ಚಿಂತಾಮಣಿ: ಅಪಘಾತದಲ್ಲಿ ಪತ್ನಿಯ ತಲೆಗೆ ತೀವ್ರ ಪೆಟ್ಟು ಬಿದ್ದು ಹೆಚ್ಚಿನ ಚಿಕಿತ್ಸೆಗಾಗಿ 25 ಲಕ್ಷ ರೂ.ಗಳಿಗೂ ಹೆಚ್ಚು ಹಣದ ಅವಶ್ಯಕತೆ ಇದ್ದು ಆರ್ಥಿಕ ಸಹಾಯ ನೀಡುವಂತೆ ಚಿಂತಾಮಣಿ ನಗರದ ನೆಕ್ಕುಂದಿಪೇಟೆಯ ನಿವಾಸಿ ನಾಗೇಶ್ ದಾನಿಗಳಲ್ಲಿ ಮನವಿ ಮಾಡಿದ್ದಾರೆ. 2025ರ ಸೆ. 25 ರಂದು ಸಂಜೆ ನಾಗೇಶ್ ಅವರು ಪತ್ನಿ ಭಾಗ್ಯಮ್ಮ ಕೆ. ಮತ್ತು ಮಗಳ ಜತೆ ಶಿಡ್ಲಟ್ಟ ರಸ್ತೆಯಲ್ಲಿರುವ ಉಪ್ಪಾರಪೇಟೆ ದೇವಾಲಯಕ್ಕೆ ದ್ವಿಚಕ್ರವಾಹನದಲ್ಲಿ ತೆರಳುತ್ತಿದ್ದಾಗ ಉಪ್ಪಾರಪೇಟೆ&ಸೋರಪಲ್ಲಿ ಗೇಟ್ ಮಧ್ಯೆ ಅಪಘಾತಕ್ಕೆ ಈಡಾಗಿದ್ದಾರೆ. ಅಪಘಾತದಲ್ಲಿ ಭಾಗ್ಯಮ್ಮ ಅವರ ತಲೆಗೆ ತೀವ್ರ ಪೆಟ್ಟು ಬಿದ್ದು ಚಿಂತಾಮಣಿ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದ ನಂತರ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಸೆಂಟ್ ಜಾನ್ಸ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ.ಈಗಾಗಲೇ ಭಾಗ್ಯಮ್ಮಅವರಿಗೆ ಎರಡು ಬಾರಿ ಶಸಚಿಕಿತ್ಸೆ ನೆರವೇರಿಸಿದ್ದು 12 ಲಕ್ಷ ರೂ.ಗಳ ವೆಚ್ಚವನ್ನು ಭರಿಸಿರುವ ಅವರು ಆಸ್ಪತ್ರೆಯ ವೈದ್ಯರು ಹೆಚ್ಚಿನ ಚಿಕಿತ್ಸೆಗೆ ಸುಮಾರು 25 ಲಕ್ಷ ರೂ. ಬೇಕಾಗುವುದೆಂದು ವರದಿ ನೀಡಿದ್ದು ಅಷ್ಟು ಹಣ ಚಿಕಿತ್ಸೆಗೆ ಭರಿಸಲು ಆರ್ಥಿಕ ತೊಂದರೆ ಅನುಭವಿಸುತ್ತಿರುವ ನಾಗೇಶ್ ದಾನಿಗಳಿಂದ ಆರ್ಥಿಕ ನೆರವಿಗಾಗಿ ಮನವಿ ಮಾಡಿದ್ದಾರೆ. ಸಹಾಯ ಮಾಡುವವರು ನಾಗೇಶ್ ಮತ್ತು ಭಾಗ್ಯಮ್ಮಅವರ 9035273767 ಫೋನ್ ಪೇಗೆ ಪಾವತಿ ಮಾಡುವಂತೆ ಮನವಿ ಮಾಡಿದ್ದಾರೆ.