

ಬೆಂಗಳೂರು: ತಂಗಿಯ ನಿಶ್ಚಿತಾರ್ಥಕ್ಕೆ ಬಂದಿಲ್ಲವೆಂದು ಪತ್ನಿಗೆ ಚಾಕುವಿನಿಂದ ಇರಿದ ವ್ಯಕ್ತಿಯೊಬ್ಬ ಪೊಲೀಸರ ಅತಿಥಿಯಾಗಿದ್ದಾನೆ. ಈ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ.
ದಿವ್ಯಶ್ರೀ (26)ಗೆ ಚಾಕು ಇರಿತಕ್ಕೊಳಗಾದವಳು. ಜಯಪ್ರಕಾಶ್ (32) ಚಾಕು ಇರಿದ ಪತಿ. ತಂಗಿಯ ನಿಶ್ಚಿತಾರ್ಥಕ್ಕೆ ಬಂದಿಲ್ಲವೆಂದು ಪತ್ನಿಗೆ ಚಾಕುವಿನಿಂದ ಇರಿದಿದ್ದಾನೆ.
ಜಯಪ್ರಕಾಶ್ ಹಾಗೂ ದಿವ್ಯಶ್ರೀ ದಂಪತಿ ಬೆಂಗಳೂರಿನಲ್ಲಿ ನೆಲೆಸಿದ್ದರು. ಅನಾರೋಗ್ಯ ಹಿನ್ನೆಲೆ ಮನೆಯ ಖರ್ಚೆಲ್ಲ ಪತ್ನಿಯೇ ನೋಡಿಕೊಳ್ಳುತ್ತಿದ್ದರು. ಮೊದಲು ಮೂಡಲಪಾಳ್ಯದಲ್ಲಿ ಮನೆಮಾಡಿಕೊಂಡು ದಂಪತಿ ವಾಸವಿದ್ದರು. ಈ ಸಂದರ್ಭದಲ್ಲಿ ನಿನಗೆ ಅಕ್ರಮ ಸಂಬಂಧ ಇದೆ ಗಲಾಟೆ ಮಾಡುತ್ತಿದ್ದನು. ಈ ಗಲಾಟೆಯ ನಡುವೆಯೇ ದಂಪತಿ ಸುಂಕದಕಟ್ಟೆಗೆ ಶಿಫ್ಟ್ ಆಗಿದ್ದರು. ಇದೀಗ ತಂಗಿಯ ಎಂಗೆಜ್ಮೆಂಟ್‍ಗೆ ಬರ್ಲಿಲ್ಲ ಎಂದು ಜಯಪ್ರಕಾಶ್, ಪತ್ನಿಗೆ ಚಾಕುವಿನಿಂದ ಇರಿದಿದ್ದಾನೆ.
ಸುಂಕದಕಟ್ಟೆ ಬಳಿಯ ಸೊಲ್ಲಾಪುರದಮ್ಮ ದೇವಸ್ಥಾನ ಬಳಿ ಫೆಬ್ರವರಿ 15ರ ಬೆಳಗ್ಗೆ 9 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕಾಮಾಕ್ಷಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್‍ಐಆರ್ ದಾಖಲಾಗಿದ್ದು, ಆರೋಪಿ ಪತಿ ಜೈಲು ಪಾಲಾಗಿದ್ದಾನೆ.