ಸಂಭ್ರಮದ ಈದ್ ಮಿಲಾದ್ ಆಚರಣೆ

HUN-SEP-16-2(ED MILAD PROCESSING)
Published on

ಹುಣಸೂರು: ನಗರದಲ್ಲಿ ಮುಸ್ಲಿಂ ಸಮುದಾಯದವರು ಈದ್ ಮಿಲಾದ್ ಹಬ್ಬವನ್ನು ಸೋಮವಾರ ಸಂಭ್ರಮದಿಂದ ಆಚರಿಸಿದರು.


ಶಬ್ಬೀರ್‌ನಗರ ಬಡಾವಣೆಯಿಂದ ಸಂಜೆ ವಿವಿಧ ಮಸೀದಿಗಳ ಮೌಲ್ವಿಗಳ ನೇತೃತ್ವದಲ್ಲಿ ಹೊರಟ ಮೆರವಣಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿತು. ಶಬ್ಬೀರ್ ನಗರದಿಂದ ಕಲ್ಪತರು ವೃತ್ತ, ಬಜಾರ್ ರಸ್ತೆ, ಜೆಎಲ್‌ಬಿ ರಸ್ತೆ, ಎಸ್‌ಜೆ ರಸ್ತೆ ಮೂಲಕ ತೆರಳಿ ನಂತರ ಈದ್ಗಾ ಮೈದಾನದಲ್ಲಿ ಮುಕ್ತಾಯಗೊಂಡಿತು. ಮಕ್ಕಳು ದಫ್ ನೃತ್ಯಕ್ಕೆ ಹೆಜ್ಜೆ ಹಾಕಿದರು.


ನಗರಸಭೆ ಸದಸ್ಯ ಮಾಲಿಕ್ ಪಾಷಾ, ಮಾಜಿ ಸದಸ್ಯ ಹಜರತ್ ಜಾನ್, ನಗರ ಯೋಜನಾ ಪ್ರಾಧಿಕಾರದ ಸದಸ್ಯ ಅಫ್ರೋಜ್ ಅಹಮದ್, ಜಿಪಂ ಮಾಜಿ ಸದಸ್ಯ ಫಜಲ್ ಅಹಮದ್, ಮುಜೀಬ್, ಮಜಾಜ್ ಅಹಮದ್, ಸರ್ದಾರ್, ಫಾರುಕ್ ಇತರರಿದ್ದರು. ನಗರದಾದ್ಯಂತ ಪೊಲೀಸ್ ಬಿಗಿ ಭದ್ರತೆ ಹಾಕಲಾಗಿತ್ತು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ನಗರದಲ್ಲಿ ಮೊಕ್ಕಾಂ ಹೂಡಿದ್ದರು. 300ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ಭದ್ರತಾ ಕಾರ್ಯಕ್ಕೆ ನಿಯೋಜಿಸಲಾಗಿತ್ತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net