ವಿಜಯವಾಣಿ ಸುದ್ದಿಜಾಲ ಬಾಗೇಪಲ್ಲಿ
ಕಾಂಗ್ರೆಸ್ನಲ್ಲಿ 30 ವರ್ಷಗಳಿಂದ ನಿಷ್ಠಾವಂತ ಕಾರ್ಯಕರ್ತನಾಗಿ ಸಲ್ಲಿಸಿರುವ ಸೇವೆ ಗುರುತಿಸಿರುವ ಕಾಂಗ್ರೆಸ್ ಸರ್ಕಾರ ನಿಗಮದ ಅಧ್ಯಕ್ಷ ಸ್ಥಾನ ನೀಡಿರುವುದನ್ನು ಎಂದಿಗೂ ಮರೆಯುವುದಿಲ್ಲ ಎಂದು ಮಾಜಿ ಶಾಸಕ, ರಾಜ್ಯ ಉಗ್ರಾಣ ಅಧ್ಯಕ್ಷ ಎನ್.ಸಂಪಂಗಿ ಸಂತಸ ವ್ಯಕ್ತಪಡಿಸಿದರು. ಬೆಂಗಳೂರಿನಲ್ಲಿರುವ ರಾಜ್ಯ ಉಗ್ರಾಣ ನಿಗಮ ಕೇಂದ್ರ ಕಚೇರಿಯಲ್ಲಿ ಆಯೋಜಿದ್ದ ನಿಗಮದ ಅಧ್ಯಕ್ಷ ಸ್ಥಾನ ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಮಾತನಾಡಿದರು.
3 ದಶಕಗಳಿಂದ ಕಾಂಗ್ರೆಸ್ ಕಾರ್ಯಕರ್ತನಾಗಿ, 10 ವರ್ಷಗಳ ಕಾಲ ಶಾಸಕನಾಗಿ ಬಾಗೇಪಲ್ಲಿ ೇತ್ರ ಸೇರಿ ವಿವಿಧ ಭಾಗಗಳಲ್ಲಿ ಹಲವು ಕಾರ್ಯಕ್ರಮ ಆಯೋಜಿಸಿ ಪಕ್ಷ ಸಂಟನೆಗೆ ಒತ್ತು ನೀಡಿದ್ದೇವೆ, ಕೆಪಿಸಿಸಿ ಉಪಾಧ್ಯಕ್ಷ ಸ್ಥಾನ ನೀಡಿ, ಮಂಡ್ಯ ಮತ್ತು ಹಾಸನ ಜಿಲ್ಲೆಯ ಉಸ್ತುವಾರಿ ಹೊಣೆ ನೀಡುವ ಜತೆಗೆ ಇಂದು ರಾಜ್ಯ ಉಗ್ರಾಣ ನಿಗಮ ಅಧ್ಯಕ್ಷ ಸ್ಥಾನಕ್ಕೆ ಆಯ್ಕೆ ಮಾಡಿದ್ದಾರೆ. ಕಾಂಗ್ರೆಸ್ ಕೊಟ್ಟಿರುವ ಎಲ್ಲ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿರುವ ಕಾರಣ ಒಳ್ಳೆಯ ಸ್ಥಾನ ಮಾನ ಸಿಕ್ಕಿದೆ, ಇದು ಕಾಂಗ್ರೆಸ್ನ ಪ್ರತಿಯೊಬ್ಬ
ಕಾರ್ಯಕರ್ತರಿಗೆ ಸಿಕ್ಕ ಗೌರವ ಎಂದರು.
ಎನ್.ಸಂಪಂಗಿ ಅಭಿಮಾನಿ ಬಳಗದ ಮುಖಂಡ ಮಾಸನಪಲ್ಲಿ ನಾರಾಯಣಸ್ವಾಮಿ ಮಾತನಾಡಿ, ಸರಳ, ಸಜ್ಜನಿಕೆ ವ್ಯಕ್ತಿ ಎಂಬ ಖ್ಯಾತಿ ಪಡೆದಿರುವ ಶಾಸಕ ಎನ್.ಸಂಪಂಗಿ ಅವರಿಗೆ ಕಾಂಗ್ರೆಸ್ ದೊಡ್ಡ ಜವಾಬ್ದಾರಿ ಕೊಟ್ಟು ಕಾರ್ಯಕರ್ತರ ಮನಸ್ಸು ಗೆದ್ದಿದೆ. 3 ದಶಕಗಳಿಂದ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿರುವ ನಮ್ಮ ನಾಯಕನಿಗೆ ಉನ್ನತ ಸ್ಥಾನ ನೀಡುವ ನಿರೀೆ ಕಾರ್ಯಕರ್ತರಲ್ಲಿ ಇತ್ತು ಎಂದರು.
ಮಾಜಿ ಸಚಿವ ಎನ್.ಶಿವಶಂಕರರೆಡ್ಡಿ, ನಂದಿ ಅಂಜಿನಪ್ಪ, ಬಾಗೇಪಲ್ಲಿ ೇತ್ರದ ಮುಖಂಡರಾದ ಎಸ್ಟಿಡಿ ಮೂರ್ತಿ, ಎ.ನಂಜುಂಡ, ಆಚೇಪಲ್ಲಿ ಗಂಗಿರೆಡ್ಡಿ, ಪೇರೆಸಂದ್ರ ದಯಾನಂದ್, ನರಸಿಂಹನಾಯ್ಡು, ರಮೇಶ್, ಚೇಳೂರು ಸೋಮಶೇಖರ್, ಕೊತ್ತಪಲ್ಲಿ ನಾರಾಯಣಸ್ವಾಮಿ, ಎಸ್. ಟಿ.ಸೀನಾ, ಚಲ್ಲಾ ಮಂಜುನಾಥ್, ಎಲ್ಐಸಿ ವೆಂಕಟರವಣಪ್ಪ, ಗುಡಿಬಂಡೆ ಆನಂದ್, ಮಿಸ್ಟ್ ನರಸಿಂಹಪ್ಪ, ರಸೂಲ್ ಖಾನ್, ಬಿಳ್ಳೂರು ಶ್ರೀನಿವಾಸ್ ಇದ್ದರು.