ಅಕಸ್ಮಾತ್ ಆರ್​ಎಸ್​ಎಸ್​ ಇರದೇ ಹೋಗಿದ್ರೆ ನಾಲ್ಕೈದು ಪಾಕಿಸ್ತಾನ ಹುಟ್ಟಿಕೊಳ್ತಿದ್ವು: ಮಾಜಿ ಸಿಎಂ ಜಗದೀಶ್​ ಶೆಟ್ಟರ್​

Shettar
Published on

ಕೊಪ್ಪಳ: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​ಎಸ್​ಎಸ್​) ಕುರಿತ ಪರ-ವಿರೋಧದ ಟೀಕೆಗಳು ಮುಂದುವರಿದಿದ್ದು, ಇದೀಗ ಮಾಜಿ ಮುಖ್ಯಮಂತ್ರಿಯೊಬ್ಬರು ಆರ್​ಎಸ್​ಎಸ್​ ಪರವಹಿಸಿ ಮಾತನಾಡಿದ್ದಾರೆ. ಮಾತ್ರವಲ್ಲ ಆರ್​ಎಸ್​ಎಸ್​ ಅಸ್ತಿತ್ವದ ಅನಿವಾರ್ಯತೆಯನ್ನು ಸಮರ್ಥಿಸಿಕೊಂಡಿದ್ದಾರೆ.

ಕೊಪ್ಪಳದಲ್ಲಿ ಮಾತನಾಡಿರುವ ಮಾಜಿ ಮುಖ್ಯಮಂತ್ರಿ ಜಗದೀಶ್​ ಶೆಟ್ಟರ್​ ಅವರು, ಆರ್​ಎಸ್​ಎಸ್​ ಒಂದು ದೊಡ್ಡ ಆಲದ ಮರ ಎಂದು ಬಣ್ಣಿಸಿದ್ದಾರೆ. ಮಾಜಿ ಮುಖ್ಯಮಂತ್ರಿಯವರಾದ ಸಿದ್ದರಾಮಯ್ಯ, ಎಚ್​.ಡಿ. ಕುಮಾರಸ್ವಾಮಿ ಕಾಂಪಿಟಿಷನ್ ಮೇಲೆ ಆರ್​ಎಸ್ಎಸ್​ ವಿರುದ್ಧ ಟೀಕೆ ಮಾಡುತ್ತಿದ್ದಾರೆ. ಇದರಿಂದ ಅವರಿಗೇ ತೊಂದರೆ ಎಂದ ಶೆಟ್ಟರ್​, ತಾಕತ್ತಿದ್ದರೆ ಸಿದ್ದರಾಮಯ್ಯ-ಕುಮಾರಸ್ವಾಮಿ ತಾವು ತಾಲಿಬಾನ್ ಪರವೋ, ವಿರೋಧವೋ ಎಂದು ಹೇಳಲಿ ಎಂಬ ಸವಾಲೆಸೆದಿದ್ದಾರೆ.

ಇನ್ನು ಆರ್​​ಎಸ್​ಎಸ್​ ಕುರಿತು ಎಚ್​.ಡಿ. ಕುಮಾರಸ್ವಾಮಿ ಮಾತನಾಡಿರುವುದನ್ನು ಅವರು ಹಿಟ್​ ಆ್ಯಂಡ್ ರನ್​ ಕೇಸ್​ಗೆ ಹೋಲಿಕೆ ಮಾಡಿದ್ದಾರೆ. ಕುಮಾರಸ್ವಾಮಿ ಸ್ವಭಾವವೇ ಹಾಗೆ, ಮೊದಲು ಏನೋ ಹೇಳುತ್ತಾರೆ, ಆಮೇಲೆ ತಪ್ಪಾಯ್ತು ಅಂತಾರೆ ಎಂದಿದ್ದಾರೆ. ಅಕಸ್ಮಾತ್ ಆರ್​ಎಸ್ಎಸ್​ ಇರದೆ ಹೋಗಿದ್ದಿದ್ದರೆ ನಾಲ್ಕೈದು ಪಾಕಿಸ್ತಾನ ಹುಟ್ಟಿಕೊಳ್ತಿದ್ವು ಎಂದೂ ಶೆಟ್ಟರ್​ ಹೇಳಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net