ಪದವಿ ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ

ILK 23-1
Published on

ಇಳಕಲ್ಲ: ರಾಜ್ಯ ಸರ್ಕಾರ ಹಾಗೂ ಕಾಲೇಜು ಶಿಕ್ಷಣ ಇಲಾಖೆ ನಿರ್ದೇಶನದಂತೆ ಇಲ್ಲಿನ ಸರ್ಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಬಿಎ ಹಾಗೂ ಬಿಕಾಂ ಅಂತಿಮ ವರ್ಗದ ವಿದ್ಯಾರ್ಥಿಗಳಿಗೆ ಸೋಮವಾರ ಕೋವಿಡ್ ಟೆಸ್ಟ್ ಮಾಡಿಸಲಾಯಿತು.

ಮಹಾವಿದ್ಯಾಲಯದ ಸಭಾಭವನದಲ್ಲಿ ಆರೋಗ್ಯ ಇಲಾಖೆ ಸಹಯೋಗದಲ್ಲಿ ನಗರದ ಪ್ರಾಥಮಿಕ ಆರೋಗ್ಯ ಚಿಕಿತ್ಸಾ ಕೇಂದ್ರದ ಕಿರಿಯ ಪ್ರಯೋಗಾಲಯದ ತಜ್ಞರಾದ ಪ್ರವೀಣ ಚವಾಣ್, ಶಂಕರಲಿಂಗ ತಿಮ್ಮಾಪುರ ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿ ಕಾಲೇಜಿನ 80 ವಿದ್ಯಾರ್ಥಿಗಳ ಗಂಟಲು ದ್ರವ ಪಡೆದರು. ಒಂದು ವಾರದಲ್ಲಿ ಅವರವರ ಮೊಬೈಲ್‌ಗೆ ಟೆಸ್ಟ್ ಮಾಹಿತಿ ಬರಲಿದೆ ಎಂದು ಪ್ರಾಚಾರ್ಯ ನಾಗರಾಜ ಮುದಗಲ್ಲ ಹೇಳಿದರು.

ದೈಹಿಕ ನಿರ್ದೇಶಕ ನೀಲಪ್ಪ ಕುರಿ, ವಿದ್ಯಾವತಿ ಗೋಟೂರ, ರಮೇಶ ಕೊನಗುಂದ, ಶೋಭಾ ಕಟಗಿ ಸೇರಿದಂತೆ ಮತ್ತಿತರರು ಇದ್ದರು.

EndFragment

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net