ಒಂದಾಗಿ ಬಾಳಿದರೆ ದೇಶದ ಪ್ರಗತಿ

15blh3 dc news
Published on

ಬೈಲಹೊಂಗಲ: ದೇಶ ಅಭಿವದ್ಧಿಯಾಗಬೇಕಾದರೆ ಮಠಮಾನ್ಯಗಳ ಮಾರ್ಗದರ್ಶನದಲ್ಲಿ ಮಾನವ ಕುಲ ಒಂದಾಗಿ ಬಾಳಬೇಕು ಎಂದು ಜಿಲ್ಲಾಧಿಕಾರಿ ಮೊಹಮ್ಮದ್​ ರೋಷನ್​ ಹೇಳಿದರು.

ಪಟ್ಟಣದ ಮುರಗೋಡ ರಸ್ತೆಯ ಶ್ರೀ ಮಾತಾ ದುರ್ಗಾ ಮಾತಾ ಪರಮೇಶ್ವರಿ ದೇವಸ್ಥಾನದ 15ನೇ ವರ್ಷದ ಜಾತ್ರಾ ಮಹೋತ್ಸವ ಹಾಗೂ ಧರ್ಮ ಸಭೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಈ ಭಾಗದಲ್ಲಿ ಪ್ರತಿ ವರ್ಷವೂ ಜಾತಿ ಮತ ಪಂಥಗಳೆನ್ನದೆ ಭಕ್ತರನ್ನು ಸೇರಿಸಿ ವೆಭವದ ಜಾತ್ರೆ ನಡೆಸುತ್ತಿರುವ ಶ್ರೀ ಮಹಾಂತೇಶ ಶಾಸ್ತ್ರಿ ಆರಾದ್ರಿಮಠ ಕಾರ್ಯ ಶ್ಲಾನೀಯ ಎಂದರು.

ಹುಕ್ಕೇರಿ ಹಿರೇಮಠದ ಡಾ. ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಮುರಗೋಡ ನೀಲಕಂಠ ಸ್ವಾಮೀಜಿ, ಕಿತ್ತೂರು ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.

ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ, ಶಾಸಕರಾದ ಮಹಾಂತೇಶ ಕೌಜಲಗಿ, ಬಾಬಾಸಾಹೇಬ ಪಾಟೀಲ ಮಾತನಾಡಿ, ಪೂಜ್ಯರ ಮಾರ್ಗದರ್ಶನದಲ್ಲಿ ಧರ್ಮದ ನೆಲೆಕಟ್ಟಿನಲ್ಲಿ ಜೀವನ ಸಾಗಿಸುವುದರಿಂದ ಶಾಂತಿಯುತ, ಅಭಿವೃದ್ಧಿಭರಿತ ಜೀವನ ಸಾಗಿಸಬಹುದು ಎಂದರು.

ಮಾಜಿ ಶಾಸಕರಾದ ಡಾವಿಶ್ವನಾಥ ಪಾಟೀಲ, ಜಗದೀಶ ಮೆಟಗುಡ್ಡ, ಪುರಸಭೆ ಅಧ್ಯ ವಿಜಯ ಬೋಳನ್ನವರ, ಶಿವಾನಂದ ಕುಡಸೋಮನ್ನವರ, ಪುರಸಭೆ ಸದಸ್ಯ ಬಸವರಾಜ ಜನ್ಮಟ್ಟಿ, ಎ್​.ಎಸ್​.ಸಿದ್ದನಗೌಡರ, ಶಂಕರ ಮಾಡಲಗಿ, ಡಾ.ಎಸ್​.ಎಸ್​.ಸಿದ್ದನ್ನವರ, ೇತ್ರ ಶಿಣಾಧಿಕಾರಿ ಎ.ಎನ್​.ಪ್ಯಾಟಿ, ಸೋಮನಾಥ ಸೊಪ್ಪಿಮಠ, ಪ್ರಮೋದಕುಮಾರ ವಕ್ಕುಂದಮಠ, ಪತ್ರಕರ್ತ ಈಶ್ವರ ಹೋಟಿ, ರಾಜು ಕುಡಸೋಮನ್ನವರ, ಶ್ರೀಶೈಲ ಯಡಳ್ಳಿ, ಬಿಗ್​ ಬಾಸ್​ ಕಲಾವಿದೆ ಗೌತಮಿ ಜಾಧವ ಇದ್ದರು. ಧರ್ಮಾಧಿಕಾರಿ ಡಾ.ಮಹಾಂತೇಶ ಶಾಸ್ತ್ರಿ ಆರಾದ್ರಿಮಠ ಸ್ವಾಗತಿಸಿದರು. ಮುತ್ತುರಾಜ ಮತ್ತಿಕೊಪ್ಪ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net