ಐ ಆ್ಯಮ್​ ಎ ಕಾಂಗ್ರೆಸ್​ ಮೆನ್​ !

Param_ABVP
Published on

ತುಮಕೂರು: ಎಬಿವಿಪಿ ವತಿಯಿಂದ ತಿಪಟೂರಿನಲ್ಲಿ ಆಯೋಜಿಸಿದ್ದ ವೀರರಾಣಿ ಅಬ್ಬಕ್ಕ ರಥಯಾತ್ರೆಯಲ್ಲಿ ಗೃಹ ಸಚಿವ ಡಾ.ಜಿ.ಪರಮೇಶ್ವರ್​ ಭಾಗವಹಿಸಿ ಪುಷ್ಪಾರ್ಚನೆ ಮಾಡಿ ಶುಭಹಾರೈಸಿದ್ದ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿ, ಕಾಂಗ್ರೆಸ್​ ಪಾಳಯದಲ್ಲಿ ತೀವ್ರ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ಸ್ವತ ಪರಮೇಶ್ವರ್​ ಸ್ಪಷ್ಟೀಕರಣ ನೀಡುವಂತಾಗಿದೆ.

ವೀಡಿಯೋ ವೈರಲ್​ ಬೆನ್ನಹಿಂದಲೇ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ಪ್ರತಿಕ್ರಿಯಿಸಿರುವ ಅವರು, ಯಾವುದೇ ಎಬಿವಿಪಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿಲ್ಲ, ತಿಪಟೂರಿನಲ್ಲಿ ಪ್ರಗತಿ ಪರಿಶೀಲನಾ ಸಭೆಗಾಗಿ ಹೋಗಿದ್ದೆ. ಸಭೆ ಮುಗಿಸಿಕೊಂಡು ವಾಪಸ್​ ಆಗುವಾಗ ರಾಣಿ ಅಬ್ಬಕ್ಕ ಅವರ ಮೆರವಣಿಗೆ ಬರುತ್ತಿತ್ತು. ಸ್ಥಳಿಯ ಶಾಸಕರಾದ ಷಡಕ್ಷರಿ ಅವರು ಜೊತೆಗಿದ್ದರು. ಹೂ ಸಮರ್ಪಿಸುವಂತೆ ಕೇಳಿಕೊಂಡ ಹಿನ್ನೆಲೆಯಲ್ಲಿ ಕಾರು ನಿಲ್ಲಿಸಿ ಹೂ ಹಾಕಿ ಬಂದಿದ್ದೇನೆಯಷ್ಟೇ ಎಂದರು.

ಇದನ್ನೇ ವಿವಾದ ಮಾಡುವುದಿದ್ದರೆ ಮಾಡಲಿ, ತೊಂದರೆ ಇಲ್ಲ. ನನ್ನ ಸೈದ್ಧಾಂತಿಕ ಬದ್ಧತೆಯನ್ನು ಯಾರು ಪ್ರಶ್ನೆ ಮಾಡಲು ಆಗುವುದಿಲ್ಲ. ನಾನು ನಿಷ್ಠಾವಂತ ಕಾಂಗ್ರೆಸ್​ ಸದಸ್ಯ. ನಾನು ಕಾಂಗ್ರೆಸ್​ ಸದಸ್ಯನಾಗಿಯೇ ಸಾಯುತ್ತೇನೆ. ಕೀಳು ರಾಜಕೀಯ ಮಾಡುವವರು ಮಾಡಲಿ. ಪರಮೇಶ್ವರ ಏನು ಅಂತ ಇಡೀ ರಾಜ್ಯದಲ್ಲಿ ಪ್ರತಿಯೊಬ್ಬರಿಗೆ ಗೊತ್ತಿದೆ. ಕಳೆದ 35 ವರ್ಷದಿಂದಲೂ ಜನರಿಗೆ ನನ್ನ ರಾಜಕಾರಣ ಏನೆಂಬುದು ಗೊತ್ತಿದೆ, ಅದನ್ನು ಮತ್ತೆ ಸಾಬೀತುಪಡಿಸಲು ಹೋಗುವುದಿಲ್ಲ ಎಂದು ಕೆಂಡಾಮಂಡಲರಾದರು.

ಎಬಿವಿಪಿ ಕೂಡ ಈ ಪ್ರಕರಣದ ಬಗ್ಗೆ ತಕ್ಷಣವೇ ಪ್ರತಿಕ್ರಿಯೆ ನೀಡಿದ್ದು ಸಚಿವರು ಸದ್ಭಾವನೆಯಿಂದ ನಡೆದುಕೊಂಡಿದ್ದನ್ನು ರಾಜಕೀಯಗೊಳಿಸುವ ಪ್ರಯತ್ನಕ್ಕೆ ಎಬಿವಿಪಿ ವಿರೋಧ ವ್ಯಕ್ತಪಡಿಸುತ್ತದೆ. ಎಬಿವಿಪಿ ಕಾರ್ಯಕ್ರಮ ಯಾವುದೇ ರಾಜಕೀಯ ಪಕ್ಷಕ್ಕೆ, ಜಾತಿ, ಮತ, ಪಂಥಗಳಿಗೆ ಸೀಮಿತವಾದುದಲ್ಲ ಎಂದು ತಿಳಿಸಿದೆ.

ಎಬಿವಿಪಿ ವತಿಯಿಂದ ರಾಣಿ ಅಬ್ಬಕ್ಕನವರ 500ನೇ ಜನ್ಮ ಜಯಂತಿ ಅಂಗವಾಗಿ ಎಬಿವಿಪಿ ಆಯೋಜಿಸಿದ್ದ ರಥಯಾತ್ರೆ ಸಂದರ್ಭದಲ್ಲಿ ತಿಪಟೂರು ಪ್ರವಾಸದಲ್ಲಿದ್ದ ಗೃಹ ಸಚಿವ ಡಾ.ಜಿ.ಪರಮೇಶ್ವರ ಪ್ರತಿಮೆಗೆ ಪುಷ್ಪರ್ಚಾನೆ ಮಾಡಿ ರಥಯಾತ್ರೆಗೆ ಶುಭಹಾರೈಸಿದರು. ಸಚಿವರು ಸದ್ಭಾವನೆಯಿಂದ ನಡೆದುಕೊಂಡಿದ್ದನ್ನು ರಾಜಕೀಯಗೊಳಿಸುವ ಪ್ರಯತ್ನಕ್ಕೆ ಎಬಿವಿಪಿ ವಿರೋಧ ವ್ಯಕ್ತಪಡಿಸುತ್ತದೆ. ಎಬಿವಿಪಿ ಕಾರ್ಯಕ್ರಮ ಯಾವುದೇ ರಾಜಕೀಯ ಪಕ್ಷಕ್ಕೆ, ಜಾತಿ, ಮತ, ಪಂಥಗಳಿಗೆ ಸೀಮಿತವಾದುದಲ್ಲ. ರಥೆಯಾತ್ರೆ ಭಾರತದ ವೀರ ಪರಂಪರೆ ಸ್ಮರಣೆಯೊಂದಿಗೆ ವಿದ್ಯಾರ್ಥಿಗಳಿಗೆ ಪ್ರೇರಣೆ ನೀಡುವುದಾಗಿದೆ ಎಂದು ವಿದ್ಯಾರ್ಥಿ ಪರಿಷತ್​ ಸ್ಪಷ್ಟಪಡಿಸುತ್ತದೆ. ಎಚ್​.ಕೆ.ಪ್ರವಿಣ್​ ಪ್ರಾಂತ ಕಾರ್ಯದರ್ಶಿ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net