

ಕುಂದಾಪುರ: ಕುಂದಾಪುರ ಪುರಸಭೆ ಎದುರು ಪೌರ ಕಾರ್ಮಿಕರು, ನೌಕರರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ ಸ್ಥಳಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ ಶುಕ್ರವಾರ ಭೇಟಿ ನೀಡಿದರು.
ಮುಖ್ಯಮಂತ್ರಿ, ಪೌರಡಳಿತ ಸಚಿವರನ್ನು ಸಂಪರ್ಕಿಸಲು ವಾಡಿದ ಯತ್ನ ವಿಫಲವಾಗಿದೆ. ಇನ್ನೊಮ್ಮೆ ಪ್ರಯತ್ನಿಸಿ ವಾತಾಡುವೆ. ಪೌರ ಕಾರ್ಮಿಕರ ಅನೇಕ ಬೇಡಿಕೆಗಳ ಪೈಕಿ ಕೆಲವು ಈಡೇರಿಸಲು ಸಾಧ್ಯವಿದೆ. ಇನ್ನೂ ಕೆಲವನ್ನು ನಿಧಾನಕ್ಕೆ ಈಡೇರಿಸಬಹುದು. ಆದ್ದರಿಂದ ಸರ್ಕಾರ ವಿಳಂಬ ವಾಡುವುದು ಸರಿಯಲ್ಲ ಎಂದರು.
ಪುರಸಭೆ ಅಧ್ಯಕ್ಷ ಮೋಹನದಾಸ ಶೆಣೈ, ನಿವೃತ್ತ ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, ಸದಸ್ಯ ಶ್ರೀಧರ ಶೇರೆಗಾರ್, ವಾಜಿ ಉಪಾಧ್ಯಕ್ಷ ರಾಜೇಶ್ ಕಾವೇರಿ ಮೊದಲಾದವರಿದ್ದರು. ಪುರಸಭೆಯ ಸೂರ್ಯಕಾಂತ್, ಗುರುಪ್ರಸಾದ್ ಶೆಟ್ಟಿ, ರಾವೇಂದ್ರ, ಗಣೇಶ್ ಜನ್ನಾಡಿ ಮೊದಲಾದವರು ಮನವಿ ನೀಡಿದರು.