ಶ್ರದ್ಧೆಯಿದ್ದರೆ ಅಡಚಣೆಗಳು ಬರಲ್ಲ: ಡಾ.ಬಿ.ಎಂ.ಶರಭೇಂದ್ರಸ್ವಾಮಿ

raidrio
ರಾಯಚೂರಿನ ಆಕಾಶವಾಣಿ ಕೇಂದ್ರದ ಮುಖ್ಯಸ್ಥ ಡಾ.ಬಿ.ಎಂ.ಶರಭೇಂದ್ರಸ್ವಾಮಿ ಹಾಗೂ ವಾಹನ ಚಾಲಕ ಜಾಫರ್ ಹುಸೇನ್‌ಗೆ ಶುಕ್ರವಾರ ಸನ್ಮಾನಿಸಿ ಬೀಳ್ಕೊಡಲಾಯಿತು.
Published on

ರಾಯಚೂರು: ಆಕಾಶವಾಣಿಯಲ್ಲಿ ಸಾಹಿತ್ಯಕ್ಕೆ ವೇದಿಕೆ ಕಲ್ಪಿಸಿದ ಖುಷಿಯಿದ್ದು, ರಾಯಚೂರು ಆಕಾಶವಾಣಿಯಲ್ಲಿ ಕಾರ್ಯನಿರ್ವಹಿಸಿದ ನಾಲ್ಕು ವರ್ಷಗಳಲ್ಲಿ ಸಾಧಿಸಿದ ಯಶಸ್ಸಿಗೆ ಸಿಬ್ಬಂದಿ ಸಹಕಾರ ಕಾರಣ ಎಂದು ರಾಯಚೂರು ಕೇಂದ್ರದ ನಿವೃತ್ತ ಮುಖ್ಯಸ್ಥ ಡಾ.ಬಿ.ಎಂ.ಶರಭೇಂದ್ರಸ್ವಾಮಿ ಹೇಳಿದರು.

ವೃತ್ತಿಯಲ್ಲಿ ಶ್ರದ್ಧೆ ಮತ್ತು ನಿಷ್ಠೆ ಇರಬೇಕು

ಆಕಾಶವಾಣಿ ಕಚೇರಿಯಲ್ಲಿ ಸೇವೆಯಿಂದ ನಿವೃತ್ತರಾದ ಡಾ.ಬಿ.ಎಂ.ಶರಭೇಂದ್ರಸ್ವಾಮಿ ಹಾಗೂ ವಾಹನ ಚಾಲಕ ಜಾಫರ್ ಹುಸೇನ್‌ಗೆ ಶುಕ್ರವಾರ ಏರ್ಪಡಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಹಿರಿಯ ಸಾಹಿತಿ ರಾಮಣ್ಣ ಹವಳೆ ಮಾತನಾಡಿ, ವೃತ್ತಿಯಲ್ಲಿ ಶ್ರದ್ಧೆ ಮತ್ತು ನಿಷ್ಠೆ ಇದ್ದರೆ ಕೆಲಸದಲ್ಲಿ ಯಾವುದೇ ಅಡಚಣೆಗಳು ಬರುವುದಿಲ್ಲ. ಎಲ್ಲರನ್ನು ಪ್ರೀತಿಸುವ ಗುಣವಿದ್ದಲ್ಲಿ ಮಾನವೀಯತೆಗೆ ಕೊರತೆಯಿರುವುದಿಲ್ಲ. ಅಂತಹ ವ್ಯಕ್ತಿತ್ವವನ್ನು ಶರಭೇಂದ್ರಸ್ವಾಮಿ ಹೊಂದಿದ್ದರು ಎಂದರು.

ಆಕಾಶವಾಣಿ ಪ್ರಸಾರ ನಿರ್ವಾಹಕ ವೆಂಕಟೇಶ ಬೇವಿನಬೆಂಚಿ, ಕಾರ್ಯಕ್ರಮ ಮುಖ್ಯಸ್ಥ ಡಾ.ವಿ.ಜಿ.ಬಾವಲತ್ತಿ, ಕಸಾಪ ಜಿಲ್ಲಾಧ್ಯಕ್ಷ ರಂಗಣ್ಣ ಪಾಟೀಲ್ ಅಳ್ಳುಂಡಿ, ಸಾಹಿತಿಗಳಾದ ಅಯ್ಯಪ್ಪಯ್ಯ ಹುಡಾ, ವೀರಹನುಮಾನ, ಡಾ.ಶಕುಂತಲಾ ಗೋಪಿಶೆಟ್ಟಿ, ನಿರೂಪಕರಾದ ವೆಂಕಟೇಶ ಹೂಗಾರ, ಕೆ.ಸಂಧ್ಯಾ, ಶ್ರೀದೇವಿ, ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net