ಕೊಲೆಗೀಡಾದ ಪತಿಯ ಅಗಲಿಕೆಯ ನೋವು ತಾಳಲಾರದೆ ಆತ್ಮಹತ್ಯೆ ಮಾಡಿಕೊಂಡ ಪತ್ನಿ

suicide
Published on

ಚಿಕ್ಕಬಳ್ಳಾಪುರ: ಒಂದು ತಿಂಗಳ ಹಿಂದಷ್ಟೇ ಪತಿಯ ಕೊಲೆಯಾಗಿತ್ತು, ಇದೀಗ ಪತ್ನಿಯೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಚಿಕ್ಕಬಳ್ಳಾಪುರದ ಮುಸ್ಟೂರು ಗ್ರಾಮದ ಸುನೀತಾ (22) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.

ಸುನೀತಾ ಅವರ ಪತಿ ವೆಂಕಟೇಶ್​ ಕಳೆದ ತಿಂಗಳಲ್ಲಿ ಹಳೆಯ ದ್ವೇಷದಿಂದಾಗಿ ಸ್ನೇಹಿತರಿಂದಲೇ ಕೊಲೆಯಾಗಿದ್ದರು. ಮಾತ್ರವಲ್ಲ, ಈ ಬಗ್ಗೆ ಪ್ರಕರಣ ದಾಖಲಾಗಿದ್ದರೂ ಆರೋಪಿಗಳು ರಾಜಾರೋಷವಾಗಿ ಓಡಾಡುತ್ತಿದ್ದರು. ಆರೋಪಿಗಳ ವಿರುದ್ಧ ಕಠಿಣ ಕ್ರಮ ಜರುಗಿರಲಿಲ್ಲ ಎಂದು ಸಂಬಂಧಿಕರು ಆರೋಪಿಸಿದ್ದಾರೆ.

ಆರೋಪಿಗಳು ಶಿಕ್ಷೆಗೆ ಒಳಗಾಗದೆ ಓಡಾಡುತ್ತಿದ್ದ ನೋವಿನ ಜತೆಗೆ ತುಂಬಾ ಪ್ರೀತಿಸುತ್ತಿದ್ದ ಪತಿಯ ಅಗಲಿಕೆಯ ನೋವು ಕೂಡ ಸುನೀತಾ ಅವರನ್ನು ಕಾಡುತ್ತಿತ್ತು. ಇವೆರಡರಿಂದ ತೀವ್ರವಾಗಿ ನೊಂದಿರುವ ಅವರು ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net