

ನೆಲ್ಯಾಡಿ: ಜಾಗಕ್ಕೆ ಅಕ್ರಮವಾಗಿ ಪ್ರವೇಶ ಮಾಡಿ ಅವಾಚ್ಯ ಶಬ್ದಗಳಿಂದ ಬೈದು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ನೆಲ್ಯಾಡಿ ಗ್ರಾಮದ ಕಳಪ್ಪುರಯಿಲ್ ನಿವಾಸಿ ಆನಿ ಎಂ.ವಿ.ಮ್ಯಾಥ್ಯು ಎಂಬುವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಕೇಸು ದಾಖಲಾಗಿದೆ. ಸೆ.28ರಂದು ಕಳಪ್ಪುರಯಿಲ್ ಎಂಬಲ್ಲಿರುವ ಜಾಗದಲ್ಲಿ ಕಲ್ಲು ಕಂಬಗಳನ್ನು ಹಾಕಿ ಬೇಲಿ ಮಾಡುತ್ತಿದ್ದಾಗ ತಾರನಾಥ, ಪದ್ಮನಾಭ, ವಸಂತ ಸಾಲಿಯಾನ್ ಅಕ್ರಮ ಪ್ರವೇಶ ಮಾಡಿದ್ದು, ಈ ಬಗ್ಗೆ ಆಕ್ಷೇಪಿಸಿದಾಗ ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆಯೊಡ್ಡಿದ್ದಾರೆ. ಈ ಪೈಕಿ ವಸಂತ ಸಾಲಿಯಾನ್ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿ ದೂರು ನೀಡಿದ್ದಾರೆ.