ದುಡ್ಡಿಗಾಗಿ ಜೀವನ ಹೋರಾಟ ಸಲ್ಲ

Untitled design(11)
ಹಟ್ಟಿ ಗ್ರಾಮದಲ್ಲಿ ಭಕ್ತ ಕನಕದಾಸ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಲೋಕಾರ್ಪಣೆ ಕಾರ್ಯಕ್ರಮವನ್ನು ಸಿದ್ದರಾಮನಂದಪುರಿ ಸ್ವಾಮೀಜಿ ಉದ್ಘಾಟಿಸಿದರು. ಮರುಳಾರಾಧ್ಯ ಶಿವಾಚಾರ್ಯರು, ಶಿವಸಿದ್ದೇಶ್ವರ ಸ್ವಾಮೀಜಿ, ಶಾಸಕ ರಾಘವೇಂದ್ರ ಹಿಟ್ನಾಳ, ಪ್ರಮುಖರಾದ ಬಸವರಾಜ ಹಿಟ್ನಾಳ, ರಾಮಕೃಷ್ಣ ದೊಡ್ಡಮನಿ, ರಾಜಶೇಖರ ಹಿಟ್ನಾಳ, ಭರಮಪ್ಪ ನಗರ, ತೋಟಪ್ಪ, ನೀಲಪ್ಪ, ನಿಂಗನಗೌಡ, ಕೆ.ವಿ.ಹಂಚಿನಾಳ ಇನ್ನಿತರರಿದ್ದರು.
Published on

ಅಳವಂಡಿ: ಸಂಗೊಳ್ಳಿ ರಾಯಣ್ಣರ ದೇಶಪ್ರೇಮ, ಹೋರಾಟ ಮನೋಭಾವ ಇಂದಿನ ಯುವ ಪೀಳಿಗೆಗೆ ಮಾದರಿ ಎಂದು ಕಾಗಿನೆಲೆ ಕನಕ ಗುರುಪೀಠದ ಸಿದ್ದರಾಮನಂದಪುರಿ ಸ್ವಾಮೀಜಿ ತಿಳಿಸಿದರು.

ರಾಯಣ್ಣರ ಪರಾಕ್ರಮ, ಧೃಡ ಸಂಕಲ್ಪ ಯುವಕರು ಅಳವಡಿಸಿಕೊಳ್ಳಲಿ

ಸಮೀಪದ ಹಟ್ಟಿಗ್ರಾಮದಲ್ಲಿ ಭಕ್ತ ಕನಕದಾಸ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿ ಲೋಕಾರ್ಪಣೆ ಅಂಗವಾಗಿ ಹಮ್ಮಿಕೊಂಡಿದ್ದ ಧಾರ್ಮಿಕ ಸಭೆಯ ಉದ್ಘಾಟಿಸಿ ಸೋಮವಾರ ಮಾತನಾಡಿದರು. ರಾಯಣ್ಣರ ಪರಾಕ್ರಮ, ಧೃಡ ಸಂಕಲ್ಪ, ಸ್ವಾಭಿಮಾನವನ್ನು ಯುವಕರು ಅಳವಡಿಸಿಕೊಳ್ಳಲಿ ಎಂದರು.

ಭಕ್ತಿಯ ಶಕ್ತಿ ಕನಕದಾಸರು ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಜನರನ್ನು ಸರಿದಾರಿಗೆ ತರುವಲ್ಲಿ ಶ್ರಮಿಸಿದ್ದಾರೆ. ಇಂತಹ ಮಹಾನ್ ನಾಯಕರ ಆದರ್ಶ, ದೇಶಪ್ರೇಮ ಅನುಕರಣೀಯವಾಗಿದೆ. ಸರ್ವರು ಒಂದೆ ಎಂಬ ಪರಿಕಲ್ಪನೆಯನ್ನು ಬೆಳೆಸಿಕೊಂಡಾಗ ಅಭಿವೃದ್ದಿ ಸಾಧ್ಯ. ದುಡ್ಡಿಗಾಗಿ ಜೀವನದ ಹೋರಾಟ ಇರಬಾರದು. ಜನರ ಅಭಿವೃದ್ದಿಗೆ ಹೋರಾಟ ಇರಲಿ ಎಂದು ಕಿವಿಮಾತು ಹೇಳಿದರು.

ಶಾಸಕ ರಾಘವೇಂದ್ರ ಹಿಟ್ನಾಳ ಮಾತನಾಡಿ, ಕೀರ್ತನೆಗಳ ಮೂಲಕ ಸಮಾನತೆ ಸಾರಿದ ದಾಸಶ್ರೇಷ್ಠ ಕನಕದಾಸರಾಗಿದ್ದಾರೆ.12 ನೇ ಶತಮಾನದಲ್ಲಿ ಬಸವಣ್ಣ ಅನುಭವ ಮಂಟಪದ ಮೂಲಕ ಸಮಾಜ ಕಟ್ಟಕಡೆಯ ವ್ಯಕ್ತಿಗಳಿಗೂ ಅವಕಾಶ ನೀಡಿ ಸಮಾನತೆಯ ಜ್ಯೋತಿ ಬೆಳಗಿಸಿದರು ಎಂದರು.
ಇದಕ್ಕೂ ಮೊದಲು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿಗೆ ಪುಷ್ಪ ನಮನ ಸಲ್ಲಿಸಿ ಸಿದ್ದರಾಮನಂದಪುರಿ ಸ್ವಾಮೀಜಿ ಲೋಕಾರ್ಪಣೆಗೊಳಿಸಿದರು.

ಅಳವಂಡಿ ಸಿದ್ದೇಶ್ವರ ಮಠದ ಮರುಳಾರಾಧ್ಯ ಶಿವಾಚಾರ್ಯ, ಹಾಲವರ್ತಿ ಶಿವಸಿದ್ದೇಶ್ವರ ಸ್ವಾಮೀಜಿ, ಪ್ರಮುಖರಾದ ಬಸವರಾಜ ಹಿಟ್ನಾಳ, ರಾಮಕೃಷ್ಣ ದೊಡ್ಡಮನಿ, ರಾಜಶೇಖರ ಹಿಟ್ನಾಳ, ಭರಮಪ್ಪ ನಗರ, ತೋಟಪ್ಪ, ನೀಲಪ್ಪ, ನಿಂಗನಗೌಡ, ಕೆ.ವಿ.ಹಂಚಿನಾಳ, ರವಿ, ಗೂಳಪ್ಪ ಹಲಗೇರಿ, ನಿಂಗಪ್ಪ, ಕೃಷ್ಣರಡ್ಡಿ, ಬೀಮೇಶಪ್ಪ, ಹನುಮಂತ, ಡಾ.ಬೀಡನಾಳ, ಅಮರೇಶಪ್ಪ, ರಂಗಪ್ಪ, ಈರಪ್ಪ ತಳಕಲ್, ಪಾಡು ಬೋರಿನ, ಮರಿಯಪ್ಪ ಚಿಗರಿ, ಶಿವು ಮಲ್ಲಣ್ಣವರ, ವಸಂತ ಕರಿಗಾರ, ಶಂಕ್ರಪ್ಪ ತಳಕಲ್, ಕವಿತಾ ಉಳ್ಳಾಗಡ್ಡಿ ಇನ್ನಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net