ರೋಗ ನಿಯಂತ್ರಣಕ್ಕೆ ನೈರ್ಮಲ್ಯ ಮುಖ್ಯ

26TLR2
Published on

ತಲ್ಲೂರ: ಡೆಂ ನಿಯಂತ್ರಣಸಲು ಸಮುದಾಯದ ಪಾತ್ರ, ಪರಿಸರ ನೈರ್ಮಲ್ಯ ಬಹುಮುಖ್ಯವಾಗಿದೆ ಎಂದು ಯರಗಟ್ಟಿ ಬಿಇಒ ಐ.ಆರ್​.ಗಂಜಿ ಹೇಳಿದರು. ಗ್ರಾಮದ ಶ್ರೀ ಬಸವೇಶ್ವರ ಯುವಕ ಮಂಡಳ ಪ್ರೌಢಶಾಲೆಯಲ್ಲಿ ಡೆಂ ಜ್ವರ ಹಾಗೂ ಮಲೇರಿಯಾ ವಿರೋಧಿ ಮಾಸಾಚರಣೆ ಅಂಗವಾಗಿ ಈಚೆಗೆ ಹಮ್ಮಿಕೊಂಡಿದ್ದ ರೋಗದ ಕುರಿತು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮಳೆಗಾಲದಲ್ಲಿ ಸೊಳ್ಳೆಗಳ ಕಡಿತದಿಂದ ಮಲೇರಿಯಾ, ಡೆಂ ಜ್ವರ, ಚಿಕೂನ್​ ಗುನ್ಯಾ ಬರುವ ಸಾಧ್ಯತೆ ಇದೆ ಎಂದರು.ಸಮುದಾಯ ಆರೋಗ್ಯ ಸುರಣಾಧಿಕಾರಿ ಜಿ.ಪಿ.ಹೊಂಗಲ ಮಾತನಾಡಿ, ಮನೆಯ ಸುತ್ತ ಸ್ವಚ್ಛತೆ ಕಾಪಾಡಬೇಕು ಎಂದರು.ಮುಖ್ಯಶಿಕ ಆರ್​.ಪಿ.ದುಂಡನಕೊಪ್ಪ, ಎ.ಜೆ.ಕಾಂಬಳೆ, ಎಸ್​.ಆರ್​.ಬಡಿಗೇರ, ಜಿ.ಎ.ಕೊಟ್ರಶೆಟ್ಟಿ, ಎಲ್​.ವಿ.ಪಾಟೀಲ, ಪಿ.ಸಿ.ಸುಣಧೋಳಿ, ಎಸ್​.ಎಂ.ಪಟೇಲ, ನೀಲವ್ವ ಬೆನಕಟ್ಟಿ, ಮಹಾದೇವಿ ಬಾರ್ಕಿ, ಶೋಭಾ ಚುಳಕಿ, ಭೀಮವ್ವ ಭಜಂತ್ರಿ ಸೇರಿ ಆಶಾ ಕಾರ್ಯಕರ್ತೆಯರು ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net