ಹೊನ್ನಾರುತಿ ದೇವಾಲಯದ ವಿಗ್ರಹ ಪ್ರತಿಷ್ಠಾಪನೆ

IMG-20240225-WA0051
Published on

ಹಲಗೂರು: ಇಲ್ಲಿನ ಸಿದ್ದಪ್ಪಾಜಿ ದೇವಸ್ಥಾನದ ಬೀದಿಯಲ್ಲಿ ನೂತನವಾಗಿ ನಿರ್ಮಿಸಿರುವ ಹೊನ್ನಾರುತಿ ದೇವಾಲಯದ ವಿಗ್ರಹ ಮತ್ತು ಕಳಶ ಪ್ರತಿಷ್ಠಾಪನೆ ಮಹೋತ್ಸವ ಶ್ರದ್ಧಾಭಕ್ತಿಯಿಂದ ಆರಂಭವಾಯಿತು.


ಭಾನುವಾರ ಬೆಳಗ್ಗೆ ಅಗ್ರೋದಕ, ಯಾಗಶಾಲಾ ಪ್ರವೇಶ, ಗಣಪತಿ ಪೂಜೆ, ಪುಣ್ಯಾಹ, ಪಂಚಗವ್ಯ, ದೇವನಾಂದಿ, ಪ್ರತಿಮಾ, ರಕ್ಷಾ ಬಂಧನ, ಧಾನ್ಯ ನಿವಾಸ, ಜಲಾಧಿವಾಸ, ಪ್ರಧಾನ ಕಳಸ ಸ್ಥಾಪನೆ, ಪರಿವಾರ ದೇವತಾ ಕಳಸ ಸ್ಥಾಪನೆ, ವಾಸ್ತು ರಕ್ಷೋಘ್ನ ಪೂಜೆ, ಹೋಮ, ಪರ್ಯಗ್ನೀಕರಣ, ಶಯಾದಿವಾಸ, ಪೀಠ ಪೂಜೆ, ಮಂಗಳಾರತಿ ನಡೆಯಿತು. ಸಂಜೆ ಸಮೀಪದ ಭೀಮಾನದಿ ತೀರದಲ್ಲಿ ಹೊನ್ನಾರುತಿ ದೇವಿ, ಸಿದ್ದಪ್ಪಾಜಿಸ್ವಾಮಿ, ಮಹದೇಶ್ವರಸ್ವಾಮಿ, ಭದ್ರಕಾಳಿ ದೇವರುಗಳಿಗೆ ಹೂ, ಹೊಂಬಾಳೆಯಿಂದ ಅಲಂಕರಿಸಿ ವಿಶೇಷ ಪೂಜೆ ಸಲ್ಲಿಸಲಾಯಿ


ಹಲಗೂರಿನ ಪ್ರಮುಖ ಬೀದಿಯಲ್ಲಿ ದೇವರ ಉತ್ಸವ ನಡೆಯಿತು. ನಂತರ ಪೂರ್ಣ ಕುಂಭದೊಂದಿಗೆ ಮೆರವಣಿಗೆ ಮೂಲಕ ಹೊನ್ನಾರುತಿ ದೇವಾಲಯಕ್ಕೆ ಕರೆತರಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net