

ಅಂಕೋಲಾ: ನಮ್ಮ ಮನೆ, ಗ್ರಾಮ ಸ್ವಚ್ಛವಾಗಿದ್ದರೆ, ದೇಶದ ಸ್ವಚ್ಛತಾ ಅಭಿಯಾನ ಯಶಸ್ವಿಯಾಗುತ್ತದೆ. ನಮ್ಮ ಸುತ್ತಮುತ್ತಲಿನ ಪರಿಸರ ಸ್ವಚ್ಛವಾಗಿದ್ದಾಗ ಮಾತ್ರ ರೋಗ- ರುಜಿನಿಗಳಿಂದ ಮುಕ್ತರಾಗಲು ಸಾಧ್ಯ. ಹೀಗಾಗಿ ಪ್ರತಿಯೊಬ್ಬರೂ ನಮ್ಮ ಪರಿಸರವನ್ನು ಸುಂದರವಾಗಿ ಇಟ್ಟುಕೊಳ್ಳಬೇಕು ಎಂದು ಬೇಲೆಕೇರಿ ಗ್ರಾಪಂ ಅಧ್ಯಕ್ಷೆ ಸಹಾನ ರವಿ ನಾಯ್ಕ ಹೇಳಿದರು.
ಬೇಲೆಕೇರಿ ಗ್ರಾಪಂ., ಲಯನ್ಸ್ ಕ್ಲಬ್ ಅಂಕೋಲಾ ಕರಾವಳಿ, ಕರಾವಳಿ ಕಾವಲು ಪಡೆ, ಪೊಲೀಸ್ ಠಾಣೆ, ಇಂಡಿಯನ್ ನೇವಿಯ ಐಎನ್ಎಸ್ ವಜ್ರಕೋಶ, ಸಿವಿಲ್ ವಿಂಗ್, ಎಸ್ಡಿಆರ್ಎಫ್ ಬೆಳಗಾವಿ ವಿಭಾಗ, ವಿವೇಕ ಸೌಹಾರ್ದ ಸಹಕಾರಿ ಸಂಘ, ಜೈನಿಬೀರ ಯುವಕ ಸಂಘ ಬೇಲೆಕೇರಿ ಆಶ್ರಯದಲ್ಲಿ ಬೇಲೆಕೇರಿ ಕಡಲ ತೀರ ಮತ್ತು ಪರಿವೀಕ್ಷಣ ಮಂದಿರ ಪ್ರದೇಶದಲ್ಲಿ ನಡೆದ ಸ್ವಚ್ಛತೆ ಶ್ರಮದಾನ ದಲ್ಲಿ ಅವರು ಮಾತನಾಡಿದರು.
ಲಯನ್ಸ್ ಕ್ಲಬ್ ಕರಾವಳಿ ಅಧ್ಯಕ್ಷ ಮಂಜುನಾಥ ಹರಿಕಂತ್ರ ಮಾತನಾಡಿ, ಉತ್ತಮ ಪರಿಸರ ಕಾಪಾಡಿದರೆ ಪ್ರಕೃತಿ ಉಳಿಯಲು ಸಾಧ್ಯ. ಆದರೆ, ಪರಿಸರದ ಮೇಲಿನ ಕಾಳಜಿ ಒಂದು ದಿನಕ್ಕೆ ಸೀಮಿತವಾಗದೆ ನಿತ್ಯವಾಗಬೇಕು ಎಂದರು.
ನೌಕಾನೆಲೆಯ ಐಎನ್ಎಸ್ ವಜ್ರ ಕೋಶದ ಕಮಾಂಡಿಗ್ ಅಧಿಕಾರಿ ಕ್ಯಾ.ಆರ್.ಕೆ. ಸಿಂಗ್, ವಿವೇಕ ಸೌಹಾರ್ದ ಸಹಕಾರಿ ಅಧ್ಯಕ್ಷ ಕೇಶವಾನಂದ ನಾಯಕ ಮಾತನಾಡಿದರು. ಗ್ರಾಪಂ ಉಪಾಧ್ಯಕ್ಷ ರಾಜು ನಾಯಕ, ಸದಸ್ಯರಾದ ಸುಧಾಕರ ಜಾಂಬಾವಳಿಕರ್, ರಘುನಾಥ ದೇಸಾಯಿ, ಶೈಲಾ, ಸ್ಮೀತಾ, ಅನುಸೂಯಾ ಬಾನಾವಳಿಕರ, ಲಕ್ಷ್ಮಣ, ಮಾಜಿ ಅಧ್ಯಕ್ಷೆ ಲಕ್ಷ್ಮೀ ಹಾದಿಮನಿ, ಕರಾವಳಿ ಕಾವಲು ಪಡೆಯ ಪಿಎಸ್ಐ ಪ್ರಿಯಾಂಕ ನ್ಯಾಮೇಗೌಡ, ಸಂಜೀವಿನ ಸ್ವ ಸಹಾಯ ಸಂಘದ ಲಲಿತಾ ನಾಯಕ, ಲಯನ್ಸ್ ಕ್ಲಬ್ ಕರಾವಳಿ ಮಾಜಿ ಅಧ್ಯಕ್ಷ ಗಣೇಶ ಶೆಟ್ಟಿ ಇದ್ದರು.