ಕೈ ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅಪ್ರಾಪ್ತೆ ರಕ್ಷಣೆ

Protection of a minor who tried to commit suicide
ಚಾಲಕ ಬಿ.ಎಸ್.ಚನ್ನೇಶ್ ಮತ್ತು ಪೇದೆ ಎಸ್.ಕೆ.ರಾಘವೇಂದ್ರ
Published on

ಶಿವಮೊಗ್ಗ: ನಗರದ ಫ್ರೀಡಂ ಪಾರ್ಕ್‌ನಲ್ಲಿ ಸೋಮವಾರ ಮಧ್ಯಾಹ್ನ ಗಾಜಿನ ಚೂರಿನಿಂದ ಕೈಯನ್ನು ಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅಪ್ರಾಪ್ತೆಯೊಬ್ಬಳನ್ನು 112 ಇಆರ್‌ಎಸ್‌ಎಸ್ ವಾಹನದ ಸಿಬ್ಬಂದಿ ರಕ್ಷಣೆ ಮಾಡಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ.

17 ವರ್ಷದ ಬಾಲಕಿ ಮಧ್ಯಾಹ್ನ ಏಕಾಏಕಿ ಗಾಜಿನ ಚೂರಿನಿಂದ ತನ್ನ ಕೈಕೊಯ್ದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಳು. ಇದೇ ವೇಳೆ ಅಲ್ಲಿದ್ದ ಇಆರ್‌ಎಸ್‌ಎಸ್ ವಾಹನದ ಪೇದೆ(ವಿನೋಬನಗರ ಠಾಣೆ) ಎಸ್.ಕೆ.ರಾಘವೇಂದ್ರ ಮತ್ತು ಚಾಲಕ ಬಿ.ಎಸ್.ಚನ್ನೇಶ್ ಗಮನಿಸಿ ತಕ್ಷಣವೇ ಆಕೆಯನ್ನು ಇಆರ್‌ವಿ ವಾಹನದಲ್ಲೇ ಮೆಗ್ಗಾನ್ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿ ಜೀವ ಉಳಿಸಿದ್ದಾರೆ.
ಬಾಲಕಿ ಯಾವ ಕಾರಣಕ್ಕೆ ಆತ್ಮಹತ್ಯೆಗೆ ಯತ್ನಿಸಿದ್ದಳು ಎಂಬ ನಿಖರ ಮಾಹಿತಿ ತಿಳಿದಿಲ್ಲ. ಇಆರ್‌ಎಸ್‌ಎಸ್ ವಾಹನದ ಸಿಬ್ಬಂದಿ ಸಮಯಪ್ರಜ್ಞೆಯನ್ನು ಎಸ್ಪಿ ಜಿ.ಕೆ.ಮಿಥುನ್‌ಕುಮಾರ್ ಪ್ರಶಂಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net