ಕಾರ್ಖಾನೆಗಳ ತ್ಯಾಜ್ಯ ಅಕ್ರಮ ವಿಲೇವಾರಿ

Published on

ಗೌರಿಬಿದನೂರು: ನಗರ ಸೇರಿ ಗ್ರಾಮೀಣ ಭಾಗದ ಪೋಷಕ ಕಾಲುವೆ, ಕುಂಟೆ, ಉತ್ತರ ಪಿನಾಕಿನಿ ನದಿ ಪಾತ್ರಗಳಲ್ಲಿ ಕಾರ್ಖಾನೆಗಳ ಕಲುಷಿತ ನೀರನ್ನು ಅಕ್ರಮವಾಗಿ ವಿಲೇವಾರಿ ಮಾಡಲಾಗುತ್ತಿದೆ. ಇದರಿಂದ ಕೃಷಿ ಚಟುವಟಿಕೆಗೆ ತೊಂದರೆಯಾಗುತ್ತಿದೆ. ಈ ಬಗ್ಗೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯಿಸಿ ರೈತ ಸಂಘ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿದೆ. ಕೆಲ ದಿನಗಳಿಂದ ಮಳೆ ಬರುತ್ತಿದ್ದು, ಉತ್ತರ ಪಿನಾಕಿನಿ ನದಿ ಹರಿವು ಹೆಚ್ಚಾಗಿದೆ. ಇದನ್ನೇ ದುರುಪಯೋಗ ಮಾಡಿಕೊಂಡು ಕಾರ್ಖಾನೆ ತ್ಯಾಜ್ಯ ನೀರನ್ನು ರಾತ್ರಿವೇಳೆ ಪೋಷಕ ಕಾಲುವೆಗಳಿಗೆ ಹರಿಸುತ್ತಿದ್ದಾರೆ. ಇದರಿಂದ ಕೆರೆ ಹಾಗೂ ರೈತರ ಜಮೀನುಗಳಿಗೆ ಕಲುಷಿತ ನೀರು ಸಂಗ್ರಹವಾಗುತ್ತಿದ್ದು,

ಬೆಳೆ ಹಾಳಾಗುವ ಆತಂಕದಲ್ಲಿ ರೈತರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net