂಕಟೇಶ ತಗ್ಗಿನ, ಬಸವರಾಜ ಒಕ್ಕುಂದ ಸಿಬ್ಬಂದಿ ದಯಾನಂದ ಲೊಂಡಿ, ಗಂಗಾಧರ ಹನಕಹಳ್ಳಿ, ಮಂಜುನಾಥ ಶೆಟ್ಟಿ, ರೆವಪ್ಪ ಬಂಕಾಪುರ, ರವಿ ಚೌಹಾಣ, ಪ್ರದೀಪ ವರ್ದಿ, ಅಶೋಕ, ನಾಗನಗೌಡ ತಿಪ್ಪನಗೌಡ್ರು, ದಶರಥ ಲಕ್ಮಾಪುರ ಕಾರ್ಯಾಚರಣೆ ನಡೆಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net