ಐಐಐಟಿ-ಬಿ 24ನೇ ಘಟಿಕೋತ್ಸವ; 343 ವಿದ್ಯಾರ್ಥಿಗಳಿಗೆ ಪದವಿ, 11 ಜನರಿಗೆ ಪಿಎಚ್​ಡಿ ಪ್ರದಾನ

IITB
Published on

ಬೆಂಗಳೂರು: ಇಂಟರ್​ನ್ಯಾಷನಲ್​ ಇನ್​ಸ್ಟ್ಟಿಟ್ಯೂಟ್​ ಆಫ್ ಇನ್ಫಮೇರ್ಷನ್​ ಟೆಕ್ನಾಲಜಿ ಬೆಂಗಳೂರು (ಐಐಐಟಿ-ಬಿ) ಸಂಸ್ಥೆಯ 24ನೇ ಘಟಿಕೋತ್ಸವ ಭಾನುವಾರ ಎಲೆಕ್ಟ್ರಾನಿಕ್ಸ್​ ಸಿಟಿ ಕ್ಯಾಂಪಸ್​ನಲ್ಲಿ ನಡೆಯಿತು.

ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಪ್ರೊ. ಅಭಯ್​ ಕರಂಡಿಕರ್​, ಐಐಐಟಿ-ಬಿ ಆಡಳಿತ ಮಂಡಳಿ ಅಧ್ಯಕ್ಷ ಕ್ರಿಸ್​ ಗೋಪಾಲಕೃಷ್ಣನ್​ ಪದವಿ ಪ್ರದಾನ ಮಾಡಿದರು. 343 ವಿದ್ಯಾರ್ಥಿಗಳು ಪದವಿ ಹಾಗೂ 11 ಜನರು ಪಿಎಚ್​ಡಿ ಪದವಿ ಪಡೆದರು.

ಐಐಐಟಿ-ಬಿ ನಿರ್ದೇಶಕ ಪ್ರೊ. ದೇಬಬ್ರತ ದಾಸ್​ ಮಾತನಾಡಿ, ಡೇಟಾ ಸೈನ್ಸ್​, ಮಷಿನ್​ ಲರ್ನಿಂಗ್​ ಹಾಗೂ ಕೃತಕ ಬುದ್ಧಿಮತ್ತೆ ಕ್ಷೇತ್ರಗಳಲ್ಲಿ ಕ್ರಾಂತಿಯಾಗುತ್ತಿದ್ದು, ಸಾಕಷ್ಟು ಉದ್ಯೋಗಾವಕಾಶಗಳು ಸೃಷ್ಟಿಯಾಗುತ್ತಿವೆ. ಮಾರುಕಟ್ಟೆ ಬೇಡಿಕೆಗೆ ಅನುಗುಣವಾಗಿ ವಿದ್ಯಾರ್ಥಿಗಳು ಪ್ರಾಯೋಗಿಕ ಕಲಿಕೆಗೆ ಒತ್ತು ನೀಡಬೇಕಾದುದು ಇಂದಿನ ಅಗತ್ಯತೆಯಾಗಿದೆ. ಮೂಲಸೌಕರ್ಯ ಹಾಗೂ ಸಂಶೋಧನಾ ಸಾಮರ್ಥ್ಯಗಳನ್ನು ನೂತನ ಶಿಕ್ಷಣ ಪದ್ಧತಿಗೆ ಅನುಗುಣವಾಗಿ ವಿಸ್ತರಿಸಲು ಐಐಐಟಿ-ಬಿ ಮುಂದಾಗಿದ್ದು, ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಬಿ.ಟೆಕ್​. ಪ್ರೋಗ್ರಾಂ ಪರಿಚಯಿಸುತ್ತಿದ್ದೇವೆ ಎಂದು ತಿಳಿಸಿದರು.

ಶೈಕ್ಷಣಿಕ ವಿಭಾಗದ ಡೀನ್​ ಪ್ರೊ. ಚಂದ್ರಶೇಖರ ರಾಮನಾಥನ್​ ಮಾತನಾಡಿ, ಆಧುನಿಕ ಜಗತ್ತಿನಲ್ಲಿ ಯಶಸ್ವಿಯಾಗಲು ಕೌಶಲ ಅತ್ಯಗತ್ಯ. ಕೌಶಲವಿದ್ದಾಗ ಮಾತ್ರ ಹೊಸ ಹೊಸ ಅವಕಾಶಗಳನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.

ತಾಯಿ-ಮಗನಿಗೆ ಒಟ್ಟಿಗೇ ಪದವಿ

ಟಿಕೋತ್ಸವದಲ್ಲಿ ರಂಜನಿ ನಿರಂಜನ್​ ಪಿಎಚ್​.ಡಿ. ಪದವಿ ಪಡೆದುಕೊಂಡರು. ಅವರ ಪುತ್ರ ಎಸ್​.ಎನ್​. ರಾವ್​ ಇಂಟಿಗ್ರೇಟೆಡ್​ ಎಂ.ಟೆಕ್​. ಪದವಿ ಸ್ವೀಕರಿಸಿರು. ಈ ಮೂಲಕ ತಾಯಿ&ಮಗ ಒಂದೇ ವೇದಿಕೆಯಲ್ಲಿ ಪದವಿ ಪಡೆದುಕೊಂಡ ಕ್ಷಣಕ್ಕೆ ಕಾರ್ಯಕ್ರಮ ಸಾಯಾಯಿತು. ವಿದ್ಯಾರ್ಥಿಗಳಾದ ಆರ್​.ವಿನಯ್​ (ಎಂ.ಟೆಕ್​.), ಅಂಕಿತ್​ ಅಗರ್ವಾಲ್​ (ಐ&ಎಂ.ಟೆಕ್​.), ಕೊಗತಂ ಭಾರತ್​ (ಎಂಎಸ್​ಸಿ ಡಿಜಿಟಲ್​ ಸೊಸೈಟಿ) ಚಿನ್ನದ ಪದಕಗಳನ್ನು ಕೊರಳಿಗೇರಿಸಿಕೊಂಡರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net