ಸನ್ಮಾರ್ಗದಲ್ಲಿ ಸಾಗಿದರೆ ಸನ್ಮಾನ ಪ್ರಾಪ್ತಿ

1NRGL1- SANMANA
Published on

ನರೇಗಲ್ಲ: ಯಾರು ಸನ್ಮಾರ್ಗದಲ್ಲಿ ನಡೆಯುವರೋ ಅವರಿಗೆ ಸನ್ಮಾನಗಳು ಪ್ರಾಪ್ತವಾಗುತ್ತವೆ. ಕಾಯಾ, ವಾಚಾ, ಮನಸಾ ಶುದ್ಧವಾಗಿರುವವರು ಸಾಮಾಜಿಕ ಮತ್ತು ಧಾರ್ವಿುಕ ಕಾರ್ಯಗಳಲ್ಲಿ ತೊಡಗಿಕೊಳ್ಳಬೇಕು ಎಂದು ಸಿದ್ದರಬೆಟ್ಟ ಹಾಗೂ ಅಬ್ಬಿಗೇರಿ ಹಿರೇಮಠದ ವೀರಭದ್ರ ಶಿವಾಚಾರ್ಯರು ಹೇಳಿದರು.


ಸಮೀಪದ ಅಬ್ಬಿಗೇರಿ ಹಿರೇಮಠದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ ರಾಜ್ಯ ಘಟಕದ ಕಾರ್ಯನಿರ್ವಾಹಕ ಸಮಿತಿ ಸದಸ್ಯರಾಗಿ ಆಯ್ಕೆಯಾದ ಸಂಗನಗೌಡ ಗುರುಪಾದಗೌಡ ಪಾಟೀಲ ಅವರನ್ನು ಸನ್ಮಾನಿಸಿ ಅವರು ಮಾತನಾಡಿದರು.
ಸತ್ಕಾರ್ಯಗಳು ಮಾನವರನ್ನು ಪರಿಶುದ್ಧಗೊಳಿಸುತ್ತವೆ. ಪರಿಶುದ್ಧತೆ, ಸನ್ಮಾರ್ಗದಲ್ಲಿ ನಡೆಯುವಂತೆ ಪ್ರೇರೇಪಿಸುತ್ತದೆ. ಸನ್ಮಾರ್ಗದಲ್ಲಿ ನಡೆಯುವವರನ್ನು ಸಮಾಜ ಸದಾ ಗುರುತಿಸಿ, ಗೌರವಿಸುವ ಕೆಲಸ ಮಾಡುತ್ತದೆ ಎಂದರು.


ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂಗನಗೌಡ ಪಾಟೀಲ, ಗುರುವಿನ ಆಶೀರ್ವಾದ ಇರುವಾಗ, ಸಮಾಜ ಸೇವೆ ಮಾಡಲು ಅಧಿಕಾರ ಮುಖ್ಯವಲ್ಲ, ಅಧಿಕಾರ ಶಾಶ್ವತವೂ ಅಲ್ಲ, ಸಮಾಜ ಸೇವೆ, ಗುರುವಿನ ಸೇವೆ ಮಾಡುವುದು ಶಾಶ್ವತ ಎಂದರು.


ಸೊರಟೂರ ಫಕೀರೇಶ್ವರ ಶಿವಾಚಾರ್ಯ ಸ್ವಾಮೀಜಿ, ಸುರೇಶ ಬಸವರಡ್ಡೇರ, ಬಸವರಾಜ ಪಲ್ಲೇದ ಎ.ವಿ. ವೀರಾಪೂರ, ವೀರನಗೌಡ ಪಾಟೀಲ, ಸೋಮನಗೌಡ ಕಣವಿ, ಸಿದ್ದಯ್ಯ ಅರಳೆಲೆಮಠ, ಬಾಬುಗೌಡ ಪಾಟೀಲ, ಮಂಜು ಅಂಗಡಿ, ಗುರಣ್ಣ ಅವರಡ್ಡಿ, ಜಗದೀಶ ಅವರಡ್ಡಿ, ಭರಮಪ್ಪ ಹನುಮನಾಳ, ಸಿದ್ದು ಹನುಮನಾಳ, ಮುತ್ತಪ್ಪ ಕುಕನೂರ, ಬಸವರಾಜ ಚವಡಿ, ಮಹಾದೇವಪ್ಪ ಕಂಬಳಿ, ಶಿವಪುತ್ರಪ್ಪ ತೆಗ್ಗಿನಕೇರಿ, ಎ.ಕೆ. ಮಳಗಿ, ಸೋಮು ಶಿರೋಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net