ವಿದ್ಯಾರ್ಥಿಗಳೊಂದಿಗೆ ಬಿಸಿಯೂಟ ಸವಿದ ಐಎಎಸ್ ಅಧಿಕಾರಿ ಮೀನಾಕ್ಷಿ ಆರ್ಯ

0812KLB02
Published on

ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಲು ಅಧಿಕಾರಿಗಳಿಗೆ : ತಾಪಂ ಇಒ ಸೂಚನೆ

ವಿಜಯವಾಣಿ ಸುದ್ದಿಜಾಲ ಜೇವರ್ಗಿ

ಮಕ್ಕಳು ಶಿಕ್ಷಣದಿಂದ ವಂಚಿತರಾಗದAತೆ, ಶಾಲೆಯಿಂದ ಹೊರಗುಳಿಯದಂತೆ ನೋಡಿಕೊಳ್ಳಬೇಕು, ಶಾಲೆಗೆ ಬಾರದಿರುವವರನ್ನು ಮರಳಿ ಶಾಲೆಗೆ ಕರೆತರಬೇಕು ಎಂದು ಐಎಎಸ್ ಅಧಿಕಾರಿಯಾಗಿರುವ ಜೇವರ್ಗಿ ತಾಪಂ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿ ಮೀನಾಕ್ಷಿ ಆರ್ಯ ಸೂಚಿಸಿದರು.

ತಾಲೂಕಿನ ಕೆಲ್ಲೂರ ಗ್ರಾಪಂ ವ್ಯಾಪ್ತಿಯ ಅವರಾದ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಮಕ್ಕಳ ವಿಶೇಷ ಗ್ರಾಮ ಸಭೆಯಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿ, ಈ ನಿಟ್ಟಿನಲ್ಲಿ ಶಿಕ್ಷಣ ಅಧಿಕಾರಿಗಳು ಹಾಗೂ ಶಿಕ್ಷಕರು ಕಾಳಜಿ ವಹಿಸಿ ಕೆಲಸ ಮಾಡಲು ತಿಳಿಸಿದರು.

ಬಾಲ್ಯ ವಿವಾಹ, ಬಾಲ ಕಾರ್ಮಿಕ ಮೊದಲಾದ ಅನಿಷ್ಠ ಪದ್ಧತಿಗಳನ್ನು ತೊಲಗಿಸಲು ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಜನರಲ್ಲಿ ಜಾಗೃತಿ ಮೂಡಿಸಬೇಕು. ಶಿP್ಷÀಕರು ಶಾಲೆಯಲ್ಲಿ ಮಕ್ಕಳ ಕಲಿಕೆಗೆ ಪೂರಕ ವಾತಾವರಣ ನಿರ್ಮಿಸಬೇಕು. ಸ್ಮಾರ್ಟ್ಕ್ಲಾಸ್ ಮೂಲಕ ಶಿP್ಷÀಣ ನೀಡಬೇಕು. ಹೆಣ್ಣು ಮತ್ತು ಗಂಡು ಮಕ್ಕಳಿಗೆ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಮಾಡಲು ತಿಳಿಸಿದರು.

ಅವರಾದ ವಿದ್ಯಾರ್ಥಿನಿ ಮುಬಿನಾ ಮಕ್ಕಳ ವಿಶೇಷ ಗ್ರಾಮ ಸಭೆಯ ಅಧ್ಯP್ಷÀತೆ ಹಾಗೂ ಕೆಲ್ಲೂರ ಶಾಲೆಯ ವಿದ್ಯಾರ್ಥಿನಿ ನಾಗಮ್ಮ ಉಪಾಧ್ಯP್ಷÀತೆ ವಹಿಸಿದ್ದರು. ಬಳಿಕ ಮಕ್ಕಳೊಂದಿಗೆ ಮೀನಾಕ್ಷಿ ಆರ್ಯ ಅವರು ಮಧ್ಯಾಹ್ನದ ಬಿಸಿ ಊಟ ಸವಿದರು. ಅವರೊಂದಿಗೆ ಪೋಟೋ ಕ್ಲಿಕಿಸಿಕೊಂಡರು.

ಗ್ರಾಪA ಅಧ್ಯಕ್ಷರು,ಪಿಡಿಒ,ವೈದ್ಯಾಧಿಕಾರಿಗಳು, ಮುಖ್ಯಗುರು ಹಾಗೂ ಶಿಕ್ಷಕರಿದ್ದರು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತï ಅಧ್ಯP್ಷÀರು, ಸದಸ್ಯರು, ತಾಲೂಕು ವೈದ್ಯಾಧಿಕಾರಿಗಳು, ಶಾಲೆಯ ಮುಖ್ಯ ಗುರು ಹಾಗೂ ಸಹ ಶಿP್ಷÀಕರು, ಗ್ರಾ. ಪಂ ಕಾರ್ಯಡರ್ಶಿಗಳು, ಬಿಟï ಆರP್ಷÀಕರು, ಅಂಗನವಾಡಿ ಮೇಲ್ವಿಚಾರಕರು, ಮಕ್ಕಳು ಹಾಗೂ ಪಾಲಕರು ಸೇರಿದಂತೆ ಗ್ರಾ.ಪಂ ಎಲ್ಲ ಸಿಬ್ಬಂದಿಗಳು ಸಭೆಯಲ್ಲಿ ಭಾಗವಹಿಸಿದ್ದರು..

ಶಾಲೆಯ ಆವರಣ ಸ್ವಚ್ಛತೆವಾಗಿರಬೇಕು. ರಜೆ ದಿನಗಳಲ್ಲಿ ಇಲ್ಲವೇ ಸಂಜೆ ಹೊತ್ತಲ್ಲಿ ಕಿಡಿಗೇಡಿಗಳು ಶಾಲೆಯ ಆವರಣದಲ್ಲಿ ಬಂದು ಧೂಮಪಾನ ಮಾಡಿದ್ದು ಕಂಡು ಬಂದಲ್ಲಿ ತP್ಷÀಣವೇ ಅಂತವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ.

| ಮೀನಾಕ್ಷಿ ಆರ್ಯ ಜೇವರ್ಗಿ ತಾಪಂ ಇಒ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net